ಸಾರಾಂಶ
ಮುಂದೆ ಗುರಿ ಇರಬೇಕು ಹಿಂದೆ ಗುರುವಿನ ಮಾರ್ಗದರ್ಶನ ಇರಬೇಕು. ಆಗ ಮಾತ್ರ ಮುಕ್ತಿ, ಮತ್ತು ಆದರ್ಶ ಹೊಂದಲು ಸಾಧ್ಯ ಎಂದು ಸಮಾಜ ಚಿಂತಕ ಶಿವಶಂಕರ್ ಅಭಿಪ್ರಾಯಪಟ್ಟರು. ಭಾರತೀಯ ಜೀವ ವಿಮಾ ನಿಗಮದ ಶಾಖಾ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಜೈ ಹೋ ರಾಮಲಲ್ಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ರಾಮಚಂದ್ರ ಪ್ರತಿಯೊಬ್ಬ ವ್ಯಕ್ತಿಗೆ ಆದರ್ಶ ಮರ್ಯಾದ ಪುರುಷೋತ್ತಮ ಎನಿಸಿಕೊಂಡರು ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಮುಂದೆ ಗುರಿ ಇರಬೇಕು ಹಿಂದೆ ಗುರುವಿನ ಮಾರ್ಗದರ್ಶನ ಇರಬೇಕು. ಆಗ ಮಾತ್ರ ಮುಕ್ತಿ, ಮತ್ತು ಆದರ್ಶ ಹೊಂದಲು ಸಾಧ್ಯ ಎಂದು ಸಮಾಜ ಚಿಂತಕ ಶಿವಶಂಕರ್ ಅಭಿಪ್ರಾಯಪಟ್ಟರು.ಭಾರತೀಯ ಜೀವ ವಿಮಾ ನಿಗಮದ ಶಾಖಾ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಜೈ ಹೋ ರಾಮಲಲ್ಲ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ರಾಮಚಂದ್ರ ಪ್ರತಿಯೊಬ್ಬ ವ್ಯಕ್ತಿಗೆ ಆದರ್ಶ ಮರ್ಯಾದ ಪುರುಷೋತ್ತಮ ಎನಿಸಿಕೊಂಡರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿ ಒಂದು ವರ್ಷದ ವಾರ್ಷಿಕೋತ್ಸವ ಆಯೋಜನೆ ಮಾಡಿದ ಜೀವವಿಮಾ ನಿಗಮದ ವಲಯ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ರಾಮಮಂದಿರ ನಿರ್ಮಾಣದ ವಾರ್ಷಿಕೋತ್ಸವದ ಅಂಗವಾಗಿ 2 ಪಾಲಿಸಿಗಳನ್ನು ನೀಡಿದವರಿಗೆ ಶ್ರೀ ರಾಮನ ವಿಗ್ರಹವನ್ನು ಕೊಡುಗೆಯಾಗಿ, ಬಹುಮಾನವಾಗಿ 93 ಜನ ಪ್ರತಿನಿಧಿಗಳಿಗೆ ನೀಡಿದರು. ಈ ಸಂದರ್ಭದಲ್ಲಿ ಶ್ರೀನಿವಾಸ್, ಜೈಪಾಲ್ ಬೆಟ್ನರ್, ರವಿಶಂಕರ್, ನಂದೀಶ್ ಬ್ಯಾಡಗಿ, ಲಿಂಗರಾಜು, ಸುಮಂತ್ , ರವೀಂದ್ರನಾಥ, ಮಾರಣಕೌಶಿ, ಲೋಕೇಶ್, ವಿಜಯ್, ಆರ್ ಎಮ್ ಲೋಕೇಶ್, ಶಿವಮೂರ್ತಿ, ರಾಜಶೇಖರ್ ಸೇತುರಾಮ್ ರಾಮಚಂದ್ರ, ಇತರರು ಹಾಜರಿದ್ದರು.