ಡಾ.ರಾಜ್‌, ಎಸ್‌ಪಿಬಿ ಸ್ಮರಣಾರ್ಥ ಗೀತ್‌ ಸಂಗಮ್‌ ಕಾರ್ಯಕ್ರಮ

| Published : Jul 20 2025, 01:15 AM IST

ಡಾ.ರಾಜ್‌, ಎಸ್‌ಪಿಬಿ ಸ್ಮರಣಾರ್ಥ ಗೀತ್‌ ಸಂಗಮ್‌ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಗಾಯಕರಾದ ಕವಿತಾ ಕಾಮತ್, ನಿತ್ಯಾನಂದ ಕಾಮತ್, ಡಾ .ಸುರೇಂದ್ರನ್, ಡಾ . ರವೀಂದ್ರ ಕುಮಾರ್, ಡಾ . ಭರತ್ ರಾಜ್, ಚಂದ್ರಶೇಖರ್, ಡಾ .ಭಾರತಿ, ಜಯಲಕ್ಷ್ಮಿನಾಯ್ಡು, ಅನ್ನು ಮೂರ್ನಾಡು, ಹಾಗೂ ವಿನಾಯಕ ಭಟ್ ಸಂಗೀತ ರಸದೌತಣ ನೀಡಿದರು. ಎಂ.ಆರ್‌. ಅನಿತಾ. ಕಾರ್ಯಕ್ರಮ ನಿರೂಪಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಜಗನ್ಮೋಹನ ಅರಮನೆಯಲ್ಲಿ ಡಾ.ರಾಜಕುಮಾರ್ ಹಾಗೂ ಎಸ್. ಪಿ. ಬಾಲಸುಬ್ರಮಣ್ಯಂ ಅವರ ಸ್ಮರಣಾರ್ಥ, ಜಿ.ಕವಿತಾ ಕಾಮತ್ ಅವರ ಸಾರಥ್ಯದಲ್ಲಿ ಗೀತ್ ಸಂಗಮ ತಂಡದವರಿಂದ ಎಂದು ಮರೆಯಲಾರದ ಆಯ್ದ ಕನ್ನಡ ಪ್ರಣಯ ಗೀತೆಗಳ ಮಧುರ ಸಂಗಮ ಕಾರ್ಯಕ್ರಮ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಶನಿವಾರ ಜರುಗಿತು.

ಗಾಯಕರಾದ ಕವಿತಾ ಕಾಮತ್, ನಿತ್ಯಾನಂದ ಕಾಮತ್, ಡಾ .ಸುರೇಂದ್ರನ್, ಡಾ . ರವೀಂದ್ರ ಕುಮಾರ್, ಡಾ . ಭರತ್ ರಾಜ್, ಚಂದ್ರಶೇಖರ್, ಡಾ .ಭಾರತಿ, ಜಯಲಕ್ಷ್ಮಿನಾಯ್ಡು, ಅನ್ನು ಮೂರ್ನಾಡು, ಹಾಗೂ ವಿನಾಯಕ ಭಟ್ ಸಂಗೀತ ರಸದೌತಣ ನೀಡಿದರು. ಎಂ.ಆರ್‌. ಅನಿತಾ. ಕಾರ್ಯಕ್ರಮ ನಿರೂಪಿಸಿದರು.

ಉದ್ಯಮಿ ಎಂ. ಜಗನ್ನಾಥ ಶೆಣೈ, ಕುಸುಮಾ ಶೆಣೈ, ವಸುಮತಿ ಶೆಣೈ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ, ಚಲನಚಿತ್ರ ನಿರ್ಮಾಪಕ ಎಸ್.ಎ. ಶ್ರೀನಿವಾಸ್‌, ಆದರ್ಶ ಸೇವಾ ಸಂಘದ ಅಧ್ಯಕ್ಷ ಎಸ್‌. ನಾಗರಾಜ್‌, ಜಗದಾಂಬ ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಡಾ.ಸುರೇಂದ್ರನ್‌, ಡಾ.ರವೀಂದ್ರಕುಮಾರ್‌, ಡಾ. ಭರತ್‌ ರಾಜ್‌. ಡಾ. ಭಾರತಿ ಹಾಗೂ ಶಿಕ್ಷಕಿ ಎಂ.ಆರ್‌. ಅನಿತಾ ಅವರನ್ನು

ಸನ್ಮಾನಿಸಲಾಯಿತು.

ಇತ್ತೀಚೆಗೆ ನಿಧನರಾದ ಹಿರಿಯ ಪತ್ರಿಕೋದ್ಯಮಿ ಕೆ. ಬಿ. ಗಣಪತಿ, ಕನ್ನಡದ ಮೇರುನಟಿ ಬಿ. ಸರೋಜಾದೇವಿ, ಉದ್ಯಮಿ ಹಾಗೂ ಕಲಾಪೋಷಕ ರವಿಗೌಡ ಅವರಿಗೆ ಶ್ರದ್ದಾಂಜಲಿ ಅರ್ಪಿಸಲಾಯಿತು.

ಬಾಕ್ಸ್‌

ಕೂಡಿ ಬಾಳೋಣ....!

ಕೂಡಿ ಬಾಳೋಣ, ಮುಂಜಾನೆ ಮೂಡಿದ ಹಾಗೆ, ಕೇಳದೆ ನಿಮಗೀಗ, ಶಿಲೆಗಳು ಸಂಗೀತವ ಹಾಡಿದೆ, ಏಕೋ ಏನೋ ಈ ನನ್ನ ಮನವು, ಜೊತೆಯಲಿ ಜೊತೆ ಜೊತೆಯಲಿ, ಜಗವೇ ಒಂದು ರಣರಂಗ, ಇಂದು ಆನಂದ ನಾ ತಾಳಲಾರೆ, ಟುವ್ವಿ ಟುವ್ವಿ ಎಂದು ಹಾಡುವ, ಚೆಲುವೆ ಓ ಚೆಲುವೆ, ಯಾವ ಕವಿಯೂ ಬರೆಯಲಾರ, ಗೆಳತಿ ಬಾರದು ಇಂಥ ಸಮಯ, ಕಲ್ಲೇಟಿಗಿಂತ ನಿನ್ನ ಕಣ್ಣೇಟು ಜೋರಾಗಿ, ಕನಸಲು ನೀನೆ ಮನಸಲು ನೀನೆ, ತಾರಾ ಓ ತಾರಾ, ಪ್ರೇಮದ ಹಾಡಿಗೆ, ಎಂದೆಂದೂ ನಿನ್ನನು ಮರೆತು, ಪ್ರೇಮ ಬರಹ ಕೋಟಿ ತರಹ, ಈ ಸಂಭಾಷಣೆ, ಚಂದಿರ ತಂದ ಹುಣ್ಣಿಮೆ ರಾತ್ರಿ, ಚೆಲುವ ಚೆಲುವ ಬೇಲೂರ ಚೆನ್ನ ಚೆಲುವ, ಆ ಮೋಡ ಬಾನಲ್ಲಿ, ಆಸೆಯ ಭಾವ, ಮೊದಲನೆ ದಿನವೆ ಒಲಿದೆ, ಕಣ್ಣಂಚಿನ ಈ ಮಾತಲಿ.... ಗೀತೆಗಳನ್ನು ಹಾಡಿ ಸಭಿಕರನ್ನು ರಂಜಿಸಿದರು.