ಸಾರಾಂಶ
ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ಅಧಿಕಾರ ಚುಕ್ಕಾಣಿ ಹಿಡಿದು ತಮ್ಮದೇ ಕಾನೂನು ಸ್ಥಾಪಿಸಿ, ಭಾರತೀಯರ ಮೇಲೆ ನಿರ್ಬಂಧ ಹೇರಿದರು. ಶಸ್ತ್ರಾಸ್ತ್ರ ನಿಷೇಧ ಕಾಯ್ದೆ ಜಾರಿಯಿಂದ ಭಾರತಿಯರು ರೊಚ್ಚಿಗೆದ್ದು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಮುಂದಾದರು.
ಕುಕನೂರು:
ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ನೆನೆಯುವ ಜತೆಗೆ ಸ್ವಾತಂತ್ರ್ಯ ಉಳಿಸುವ ಕಾರ್ಯವಾಗಬೇಕೆಂದು ತಹಸೀಲ್ದಾರ್ ಎಚ್. ಪ್ರಾಣೇಶ ಹೇಳಿದರು.ತಹಸೀಲ್ದಾರ್ ಕಚೇರಿಯಲ್ಲಿ ಜರುಗಿದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬ್ರಿಟಿಷರ ಆಳ್ವಿಕೆಯಿಂದ ಭಾರತ ಮುಕ್ತವಾಗಿ ಸ್ವಾತಂತ್ರ್ಯವಾಯಿತು ಎಂದರು.
ಉಪನ್ಯಾಸ ನೀಡಿದ ಉಪನ್ಯಾಸಕ ಭರಮಪ್ಪ ಸಾಬಳ್ಳಿ, ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ಅಧಿಕಾರ ಚುಕ್ಕಾಣಿ ಹಿಡಿದು ತಮ್ಮದೇ ಕಾನೂನು ಸ್ಥಾಪಿಸಿ, ಭಾರತೀಯರ ಮೇಲೆ ನಿರ್ಬಂಧ ಹೇರಿದರು. ಶಸ್ತ್ರಾಸ್ತ್ರ ನಿಷೇಧ ಕಾಯ್ದೆ ಜಾರಿಯಿಂದ ಭಾರತಿಯರು ರೊಚ್ಚಿಗೆದ್ದು ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಮುಂದಾದರು. ಮಂದಗಾಮಿ, ತೀವ್ರಗಾಮಿ, ಸೌಮ್ಯಗಾಮಿ ಮೂಲಕ ಕ್ರಾಂತಿಕಾರಿ, ಶಾಂತಿಕಾರಿಗಳಿಂದ ಸ್ವಾತಂತ್ರ್ಯ ದೊರೆಯಿತು ಎಂದರು.ಮುಖಂಡ ರಷೀದ್‌ಸಾಬ್ ಹಣಜಗೇರಿ ಮಾತನಾಡಿ, ಸ್ವಾತಂತ್ರ್ಯ ಫಲವನ್ನು ಕಳೆದುಕೊಳ್ಳುವ ಭೀತಿ ಮೂಡಿದೆ. ಭ್ರಷ್ಟಾಚಾರ, ಅತ್ಯಾಚಾರ, ಹಿಂಸೆ, ಮೋಸಗಾರಿಕೆ ಘಟನೆ ಮಾರಕವಾಗಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಇರದ ಜಾತಿ ಇದು ಪಿಡುಗಾಗಿ ರಾಷ್ಟ್ರಕ್ಕೆ ಚ್ಯುತಿ ಆಗಿದೆ. ಪ್ರಾಮಾಣಿಕ ಅಳಿಲು ಸೇವೆಯಿಂದ ಭಾರತ ವಿಶ್ವಗುರು ಆಗಲು ಸಾಧ್ಯವಿದೆ ಎಂದು ಹೇಳಿದರು.
ಜೆಸ್ಕಾಂ ಎಇಇ ನಾಗರಾಜ, ತಾಪಂ ಮ್ಯಾನೇಜರ್ ಹನುಮಂತಪ್ಪ ನಾಯಕ ಮಾತನಾಡಿದರು. ನಂತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.ಗ್ರೇಡ್-೨ ತಹಸೀಲ್ದಾರ್ ಮುರುಳಿಧರರಾವ್ ಕುಲಕರ್ಣಿ, ಪಪಂ ಅಧ್ಯಕ್ಷೆ ಲಲಿತಮ್ಮ ಯಡಿಯಾಪೂರ, ಪಪಂ ಮುಖ್ಯಾಧಿಕಾರಿ ನಬೀಸಾಬ್ ಕಂದಗಲ್ಲ, ಪಪಂ ಸದಸ್ಯ ಜಗನ್ನಾಥ ಭೋವಿ, ರಷೀದ್‌ಸಾಬ್ ಹಣಜಗೇರಿ, ಶಿರಸ್ತೇದಾರ ಮಹಮ್ಮದ್ ಮುಸ್ತಾಫ, ಎಸ್.ಎಂ. ಹಿರೇಮಠ, ಕಂದಾಯ ನಿರೀಕ್ಷಕ ರಂಗನಾಥ, ಮುಖ್ಯೋಪಾಧ್ಯಾಯ ಸೋಮಶೇಖರ ನಿಲೋಗಲ್, ಬಿಆರ್‌ಸಿ ಫೀರಸಾಬ್ ದಫೇದಾರ ಇದ್ದರು.