ಸಾರಾಂಶ
ಮೈಸೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲೆಕ್ಕಾಚಾರ ತೆಲೆಕೆಳಗಾಗಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯನ್ನೆ ಸೋಲಿಸಲಾಗಲಿಲ್ಲ. ಈಗ ಬಿಜೆಪಿ- ಜೆಡಿಎಸ್ ಒಗ್ಗೂಡಿದ್ದು, ಕಾಂಗ್ರೆಸ್‌ಗೆ ಗೆಲುವು ಅಸಾಧ್ಯವಾಗಿದ್ದು, ಸಿದ್ದರಾಮಯ್ಯ ಅವರು ತೀವ್ರ ಮುಖಭಂಗ ಅನುಭವಿಸುವರು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ರೋಣ: ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಸಿಎಂ ಸಿದ್ದರಾಮಯ್ಯ ಅವರ ಯಾವುದೇ ರೀತಿಯ ರಣತಂತ್ರ, ಕುತಂತ್ರ ಮಾಡಿದರೂ ನಡೆಯುವುದಿಲ್ಲ. ಅಲ್ಲಿ ಗೆಲ್ಲೊದು ಬಿಜೆಪಿ - ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿ ಎಂಬುದು ಈಗಾಗಲೇ ಸ್ಪಷ್ಟವಾಗಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಗುರುವಾರ ತಾಲೂಕಿನ ಚಿಕ್ಕಮಣ್ಣೂರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಮೈಸೂರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲೆಕ್ಕಾಚಾರ ತೆಲೆಕೆಳಗಾಗಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯನ್ನೆ ಸೋಲಿಸಲಾಗಲಿಲ್ಲ. ಈಗ ಬಿಜೆಪಿ- ಜೆಡಿಎಸ್ ಒಗ್ಗೂಡಿದ್ದು, ಕಾಂಗ್ರೆಸ್‌ಗೆ ಗೆಲುವು ಅಸಾಧ್ಯವಾಗಿದ್ದು, ಸಿದ್ದರಾಮಯ್ಯ ಅವರು ತೀವ್ರ ಮುಖಭಂಗ ಅನುಭವಿಸುವರು. ಕೆ. ಈಶ್ವರಪ್ಪ ಅವರ ಮುನಿಸನ್ನು ಶೀಘ್ರದಲ್ಲಿಯೇ ತಣಿಸಿ, ಅವರ ಮನವೊಲಿಸಲಾಗುವುದು. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್‌ಗೆ ಒಂದೇ ಒಂದು ಸೀಟು ಗೆಲ್ಲಲು ಆಗುವುದಿಲ್ಲ ಎಂದರು.
ಈ ವೇಳೆ ಮಾಜಿ ಸಚಿವ ಕಳಕಪ್ಪ ಬಂಡಿ, ಅಶೋಕ ನವಲಗುಂದ, ಬಿಜೆಪಿ ರೋಣ ಮಂಡಲ ಅಧ್ಯಕ್ಷ ಮುತ್ತಣ್ಣ ಕಡಗದ, ಬಸವಂತಪ್ಪ ತಳವಾರ, ಅನಿಲ ಪಲ್ಲೇದ, ಗ್ರಾಪಂ ಮಾಜಿ ಉಪಾಧ್ಯಕ್ಷ ಶೇಖರಗೌಡ ಪಾಟೀಲ, ಎಂ.ಬಿ. ಸಜ್ಜನ, ಎಂ.ಬಿ. ಚೌಡರಡ್ಡಿ, ತೋಟಪ್ಪ ಉಳ್ಳಾಗಡ್ಡಿ, ನಿಂಗಪ್ಪ ಮಾದರ, ಅಯ್ಯಪ್ಪ ಮಾದರ, ಜೆ.ಎಸ್. ಜುಮ್ಮಣ್ಣವರ ಮುಂತಾದವರಿದ್ದರು.