ಸಾರಾಂಶ
ನರೇಂದ್ರ ಮೋದಿಯವರ ಪಟ್ಟಾಭಿಷೇಕ ನಿಮಿತ್ತ ಸಂಗಾನಟ್ಟಿಯಲ್ಲಿ ಅಭಿಮಾನಿಗಳು ಮಾವಿನ ಹಣ್ಣಿನ ಸೀಕರಣಿ ಮತ್ತು ಹೋಳಿಗೆ ಮಾಡಿಸಿ ಬಡಿಸಿದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ನರೇಂದ್ರ ಮೋದಿ ಮೂರನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ದಿನದಂದು ಸಂಗ್ಯಾನಟ್ಟಿ ಗ್ರಾಮದ ಜನರೆಲ್ಲ ಓಣಿಗಳನ್ನು ತಳಿರು, ತೋರಣಗಳಿಂದ ಸಿಂಗರಿಸಿ, ಹೋಮ, ಹವನ, ಪೂಜೆ ಸಲ್ಲಿಸಿ ಸಂಭ್ರಮಿಸಿದರು.ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವಿಕರಿಸುತ್ತಿದ್ದರಿಂದ ಸಂಜೆ ನಮೋ ಅಭಿಮಾನಿಗಳು ಸಂಗ್ಯಾನಟ್ಟಿ ಗ್ರಾಮಸ್ಥರು ಸೇರಿ ಮಲ್ಲಯ್ಯನ ದೇವಸ್ಥಾನದಲ್ಲಿ ಮಾವಿನ ಹಣ್ಣಿನ ಸೀಕರಣಿ ಮತ್ತು ಹೋಳಿಗೆ ಮಾಡಿಸಿ ಊರಿನ ಜನರಿಗೆ ಬಡಿಸಿದರು.
ಈ ಸಂಧರ್ಭದಲ್ಲಿ ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ, ಜಿಪಂ ಮಾಜಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ, ಪರಪ್ಪ ಹುದ್ದಾರ, ಮಾರುತಿ ಕರೋಶಿ, ಮಹಾಲಿಂಗ ಇಟ್ನಾಳ, ಸಿದ್ದುಗೌಡ ಪಾಟೀಲ, ಶಿವನಗೌಡ ಪಾಟೀಲ, ಬಸವರಾಜ ನಾಗನೂರ, ಉಮೇಶ ಮೇಟಿ, ಮುತ್ತಪ್ಪ ಯಲ್ಲಟ್ಟಿ, ರಾಜು ಸೈದಾಪುರ, ಭೀಮಪ್ಪ ಉಳ್ಳಾಗಡ್ಡಿ, ಸಂಜು ಬಾರಕೋಲ, ಬನಪ್ಪಗೌಡ ಪಾಟೀಲ ಲಕ್ಷ್ಮಣ ಇಟ್ನಾಳ, ದುಂಡವ್ವ ತೆಳಗಡೆ, ಗೋಪಾಲ ನಡುವಿನಮನಿ, ದುರ್ಗಪ್ಪ ಗಾಡೀಕರ, ಚನ್ನಗಿರಿ ತಳಗಡೆ, ಪ್ರಕಾಶ ಉಳ್ಳಾಗಡ್ಡಿ, ಸೇರಿ ಹಲವರು ಉಪಸ್ಥಿತರಿದ್ದರು.