ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜವು ಈ ನಾಡಿನ, ಈ ಮಣ್ಣಿನ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಉಳಿಸಿ ಬೆಳೆಸುವ ಉದ್ದೇಶದಿಂದ 2017ನೆ ಇಸವಿಯಲ್ಲಿ ಆರಂಭಿಸಿದ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮ ಯಶಸ್ವೀ ಒಂಭತ್ತು ವರ್ಷಗಳನ್ನು ಪೂರೈಸಿದ್ದು, ಪ್ರಸಕ್ತ ವರ್ಷ ಹತ್ತನೆ ವರ್ಷಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ನಡೆದ ಪೂರ್ವ ಭಾವಿ ಸಭೆಯಲ್ಲಿ ಕೆಳಗಿನ ತೀರ್ಮಾನ ಕೈಗೊಳ್ಳಲಾಯಿತು.
ಶ್ರೀಮಂಗಲ ; ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜವು ಈ ನಾಡಿನ, ಈ ಮಣ್ಣಿನ ಸಂಸ್ಕೃತಿಯನ್ನು ಬಿಂಬಿಸುವ ಹಾಗೂ ಉಳಿಸಿ ಬೆಳೆಸುವ ಉದ್ದೇಶದಿಂದ 2017ನೆ ಇಸವಿಯಲ್ಲಿ ಆರಂಭಿಸಿದ ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮ ಯಶಸ್ವೀ ಒಂಭತ್ತು ವರ್ಷಗಳನ್ನು ಪೂರೈಸಿದ್ದು, ಪ್ರಸಕ್ತ ವರ್ಷ ಹತ್ತನೆ ವರ್ಷಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ನಡೆದ ಪೂರ್ವ ಭಾವಿ ಸಭೆಯಲ್ಲಿ ಕೆಳಗಿನ ತೀರ್ಮಾನ ಕೈಗೊಳ್ಳಲಾಯಿತು. 18ರಂದು ಪೂರ್ವಾಹ್ನ 10 ಗಂಟೆಗೆ ಕೊಡವ ಸಮಾಜದ ವೇದಿಕೆಯಲ್ಲಿ ಕಣಿಪೂಜೆ ಹಾಗೂ ಕಾವೇರಿ ತೀರ್ಥ ಪೂಜೆ ಮಾಡಿ ಭಕ್ತಾಧಿಗಳಿಗೆ ಪವಿತ್ರ ಕಾವೇರಿ ತೀರ್ಥ ವಿತರಿಸಲಾಗುವುದು. ನಂತರ ಸಂಜೆ 6 ಗಂಟೆಗೆ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯರಾದ ಮಂಡೇಪಂಡ ಸುಜ ಕುಶಾಲಪ್ಪ, ಕೊಡಗು ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ, ಕಾಫಿ ಬೆಳೆಗಾರರು ಹಾಗೂ ದಾನಿಗಳಾದ ಅಜ್ಜಮಡ ಮನು ಮುತ್ತಪ್ಪ ಭಾಗವಹಿಸಲಿದ್ದಾರೆ. ಈ ಸಂದರ್ಭ ಸಂಭ್ರಮ ಪೊಮ್ಮಕ್ಕಡ ಕೂಟ ಹಾಗೂ ಟಿ.ಶೆಟ್ಟಿಗೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಕಲಾವಿದರಿಂದ ಸ್ವಾತಂತ್ರ್ಯ ಮಾಪಡೆಲ್ ಕೊಡವ ಮೂಪಂಗ ಶೀರ್ಷಿಕೆಯ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 19ರಂದು ಸಂಜೆ 6 ಗಂಟೆಗೆ ಆಂಗೋಡ್ ಕೇರಿ ಪೊಮ್ಮಕ್ಕಡ ಕೂಟದ ಕಲಾವಿದರಿಂದ ಆರೋಗ್ಯಕೊತ್ತ ತೀನಿ - ಬದ್''''''''''''''''ಕ್''''''''''''''''ಲಿಕ್ಕು ನೆಮ್ಮದಿ ಎಂಬ ಶೀರ್ಷಿಕೆಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
20ರಂದು ಸಂಜೆ 6 ಗಂಟೆಗೆ ಪೊನ್ನಂಪೇಟೆ ಕೊಡವ ಸಮಾಜದ ಕಲಾವಿದರಿಂದ ಆರೋಡ ಮಣ್ಣ್''''''''ಲ್ ಗುರುಕಾರೋಣಂಡ ಬಲ " ಎಂಬ ಶೀರ್ಷಿಕೆಯ ನೃತ್ಯರೂಪಕ ಪ್ರದರ್ಶನ ನಡೆಯಲಿದೆ.21ರಂದು ಸಂಜೆ 6 ಗಂಟೆಗೆ ಬೆಕ್ಕೆಸೊಡ್ಲೂರ್ ಮಂದತವ್ವ ಸಾಂಸ್ಕೃತಿಕ ತಂಡದ ಕಲಾವಿದರಿಂದ ಪುರಾಣತ್ರ ನಳತ್ ಕೊಡವಡ ಬಾಳ್ ಎಂಬ ವಿಷಯಾಧಾರಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಅಡುಗೆ ಸ್ಪರ್ಧೆ: 22ರಂದು ಸಂಜೆ 5 ಗಂಟೆಗೆ ಮಹಿಳೆಯರಿಗೆ ಅಡುಗೆ ಸ್ಪರ್ಧೆ ನಡೆಯಲಿದ್ದು, ವಿಜೇತರಿಗೆ ಆಕರ್ಷಕ ಪ್ರಥಮ, ದ್ವಿತೀಯ, ತೃತೀಯ ಹಾಗೂ ಸಮಾಧಾನಕರ ಬಹುಮಾನ ನೀಡಲಾಗುವುದು. ಸಂಜೆ 5-30ಕ್ಕೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವತಿಯಿಂದ ಪುಸ್ತಕ ಪತ್ತಾಯ ಹಾಗೂ ದುಡಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಗೆ ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿಗಳಿಂದ ಕೊಡವ ಜಾನಪದ ಚಂಗ್ರಾಂದಿರ ಬೋಜ " ಎಂಬ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.23 ರಂದು ಸಂಜೆ 6 ಗಂಟೆಗೆ ಶ್ರೀಮಂಗಲ ಜೆ.ಸಿ.ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಕೊಡವಡ ನಮ್ಮೆ ನಾಳ್ - ಬೀರ್ಯ ಬರ್ಕತ್ ಎಂಬ ಶೀರ್ಷಿಕೆಯ ವಿಶೇಷ ಪ್ರದರ್ಶನ ನಡೆಯಲಿದೆ.
24 ರಂದು ಸಂಜೆ ಶ್ರೀಮಂಗಲ ನಾಡ್ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಕಲಾವಿದರಿಂದ ಕೊಡವಾಮೆಲ್ ಪಳೆಯಾಮೆರ ನಡ್ಪು ಎಂಬ ಶೀರ್ಷಿಕೆಯ ಕೊಡವ ಮೂಲ ಸಂಸ್ಕೃತಿಯ ವೈಭವ ಸಾರುವ ಸಾಂಸ್ಕೃತಿಕ ಪ್ರದರ್ಶನ ನಡೆಯಲಿದೆ.25 ರಂದು ಸಂಜೆ 6 ಗಂಟೆಗೆ ಬಾಡಗರಕೇರಿ ಮಹಿಳಾ ಸಮಾಜದ ಸದಸ್ಯೆಯರಿಂದ ಪ್ರಕೃತಿ-ಪರಿಸರಕೊತ್ತ ಎಂಗಡ ಬದ್ ಕ್ ಎಂಬ ವಿಷಯಾಧಾರಿತ ಸಾಂಸ್ಕೃತಿಕ ಪ್ರದರ್ಶನ ನಡೆಯಲಿದೆ.ಕೊಡವ ಉಡುಗೆ ಪ್ರದರ್ಶನ: 26 ರಂದು ಸಂಜೆ ಟಿ.ಶೆಟ್ಟಿಗೇರಿ ರೂಟ್ಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದಕೊಡವ ಪೊರಪಾಡ್- ಮಿನ್ನುವ ಪದೀಚ ಎಂಬ ಕೊಡವ ಸಂಸ್ಕೃತಿಯ ಮೆರುಗಿನ ಉಡುಗೆ ಆಭರಣಗಳನ್ನೊಳಗೊಂಡ ವಿಶಿಷ್ಟ ಕಾರ್ಯಕ್ರಮ ನಡೆಯಲಿದೆ.
27ರಂದು ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೊಡಗು-ಮೈಸೂರು ಲೋಕ ಸಭಾ ಸದಸ್ಯರಾದ ಯದುವೀರ್ ಒಡೆಯರ್, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಚೆಪ್ಪುಡಿರ ಅರುಣ್ ಮಾಚಯ್ಯ, ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ದಾನಿಗಳಾದ ಕೈಬಿಲೀರ ಪ್ರಭು ಉತ್ತಯ್ಯರವರು ಭಾಗವಹಿಸಲಿದ್ದಾರೆ. ಈ ಸಂದರ್ಭ ಖ್ಯಾತ ಗಾಯಕರಾದ ಚೆಕ್ಕೇರ ಪಂಚಮ್ ತ್ಯಾಗರಾಜ್, ಬಟ್ಟಿಯಂಡ ಲಿಖಿತ ಪಳಂಗಪ್ಪ, ಮಾಳೇಟಿರ ಅಜಿತ್ ಪೂವಣ್ಣ ಸೇರಿದಂತೆ ವಿವಿಧ ಗಾಯಕರ ಕೊಡವ ಆರ್ಕೆಸ್ಟ್ರ ಹಾಗೂ ತಿಂಗಕೊರ್ ಮೊಟ್ಟ್ ತಲಕಾವೇರಿಕ್ ಕೂಟದ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಪ್ರತೀ ದಿನ ಜನ ಪ್ರತಿನಿಧಿಗಳು ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.