ಸಾರಾಂಶ
ಕಂಪ್ಲಿ: ಪಟ್ಟಣದ ಹೊಸ ಬಸ್ ನಿಲ್ದಾಣದ ಬಳಿಯ ಶ್ರೀ ಬೀರೇಶ್ವರ ಸಹಕಾರ ಸಂಘ ಯಕ್ಸಂಬಾ ನೂತನ ಶಾಖೆಯನ್ನು ಎಮ್ಮಿಗನೂರಿನ ಹಂಪಿಸಾವಿರ ದೇವರ ಮಠದ ವಾಮದೇವ ಶಿವಾಚಾರ್ಯರು ಉದ್ಘಾಟಿಸಿದರು.
ಮುಖ್ಯ ಕಚೇರಿ ಚೇರ್‌ಮನ್ ಜಯಾನಂದ್ ಜಾಧವ ಮಾತನಾಡಿ, ನಮ್ಮ ಶ್ರೀ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಯಕ್ಸಂಬಾ, ಮಹಾರಾಷ್ಟ್ರ ಹಾಗೂ ಗೋವಾ ಸೇರಿ ಒಟ್ಟಾರೆ ದೇಶದಲ್ಲಿ 211 ಶಾಖೆಗಳನ್ನು ಹೊಂದಿದೆ. ₹3957 ಕೋಟಿ ಠೇವಣಿ, ₹2962 ಕೋಟಿ ಸಾಲ ಸೌಲಭ್ಯ ಕಲ್ಪಿಸಿದ್ದು, ₹40.55 ಕೋಟಿ ನಿವ್ವಳ ಲಾಭ ಗಳಿಸಿದೆ. ಅಲ್ಲದೇ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುವಲ್ಲಿ ಬೀರೇಶ್ವರ ಸಹಕಾರ ಸಂಘ ಮುಂಚೂಣಿಯಲ್ಲಿದೆ ಎಂದರು.ಇಂದಿನ ಆಧುನಿಕ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಅರ್ಥವ್ಯವಸ್ಥೆಗೆ ಅನುಗುಣವಾಗಿ ನಮ್ಮ ಸಂಸ್ಥೆಯ 212 ಶಾಖೆಗಳನ್ನು ಸ್ವಂತ 2 ಡಾಟಾ ಸೆಂಟರ್‌ಗಳ ಮೂಲಕ ಕೋರ್ ಸಿಸ್ಟಮ್ ಅಳವಡಿಸಲಾಗಿದೆ. ನಗರ ಪ್ರದೇಶಗಳಲ್ಲಿ ಸಿಗತಕ್ಕ ಸೇವೆಗಳನ್ನು ಗ್ರಾಮೀಣ ಮಟ್ಟದಲ್ಲಿನ ಜನರಿಗೆ ಒದಗಿಸುವ ಉದ್ದೇಶದಿಂದ ಮತ್ತು ಅವರ ಬೇಡಿಕೆಗಳಿಗೆ ಅನುಗುಣವಾಗಿ ನಮ್ಮ ಸಂಸ್ಥೆಯ ಮುಖಾಂತರ ಒಂದೇ ಸೂರಿನಡಿ ವಿವಿಧ ಆರ್ಥಿಕ ಸೇವೆಗಳನ್ನು ಒದಗಿಸಲಾಗಿದೆ. ಈ ನಿಟ್ಟಿನಲ್ಲಿ ವೆಸ್ಟರ್ನ್ ಯೂನಿಯನ್, ರಿಯಾಮನಿ, ಮನಿಗ್ರಾಮ, ಟ್ರಾನ್ಸ್ ಫಾಸ್ಟ್ ಮನಿ ಟ್ರಾನ್ಸಫರ್, ಲೈಫ್, ಆರೋಗ್ಯ ಮತ್ತು ಜನರಲ್ ಇನ್ಸೂರನ್ಸ್, ಮ್ಯುಚ್ಯುವಲ್ ಫಂಡ್ಸ್, ಶೇರ್ ಟ್ರೇಡಿಂಗ್, ಪ್ಯಾನ್‌ಕಾರ್ಡ್, ವಿದೇಶಿ ಹಣ ವಿನಿಮಯ, ಇವಲ್ಲದೇ ಇನ್ನುಳಿದ ವಿಮಾನ, ರೈಲು, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ಟಿಕೆಟ್ ಬುಕಿಂಗ್, ಇ-ಸ್ಟ್ಯಾಂಪ್, ಸೇಫ್ ಡಿಪಾಜಿಟ್ ಲಾಕರ್, ಡಿಟಿಎಚ್ ಮತ್ತು ಮೊಬೈಲ್ ರಿಚಾರ್ಜ್ ಅಲ್ಲದೆ ಬ್ಯಾಂಕ್‌ಗಳ ಸಹಯೋಗದೊಂದಿಗೆ ಎಟ್ ಪಾರ್ ಚೆಕ್, ಆರ್‌ಟಿಜಿಎಸ್ ಮತ್ತು ಎನ್‌ಐಎಫ್‌ಟಿ ಇತ್ಯಾದಿ ಸೇವೆಗಳನ್ನು ಸಂಸ್ಥೆಯು ಒದಗಿಸುತ್ತಿದೆ. ನಮ್ಮ ಸಂಸ್ಥೆಯ ಸದಸ್ಯರಿಗೆ ಮಿನಿ ಎಟಿಎಂ ಸೌಲಭ್ಯ ಒದಗಿಸಲಾಗುತ್ತಿದ್ದು, ಸದಸ್ಯರು ಯಾವುದೇ ಬ್ಯಾಂಕಿನ ಎಟಿಎಂ ಡೆಬಿಟ್ ಕಾರ್ಡ್ ಬಳಸಿ, ನಮ್ಮ ಸಂಸ್ಥೆಯಲ್ಲಿ ಹಣ ಪಡೆಯಬಹುದಾಗಿದೆ. ಇದನ್ನು ಆರಂಭದಲ್ಲಿ ಕೆಲವು ಆಯ್ದ ಶಾಖೆಗಳಲ್ಲಿ ಪ್ರಾಯೋಗಿಕವಾಗಿ ಈಗಾಗಲೇ ಪ್ರಾರಂಭಿಸಲಾಗಿದೆ. ಮುಂದಿನ ದಿನಮಾನಗಳಲ್ಲಿ ಎಲ್ಲ ಶಾಖೆಗಳಿಗೆ ಈ ಸೌಲಭ್ಯವನ್ನು ವಿಸ್ತರಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.
ಕಲ್ಮಠದ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಮಾಜಿ ಅಧ್ಯಕ್ಷ ಬಿ. ಸಿದ್ದಪ್ಪ, ಪಿ. ಬ್ರಹ್ಮಯ್ಯ, ರೈತ ಮುಖಂಡರಾದ ಕಟ್ಟೆ ಶಂಕರ, ನಿರ್ದೇಶಕ ಯಾಸೀನ್ ತಾಂಬೂಳೆ, ಬಿಪಿನಚಂದ್ರ ಎಸ್. ದೇಶಪಾಂಡೆ, ಪ್ರಕಾಶ ಆರ್. ಶಿಂದೆ, ಸಿದ್ದವೀರ ಕೆ. ಖಜ್ಜನ್ನವರ, ಅಪ್ಪಾ ಸಾಹೇಬ ಎಸ್. ಜೊಲ್ಲೆ, ಶಾಖಾ ವ್ಯವಸ್ಥಾಪಕ ಈರಣ್ಣ ಶೆಗುಣಿಸಿ, ಡಿಜಿಎಂ ಆರ್.ಜಿ. ಕುಂಬಾರ, ಎಸ್.ಕೆ. ಮಾಲೀಕರ, ಎಜಿಎಂ ಶೇಖರ ಪಾಟೀಲ್ ಇತರರಿದ್ದರು.