ಸಾರಾಂಶ
In the caste column write Bhovi, Vaddara: R. Shivananda
ದಾವಣಗೆರೆ: ಒಳ ಮೀಸಲಾತಿಗೆ ಸಂಬಂಧ ಜಾತಿ ಗಣತಿ ಸಮೀಕ್ಷೆ ಸಂಬಂಧ ಮಂಗಳವಾರ ಚಿಕ್ಕಮ್ಮಣ್ಣಿ ದೇವರಾಜ್ ಅರಸ್ ಬಡಾವಣೆಯ ಶ್ರೀ ಗುರು ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ಕರಪತ್ರಗಳಿಗೆ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ಮನೆ ಮನೆಗೆ ತೆರಳಿ ಭೋವಿ, ವಡ್ಡರ ಸಮಾಜದ ಬಂಧುಗಳಿಗೆ ಮನೆಗಳಿಗೆ ಜನ ಗಣತಿ ಮಾಡಲು ಬಂದಾಗ ಸರಿಯಾದ ಮಾಹಿತಿಯೊಂದಿಗೆ ಜಾತಿ ಕಾಲಂನಲ್ಲಿ ಭೋವಿ (ಕೋಡ್ ಸಂಖ್ಯೆ:023.1 ಅಥವಾ 023.4 ಯಲ್ಲಿ ವಡ್ಡರ ಎಂದು ಕಡ್ಡಾಯವಾಗಿ ನಮೂದಿಸತಕ್ಕದೆಂದು ಪಾಲಿಕೆಯ ಮಾಜಿ ಸದಸ್ಯ ಆರ್.ಶಿವಾನಂದ ತಿಳಿಸಿದರು.
ವಕೀಲ ಹನುಮಂತಪ್ಪ ಮಾತನಾಡಿ, ಸಮೀಕ್ಷೆಯು 3 ಹಂತಗಳಲ್ಲಿ ನಡೆಯುತ್ತಿದ್ದು, 1ನೇ ಹಂತ ಮನೆ ಮನೆ ಭೇಟಿ ನೀಡಿ, ಮೇ 5 ರಿಂದ 17ರ ವರೆಗೆ, ಮತಗಟ್ಟೆ, ಪ್ರದೇಶವಾರು ಶಿಬಿರ ಸಮೀಕ್ಷೆಯನ್ನು ಮೇ19 ರಿಂದ 21ರ ವರೆಗೆ ಕೈಗೊಳ್ಳುವುದು. ನಂತರ ಸ್ವಯಂ ಘೋಷಣೆ(ಆನ್‌ಲೈನ್ ಮುಖಾಂತರ) ಮೇ 19 ರಿಂದ 23 ರ ವರೆಗೆ ಸಮೀಕ್ಷೆ ಕಾರ್ಯ ನಡೆಯುತ್ತದೆ. ಇದರಲ್ಲಿ ಭೋವಿ ಸಮಾಜದ ಎಲ್ಲರೂ ತಮ್ಮ ಹಕ್ಕುಗಳ ಸೌಲಭ್ಯವನ್ನು ಸಂವಿಧಾನಾತ್ಮಕವಾಗಿ ಪಡೆಯುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು. ಭೋವಿ ಸಮಾಜದ ಜಿಲ್ಲಾಧ್ಯಕ್ಷ ಪಿ.ಶ್ರೀನಿವಾಸ, ಸಮಾಜದ ಮುಖಂಡರಾದ ತಿಮ್ಮಣ್ಣ, ಪಾಲಾಕ್ಷಪ್ಪ, ವಿರೇಶ್, ನಾಗೇಶ್, ಮಂಜುನಾಥ್ ಟಿ.ಎಚ್, ಗೋವಿಂದ್, ಹರೀಶ್, ಪ್ರದೀಪ್ ಇದ್ದರು.........ಪೋಟೊ: ದಾವಣಗೆರೆಯಲ್ಲಿ ಭೋವಿ/ವಡ್ಡರ ಸಮಾಜದಿಂದ ಕರಪತ್ರಗಳಿಗೆ ಪೂಜೆ ಸಲ್ಲಿಸಿ ಬಂಧುಗಳ ಮನೆಗಳಿಗೆ ತೆರಳಿ ಜಾತಿ ಕಾಲಂನಲ್ಲಿ ಭೋವಿ/ವಡ್ಡರ ಬರೆಸಲು ಕರ ಪತ್ರ ನೀಡಿ ಮನವಿ ಮಾಡಿದರು.
6ಕೆಡಿವಿಜಿ33