ಸಾರಾಂಶ
ಕನ್ನಡಪ್ರಭ ವಾರ್ತೆ ಅಮೀನಗಡ
ಅಮೀನಗಡದಲ್ಲಿ ಉದ್ಯಮಿಗಳ ಕೈಯಲ್ಲಿ ಸಿಕ್ಕು ಕಾಂಗ್ರೆಸ್ ಪಕ್ಷ ಅಧೋಗತಿಗೆ ಇಳಿದಿದೆ ಎಂದು ಕಾಂಗ್ರೆಸ್‌ನ ಹಿರಿಯ ಧುರೀಣರಾದ ಬಿ.ಎಸ್.ನಿಡಗುಂದಿ, ಯಮನಪ್ಪ ಬಂಡಿವಡ್ಡರ ಬೇಸರ ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣ ಪಂಚಾಯತಿಯಲ್ಲಿ ಕಾಂಗ್ರೆಸ್ ಸೋಲಿಗೆ ಬಿ.ಎಸ್.ನಿಡಗುಂದಿ, ಯಮನಪ್ಪ ಬಂಡಿವಡ್ಡರ ಅವರೇ ನೇರ ಕಾರಣವಾಗಿದ್ದಾರೆ. ಅವರನ್ನು ಪಕ್ಷದಿಂದ ಉಚ್ಚಾಟಿಸಿ ಎಂದು ಶುಕ್ರವಾರ ಅಮೀನಗಡ ನಗರ ಘಟಕದ ಅಧ್ಯಕ್ಷ ಸಯ್ಯದ್ ಪೀರಾಖಾದ್ರಿ ಹಾಗೂ ಕಾಂಗ್ರೆಸ್ ಹಿರಿಯ ಧುರೀಣ ಎಸ್.ಎಸ್.ಚಳ್ಳಗಿಡದ ಪತ್ರಿಕಾ ಹೇಳಿಕೆ ನೀಡಿದ್ದರು. ಇದಕ್ಕೆ ಬಿ.ಎಸ್.ನಿಡಗುಂದಿ, ಯಮನಪ್ಪ ಬಂಡಿವಡ್ಡರ ಸ್ಪಷ್ಟೀಕರಣ ನೀಡಿದ್ದಾರೆ.
ನಗರ ಘಟಕದ ಅಧ್ಯಕ್ಷ ಸಯ್ಯದ ಪೀರಾಖಾದ್ರಿ ಹಾಗೂ ಕೆಲವು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಉದ್ಯಮದ ಉಳಿವಿಗಾಗಿಯೇ ಪಕ್ಷವನ್ನು ಆಶ್ರಯಿಸಿದ್ದಾರೆ. ಶಾಸಕರು ನಗರಕ್ಕೆ ಬಂದಾಗ ಮಾತ್ರ ಅವರ ಹಿಂದೆ ಓಡಾಡುವ ಮೂಲಕ ನಾವು ಕಟ್ಟಾ ಕಾಂಗ್ರೆಸ್ಸಿಗರು ಎಂದು ತೋರಿಸಿಕೊಳ್ಳುತ್ತಾರೆ. ನಮ್ಮದೇನೂ ಉದ್ಯಮವಿಲ್ಲ. ಈಗ ನಮ್ಮ ಮೇಲೆ ಆರೋಪ ಮಾಡಿರುವ ಯಾರೊಬ್ಬರೂ, 2021ರ ಪಪಂ ಚುನಾವಣೆಯಲ್ಲಿ ತಮ್ಮ ವಾರ್ಡಿನಲ್ಲಿನ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿಲ್ಲ. ನಾವು 16 ವಾರ್ಡ್‌ಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಿದ್ದೇವೆ. ಇವರು ತಮ್ಮ ಉದ್ಯಮದ ಬೆಳವಣಿಗೆ, ವೈಯಕ್ತಿಕ ಹಿತಾಸಕ್ತಿಗಾಗಿ ಪಕ್ಷ ಹಾಗೂ ಶಾಸಕರನ್ನು ಬಳಸಿಕೊಳ್ಳುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಹಾಗೂ ಮುಖಂಡರು ಪರಿಶೀಲಿಸಿ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಒತ್ತಾಯಿಸಿದರು.ಈ ವೇಳೆ ಪಕ್ಷದ ಹಿರಿಯ ಮುಖಂಡ ಬಿ.ಎಸ್.ನಿಡಗುಂದಿ ಕಣ್ಣೀರು ಹಾಕಿದರು. ಇಂದು ಪಕ್ಷಕ್ಕೆ ವಲಸಿಗರೂ, ಉದ್ಯಮಿಗಳು ತಮ್ಮ ಹಣ ಬಲದಿಂದ ಬಂದು ಸ್ವಹಿತಾಸಕ್ತಿಗಾಗಿ ಪಕ್ಷವನ್ನು ಬಳಸಿಕೊಳ್ಳುತ್ತಿದ್ದಾರೆ. ಮೂಲ ಕಾಂಗ್ರೆಸ್‌ನವರಾದ ನಮ್ಮನ್ನು ಕಡೆಗಣಿಸುತ್ತಿದ್ದು, ಈಗ ಉಚ್ಚಾಟನೆ ಮಾಡುವ ಹಂತಕ್ಕೆ ಬಂದಿದ್ದಾರೆ. ಇಂಥವರಿಂದ ಅಮೀನಗಡದಲ್ಲಿ ಕಾಂಗ್ರೆಸ್ ಸರ್ವನಾಶ ಖಂಡಿತ ಎಂದು ಭವಿಷ್ಯ ನುಡಿದರು. ಅಲ್ಲದೇ, ಜಿಲ್ಲಾಧ್ಯಕ್ಷರು ಮತ್ತು ಹಿರಿಯ ಮುಖಂಡರು ಇವರನ್ನು ಉಚ್ಛಾಟಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಾಕ್ಸ್ಭಿನ್ನಮತಕ್ಕೆ ಕಾರಣವೇನು..?
ಪ್ರಸ್ತುತ ಅಮೀನಗಡ ಪಟ್ಟಣ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣಾ ಪೂರ್ವಸಭೆಯಲ್ಲಿ ನಮ್ಮನ್ನು ಆಹ್ವಾನಿಸಲೇ ಇಲ್ಲ. ನಗರ ಘಟಕದ ಅಧ್ಯಕ್ಷ ಸಯ್ಯದ ಪೀರಾಖಾದ್ರಿ, ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಸ್.ಚಳ್ಳಗಿಡದ, ಜಗದೀಶ ಬಿಸಲದಿನ್ನಿ, ಪ್ರಭು ನಾಗರಾಳ, ಮನೋಹರ ರಕ್ಕಸಗಿ ಮುಂತಾದವರೇ ಕುಳಿತು ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ಪಕ್ಷದಲ್ಲಿ ಅವರವರೇ ಕುಳಿತು ನಿರ್ಧಾರ ಮಾಡಿದ್ದಾರೆ. ಮೇಲಿಂದ ಮೇಲೆ ಹೀಗೆ ಮಾಡಿದರೆ ಹೇಗೆ. ಈಗ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಬೇಬಿ ರಮೇಶ ಚವ್ಹಾಣ ಅವರ ಮಾತಿಗೆ, ಅವರ ಅಭಿಪ್ರಾಯಕ್ಕೆ ಕಾಂಗ್ರೆಸ್ ನಗರ ಘಟಕ ಸೇರಿ ಮುಖಂಡರು ಯಾವುದೇ ಕಿಮ್ಮತ್ತು ನೀಡದ ಕಾರಣ, ಅವರು ಬಿಜೆಪಿಯ ಬಾಹ್ಯ ಬೆಂಬಲದೊಂದಿಗೆ ಅಧ್ಯಕ್ಷ ಸ್ಥಾನ ಪಡೆದಿದ್ದಾರೆ. ಅವರು ಇಂದಿಗೂ ಕಾಂಗ್ರೆಸ್‌ನವರೇ ಆಗಿದ್ದು, ಸ್ಥಳೀಯ ಮುಖಂಡರ ನಡಾವಳಿಗೆ ಬೇಸತ್ತು ಅವರು ಸ್ವ ಇಚ್ಛೆಯಿಂದ ನಿರ್ಧಾರ ಕೈಗೊಂಡಿದ್ದಾರೆ. ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ. ಪಕ್ಷದ್ರೋಹಿ ಚಟುವಟಿಕೆ ನಾವು ನಡೆಸಿಲ್ಲ. ತಮ್ಮ ಉದ್ಯಮದ ಉಳಿವಿಗಾಗಿ ಬಿಜೆಪಿಯೊಂದಿಗೆ ಆಂತರಿಕ ಸಂಬಂಧ ಹೊಂದಿ ಪಕ್ಷಕ್ಕೆ ದ್ರೋಹವೆಸಗಲಾಗಿದೆ ಎಂದು ಆರೋಪಿಸಿದರು. ಅಲ್ಲದೇ, ಅವರಿಂದಲೇ ಪಕ್ಷದ್ರೋಹಿ ಚಟುವಟಿಕೆ ನಡೆದಿದ್ದು, ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಒತ್ತಾಯಿಸಿದರು.ಕನ್ನಡಪ್ರಭ ವಾರ್ತೆ ಅಮೀನಗಡಅಮೀನಗಡದಲ್ಲಿ ಉದ್ಯಮಿಗಳ ಕೈಯಲ್ಲಿ ಸಿಕ್ಕು ಕಾಂಗ್ರೆಸ್ ಪಕ್ಷ ಅಧೋಗತಿಗೆ ಇಳಿದಿದೆ ಎಂದು ಕಾಂಗ್ರೆಸ್‌ನ ಹಿರಿಯ ಧುರೀಣರಾದ ಬಿ.ಎಸ್.ನಿಡಗುಂದಿ, ಯಮನಪ್ಪ ಬಂಡಿವಡ್ಡರ ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣ ಪಂಚಾಯತಿಯಲ್ಲಿ ಕಾಂಗ್ರೆಸ್ ಸೋಲಿಗೆ ಬಿ.ಎಸ್.ನಿಡಗುಂದಿ, ಯಮನಪ್ಪ ಬಂಡಿವಡ್ಡರ ಅವರೇ ನೇರ ಕಾರಣವಾಗಿದ್ದಾರೆ. ಅವರನ್ನು ಪಕ್ಷದಿಂದ ಉಚ್ಚಾಟಿಸಿ ಎಂದು ಶುಕ್ರವಾರ ಅಮೀನಗಡ ನಗರ ಘಟಕದ ಅಧ್ಯಕ್ಷ ಸಯ್ಯದ್ ಪೀರಾಖಾದ್ರಿ ಹಾಗೂ ಕಾಂಗ್ರೆಸ್ ಹಿರಿಯ ಧುರೀಣ ಎಸ್.ಎಸ್.ಚಳ್ಳಗಿಡದ ಪತ್ರಿಕಾ ಹೇಳಿಕೆ ನೀಡಿದ್ದರು. ಇದಕ್ಕೆ ಬಿ.ಎಸ್.ನಿಡಗುಂದಿ, ಯಮನಪ್ಪ ಬಂಡಿವಡ್ಡರ ಸ್ಪಷ್ಟೀಕರಣ ನೀಡಿದ್ದಾರೆ.