ರೈತರ ಭವಿಷ್ಯದ ಹಿತದೃಷ್ಟಿಯಿಂದ ಶೀಥಲೀಕರಣ ಘಟಕ ಸ್ಥಾಪನೆ

| Published : Dec 08 2024, 01:18 AM IST

ಸಾರಾಂಶ

ಶಿಕಾರಿಪುರ: ತಾಲೂಕಿನ ರೈತರ ಭವಿಷ್ಯದ ಹಿತದೃಷ್ಟಿಯಿಂದ ಶೀಥಲೀಕರಣ ಘಟಕ ಸ್ಥಾಪನೆ ಮಾಡುತ್ತಿದ್ದು, ಅಧಿಕಾರಿಗಳು ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶಿಕಾರಿಪುರ: ತಾಲೂಕಿನ ರೈತರ ಭವಿಷ್ಯದ ಹಿತದೃಷ್ಟಿಯಿಂದ ಶೀಥಲೀಕರಣ ಘಟಕ ಸ್ಥಾಪನೆ ಮಾಡುತ್ತಿದ್ದು, ಅಧಿಕಾರಿಗಳು ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ತಾಲೂಕಿನ ಕಾಳೇನಹಳ್ಳಿಯ ತೋಟಗಾರಿಕಾ ಪ್ರದೇಶದಲ್ಲಿ 15 ಕೋಟಿ ರು. ವೆಚ್ಚದಲ್ಲಿ 4 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಶೀಥಲೀಕರಣ ಘಟಕ ಕಾಮಗಾರಿಯನ್ನು ವೀಕ್ಷಿಸಿ ಅವರು ಮಾತನಾಡಿದರು.

ಶಿವಮೊಗ್ಗ- ಶಿಕಾರಿಪುರ - ರಾಣೆಬೆನ್ನೂರು ರೈಲು ಮಾರ್ಗ ನಿರ್ಮಾಣವಾಗುತ್ತಿರುವ ಈ ಸಂದರ್ಭದಲ್ಲಿ, ರೈತರು ತರಕಾರಿ ಹಣ್ಣು, ಶುಂಠಿ ಮುಂತಾದ ಬೆಳೆಗಳನ್ನು ಬೆಳೆಯುವ ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಈ ಉಗ್ರಾಣವನ್ನು ನಿರ್ಮಿಸುತ್ತಿದ್ದು, ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಶಿಕಾರಿಪುರ ಪಟ್ಟಣದ ಸಂತೆ ಮೈದಾನಕ್ಕೆ 10 ಕೋಟಿ ರು. ವೆಚ್ಚದಲ್ಲಿ ಮೇಲ್ಚಾವಣಿ ನಿರ್ಮಿಸುತ್ತಿದ್ದು, ಇದು ಜಿಲ್ಲೆಗೆ ಮಾದರಿಯಾದ ಸಂತೆ ಮೈದಾನ ಆಗಲಿದೆ. ತಾಲೂಕಿನಿಂದ ಸಂತೆಗೆ ಬರುವ ಜನರು ಮಳೆ ಮತ್ತು ಬಿಸಿಲಿನಿಂದ ರಕ್ಷಣೆ ಪಡೆಯುವ ಉದ್ದೇಶದಿಂದ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು. ನಿರ್ಮಾಣದ ಕೆಳಭಾಗದಲ್ಲಿ ಅಂಜನಾಪುರದಿಂದ ಶಿಕಾರಿಪುರದ ಹುಚ್ಚುರಾಯನಕೆರೆಗೆ ಹೋಗಿರುವ ನಾಲಾ ಇದ್ದು, ನೀರು ಹರಿಯುತ್ತಿರುವುದರಿಂದ ನಿರ್ಮಾಣ ಕಾಮಗಾರಿಯಿಂದಾಗಿ ಅಂಜನಾಪುರ ನಾಲೆಗೆ ಯಾವುದೇ ರೀತಿಯ ಧಕ್ಕೆ ಉಂಟಾಗಬಾರದು ಎಂದರು.

ರೈತರಿಗೆ ವಿಮಾ ಪರಿಹಾರ ಕೂಡಲೇ ಒದಗಿಸಿ

ಶಿಕಾರಿಪುರ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ತೋಟಗಾರಿಕಾ ಮತ್ತು ಕೃಷಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ವೇಳೆ ಮಾತನಾಡಿದ ಸಂಸದರು, ತಾಲೂಕಿನಲ್ಲಿ ಅಡಿಕೆ ಬೆಳೆಗೆ 33 ಕೋಟಿ ರು. ಬೆಳೆ ವಿಮೆ ಪರಿಹಾರ ಹಾಗೂ 2480 ಜನರಿಗೆ ಬತ್ತಕ್ಕೆ 2.08 ಕೋಟಿ ರು. ಹಾಗೂ 17384 ಜನ ಮೆಕ್ಕೆಜೋಳ ಬೆಳೆದ ರೈತರಿಗೆ 16.92 ಕೋಟಿ ರು. ರೂಪಾಯಿ ಹಣ ಬಿಡುಗಡೆಯಾಗಿದ್ದು, ಬಾಕಿ ಉಳಿದಂತೆ ಜಿಲ್ಲೆಯ ಹಾಗೂ ತಾಲೂಕಿನ ಬತ್ತ, ಮೆಕ್ಕೆಜೋಳ ಹಾಗೂ ತೋಟಗಾರಿಕಾ ಬೆಳೆ ಬೆಳೆದ ರೈತರಿಗೆ ಸರಿಯಾದ ರೀತಿಯಲ್ಲಿ ವಿಮಾ ಪರಿಹಾರವನ್ನು ಕೂಡಲೇ ಒದಗಿಸಿ ಎಂದು ವಿಮಾ ಕಂಪನಿಯ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ತೋಟಗಾರಿಕಾ ಅಧಿಕಾರಿಗಳಾದ ಸವಿತಾ, ವನಮಾಲ, ನವೀನ್, ಪ್ರಶಾಂತ್, ಕೃಷಿ ಅಧಿಕಾರಿ ಕಿರಣ್ ಕುಮಾರ್ ಹರ್ತಿ, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಗ್ರಾಪಂ ಉಪಾಧ್ಯಕ್ಷ ಕೆರೆಸ್ವಾಮಿ, ಸದಸ್ಯರಾದ ಗಂಗಮ್ಮ, ಎಪಿಎಂಸಿ ಕಾರ್ಯದರ್ಶಿ ಗದಿಗೆಶ್, ನಾರಾಯಣ್, ಅಂಬಾರಗೊಪ್ಪದ ಶೇಖರಪ್ಪ ನಿಂಬೆಗೊಂದಿ ಸಿದ್ದಲಿಂಗಪ್ಪ, ಸಂಕ್ಲಾಪುರದ ಹನುಮಂತಪ್ಪ , ಬೆಣ್ಣೆ ಪ್ರವೀಣ್, ಪ್ರಶಾಂತ್, ಈರಣ್ಣ, ರುದ್ರಮುನಿ, ಈಸೂರು ಜಗದೀಶ್, ಯೋಗೇಶಪ್ಪ, ಗಿರೀಶ್ ಧಾರವಾಡ, ಗುರುರಾಜ್ ಜಕ್ಕಿನ ಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.