ತುಮಕೂರಿನಲ್ಲಿ ಗೃಹ ಸಚಿವರ ಕ್ಷೇತ್ರಕ್ಕೂ ಕಾಲಿಟ್ಟ ವಕ್ಫ್ ಬೋರ್ಡ್‌

| Published : Nov 05 2024, 12:32 AM IST

ತುಮಕೂರಿನಲ್ಲಿ ಗೃಹ ಸಚಿವರ ಕ್ಷೇತ್ರಕ್ಕೂ ಕಾಲಿಟ್ಟ ವಕ್ಫ್ ಬೋರ್ಡ್‌
Share this Article
  • FB
  • TW
  • Linkdin
  • Email

ಸಾರಾಂಶ

ವಕ್ಫ್ ಆಸ್ತಿ ವಿವಾದ ತುಮಕೂರು ಜಿಲ್ಲೆಗೂ ಕಾಲಿಟ್ಟಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ವಕ್ಷೇತ್ರದಲ್ಲಿನ ರೈತರ ಭೂಮಿಗಳು ಕೂಡ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್‌ ಮಂಡಳಿಗೆ ಭೂ ಪರಿವರ್ತನೆ ಆಗಿರುವುದು ಬೆಳಕಿಗೆ ಬಂದಿದೆ.

40ಕ್ಕೂ ಹೆಚ್ಚು ರೈತರ 74 ಎಕರೆ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು । ರೈತರಿಂದ ಹೋರಾಟದ ಎಚ್ಚರಿಕೆ

ಕನ್ನಡಪ್ರಭ ವಾರ್ತೆ ಕೊರಟಗೆರೆರಾಜ್ಯದಲ್ಲಿ ರೈತರ ಜಮೀನಿಗೆ ವಕ್ಫ್ ಬೋರ್ಡ್ ನೋಟಿಸ್‌ ನೀಡುತ್ತಿರುವುದು ಕುರಿತು ದೇಶಾದ್ಯಾಂತ ಚರ್ಚೆ ನಡೆಯುತ್ತಿದೆ. ಸದ್ಯ ವಕ್ಫ್ ಆಸ್ತಿ ವಿವಾದ ತುಮಕೂರು ಜಿಲ್ಲೆಗೂ ಕಾಲಿಟ್ಟಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ವಕ್ಷೇತ್ರದಲ್ಲಿನ ರೈತರ ಭೂಮಿಗಳು ಕೂಡ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್‌ ಮಂಡಳಿಗೆ ಭೂ ಪರಿವರ್ತನೆ ಆಗಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ರಾಜ್ಯದ ರಾಯಚೂರು, ಕೋಲಾರ, ಬಳ್ಳಾರಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್‌ಗೆ ರೈತರ ಭೂಮಿಗಳು ಪರಿವರ್ತನೆಗಳಾಗಿ ಪಹಣಿಗಳಲ್ಲಿ ಹೆಸರುಗಳು ಬರುತ್ತಿದ್ದು, ಸಾವಿರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ಬಡ ರೈತರ ಭೂಮಿಗಳನ್ನ ಕಬಳಿಸುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಜೀವನ ನಡೆಸಲು ಇದ್ದ ಅಲ್ಪಸ್ವಲ್ಪ ಭೂಮಿಯೂ ಹೋದರೆ ಬಡ ರೈತರು ಏನು ಮಾಡಬೇಕು ಎಂಬ ಯಕ್ಷ ಪ್ರಶ್ನೆಯಾಗಿದೆ.ತಾಲೂಕಿನ 40ಕ್ಕೂ ಹೆಚ್ಚು ರೈತರ ಭೂಮಿಗಳು ವಕ್ಫ್ ಬೋರ್ಡ್ ಮಂಡಳಿಯ ಹೆಸರಿನಲ್ಲಿ ಪಹಣಿಗಳು ಬಂದಿರುವುದು ಬೆಳಕಿಗೆ ಬಂದಿದ್ದು, ಇನ್ನೂ ಕೊರಟಗೆರೆ ತಾಲೂಕಿನ ಯಾವ ಯಾವ ಗ್ರಾಮಗಳಲ್ಲಿ ಎಷ್ಟು ರೈತರ ಭೂಮಿಗಳು ಭೂ ಪರಿವರ್ತನೆ ಆಗಿ ವಕ್ಫ್ ಬೋರ್ಡ್ ಮಂಡಳಿಯ ಹೆಸರು ಬಂದಿದೆ ಎಂದು ಇನ್ನೂ ಮುಂದೆ ತಿಳಿಯಬೇಕಿದೆ. ರೈತರ ತಮ್ಮ ತಮ್ಮ ಪಹಣಿಗಳನ್ನು ಪರಿಕ್ಷಿಸಿದರೆ ವಕ್ಫ್ ಬೋರ್ಡ್‌ ಹೆಸರು ಪಹಣಿಯಲ್ಲಿ ಬಂದಿದೆಯೋ/ ಇಲ್ಲಯೋ ಎಂಬುದು ತಿಳಿಯುತ್ತದೆ.

ಯಾವ ಗ್ರಾಮದ ಪಹಣಿಯಲ್ಲಿ ಬಂದಿದೆ ವಕ್ಫ್ ಬೋರ್ಡ್ ಹೆಸರುಕೊರಟಗೆರೆ ತಾಲೂಕಿನ ಹೊಳವನಹಳ್ಳಿ, ಕೊರಟಗೆರೆ, ಅಕ್ಕಿರಾಂಪುರ, ಮಾದವಾರ, ಹುಲೀಕುಂಟೆ ಸೇರಿದಂತೆ ಅನೇಕ ಗ್ರಾಮದ ರೈತರ ಪಹಣಿಗಳಲ್ಲಿ ಕರ್ನಾಟಕ ವಕ್ಫ್ ಬೋರ್ಡ್ ಮಂಡಳಿಯ ಹೆಸರಿನಲ್ಲಿ ಪಹಣಿ ಬರುತ್ತಿರುವುದು ಕಂಡುಬಂದಿದೆ. ಸಂಬಂಧಿಸಿದ ದಾಖಲೆ ಒದಗಿಸಿ2015 ರಿಂದ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಬೋಡ್ ಮಂಡಳಿಯ ಹೆಸರು ಬಂದಿದ್ದರೆ ಅಂತಹ ರೈತರು ದಾವೆ ಹೂಡಿ ಅದಕ್ಕೆ ಸಂಬಂಧಿಸಿದ ದಾಖಲೆಗಳ ಒದಗಿಸಿದರೆ ಅಂತಹವರ ಪಹಣಿಯಲ್ಲಿ ಮತ್ತೆ ಅವರ ಹೆಸರಿಗೆ ಬರುತ್ತದೆ ಎಂದು ತಹಸೀಲ್ದಾರ್ ಮಂಜುನಾಥ್ ಹೇಳಿದರು.

ಕೊರಟಗೆರೆ ತಾಲೂಕಿನ 40ಕ್ಕೂ ಹೆಚ್ಚು ರೈತರ ಸುಮಾರು 74 ಎಕರೆಗೂ ಹೆಚ್ಚು ಜಮೀನು ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂದು ಪಹಣಿಯಲ್ಲಿ ನಮೂದಿಸಲಾಗಿದೆ. ಸರ್ಕಾರ ತಕ್ಷಣ ಬಡ ರೈತರ ಜಮೀನನ್ನು ವಾಪಸ್ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು.ಸಿದ್ದರಾಜು ರೈತ ಸಂಘ ತಾಲೂಕು ಅಧ್ಯಕ್ಷ ಕೊರಟಗೆರೆ