ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿಇತ್ತೀಚೆಗೆ ಉಡುಪಿಯಲ್ಲಿ ‘ಮಹಾತ್ಮ ಗಾಂಧಿ ಅವರು ರಾಷ್ಟ್ರಪಿತ ಅಲ್ಲ’ ಎಂದು ಹೇಳಿ ಕ್ರಿಮಿನಲ್ ಪ್ರಕರಣವನ್ನು ಮೈಮೇಲೆ ಎಳೆದುಕೊಂಡಿರುವ ಹಿಂದೂ ಕಾರ್ಯಕರ್ತೆ ಮೀನಾಕ್ಷಿ ಶೆರಾವತ್ ತಮ್ಮ ಹೇಳಿಕೆಯನ್ನು ಎಕ್ಸ್ ಮೂಲಕ ಸಮರ್ಥಿಸಿಕೊಂಡಿದ್ದಾರೆ.ಇತ್ತೀಚಿಗೆ ಕರ್ನಾಟಕದಲ್ಲಿ ನನ್ನ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ. ಯಾಕೆಂದರೆ ನಾನು ರಾಷ್ಟ್ರಪಿತ ಎಂದು ಕರೆಯಲಾಗುವ ಒಬ್ಬ ವ್ಯಕ್ತಿಯ ಬಗ್ಗೆ ನಾನು ಕೆಲವು ಮಾತುಗಳನ್ನಾಡಿದ್ದೆ, ಈ ಮಾತುಗಳನ್ನಾಡುವಾಗ ಭಾಷೆ ಪೂರ್ಣ ನನ್ನ ನಿಯಂತ್ರಣದಲ್ಲಿತ್ತು, ನಾನು ಅಶೋಭೆಯ ಅಥವಾ ಅವಮರ್ಯಾದೆಯ ಯಾವುದೇ ಶಬ್ದ ಬಳಸಿಲ್ಲ, ಅದರೂ ನನ್ನ ಮೇಲೆ ಎಫ್ಐಆರ್ ದಾಖಲಾಗಿದೆ ಎಂದು ಹೇಳಿಕೊಂಡಿದ್ದಾರೆ.ನಾನು ಇತಿಹಾಸಕಾರರು ಪುಸ್ತಕದಲ್ಲಿ ಬರೆದ ಸತ್ಯ ವಿಚಾರಗಳನ್ನು ನನ್ನ ಶಬ್ದಗಳಲ್ಲಿ ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದೇನೆ. ಅದಕ್ಕಾಗಿ ನನ್ನ ಮೇಲೆ ಎಫ್‌ಐಆರ್ ಆಗಿದೆ. ನಾನು ಇಡೀ ಭಾರತದ ಪುತ್ರಿ. ಆದ್ದರಿಂದ ಇಡೀ ಭಾರತ ನನಗೆ ಬೆಂಬಲ ನೀಡಬೇಕು. ಬೆಂಬಲ ಇದ್ದಾಗ ಮಾತ್ರ ಇಂತಹ ಧ್ವನಿ ಎತ್ತಲು ಸಾಧ್ಯ ಎಂದವರು ಎಕ್ಸ್‌ನಲ್ಲಿ ಸುದೀರ್ಘ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.