ಸಾರಾಂಶ
ಯಳಂದೂರು ಗ್ರಾಮ ಪಂಚಾಯಿತಿಯ ಗ್ರಾಮದ ಮಂಜುನಾಥಸ್ವಾಮಿ ಎಂಬುವರಿಗೆ ಸೇರಿದ ಕೃಷಿ ಜಮೀನಿಗೆ ಗ್ರಾಮ ಪಂಚಾಯಿತಿ ಚರಂಡಿ ನೀರನ್ನು ಕೃಷಿ ಚಟುವಟಿಕೆ ನಡೆಸುವ ಜಮೀನಿಗೆ ಹರಿಯ ಬಿಟ್ಟಿರುವುದರಿಂದ ವ್ಯವಸಾಯ ಮಾಡಲು ತೊಂದರೆ ಆಗಿದೆ.
ಗ್ರಾಪಂ, ಜಿಪಂಗೆ ದೂರು ನೀಡಿದರೂ ಅಧಿಕಾರಿ ವರ್ಗದ ನಿರ್ಲಕ್ಷ್ಯ । ಬೆಳೆದ ಎಳನೀರು, ಕಾಯಿ ಕೀಳಲಾಗದೆ ಪರದಾಟ
ಕನ್ನಡಪ್ರಭವಾರ್ತೆ ಯಳಂದೂರುಯರಿಯೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯ ನಿರ್ಲಕ್ಷ್ಯತೆಯಿಂದ ಚರಂಡಿ ತಾಜ್ಯ ನೀರನ್ನು ಕೃಷಿ ಜಮೀನಿಗೆ ಹರಿಯಲು ಬಿಟ್ಟಿರುವುದರಿಂದ ರೈತರು ಕಂಗಲಾಗಿದ್ದಾರೆ. ಗ್ರಾಮದ ಮಂಜುನಾಥಸ್ವಾಮಿ ಎಂಬುವರಿಗೆ ಸೇರಿದ ಕೃಷಿ ಜಮೀನಿಗೆ ಗ್ರಾಮ ಪಂಚಾಯಿತಿ ಚರಂಡಿ ನೀರನ್ನು ಕೃಷಿ ಚಟುವಟಿಕೆ ನಡೆಸುವ ಜಮೀನಿಗೆ ಹರಿಯ ಬಿಟ್ಟಿರುವುದರಿಂದ ವ್ಯವಸಾಯ ಮಾಡಲು ತೊಂದರೆ ಆಗಿದೆ.
ಈಗಾಗಲೇ ಮಂಜುನಾಥಸ್ವಾಮಿ ತಮ್ಮ ಕೃಷಿ ಜಮೀನಿಗೆ ತಾಜ್ಯ ಚರಂಡಿ ನೀರು ಬಿಟ್ಟಿರುವ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯಿತಿಗೆ ದೂರು ನೀಡಿದರೂ ಕ್ರಮ ವಹಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದ್ದಾರೆ.ಸಿಇಒ ಮಾತಿಗೂ ಬೆಲೆ ಇಲ್ಲ:
ಈಗಾಗಲೇ ಚರಂಡಿ ನೀರನ್ನು ಕೃಷಿ ಜಮೀನಿಗೆ ಬಿಡಬಾರದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ದೂರು ನೀಡಿದ್ದರಿಂದ ಸ್ಥಳದಲ್ಲೇ ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒಗೆ ಸೂಕ್ತ ಕ್ರಮ ವಹಿಸಲು ಸೂಚಿಸಿದ್ದರು. ಆದರೂ ಸಹ ಗ್ರಾಮ ಪಂಚಾಯಿತಿ ಆಡಳಿತ ಮಾತ್ರ ಅವರಿಗೆ ಮಾತಿಗೆ ಕವಡೆ ಕಾಸಿನ ಬೆಲೆ ನೀಡಿಲ್ಲ. ಇದರಿಂದಾಗಿ ಜಮೀನಿನಲ್ಲಿ ಏನನ್ನು ಸಹ ಬೆಳೆಯಲು ಹಾಗೂ ಎಳನೀರು, ಕಾಯಿ ಕೀಳಿಸಲು ಸಾಧ್ಯವಾಗಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.ತೋಟಕ್ಕೆ ತ್ಯಾಜ್ಯ ನೀರು ನುಗ್ಗಿರುವ ವಿಚಾರ ನನಗೆ ಗೊತ್ತಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರಿಂದ ಮಾಹಿತಿ ಪಡೆದು ಕ್ರಮ ವಹಿಸುತ್ತೇನೆ.
ರಮೇಶ, ಪಿಡಿಒ, ಯರಿಯೂರು ಗ್ರಾಪಂ.ನಾಲ್ಕನೇ ವಾರ್ಡ್‌ನಲ್ಲಿ ನಮ್ಮ ಕೃಷಿ ಜಮೀನಿಗೆ ನೀರು ನುಗ್ಗುತ್ತಿದೆ. ಹತ್ತಾರು ಬಾರಿ ಅಧಿಕಾರಿಗಳ ವರ್ಗ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ವಹಿಸಿಲ್ಲ. ಈಗ ಮತ್ತೆ ಜಿಪಂ ಸಿಇಒ ಮತ್ತು ಜಿಲ್ಲಾಧಿಕಾರಿಗಳಿಗೆ ಮತ್ತೆ ದೂರು ನೀಡುತ್ತೇನೆ.
ಮಂಜುನಾಥ್‌ಸ್ವಾಮಿ, ರೈತ, ಯರಿಯೂರು.