ಸಾರಾಂಶ
ಪಟ್ಟಣದ ರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಮಸ್ಕಿ ರಸ್ತೆಯ ವೃತ್ತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಎನ್ನುವ ನಾಮಫಲಕವನ್ನು ಪುರಸಭೆ ಸದಸ್ಯ ಅಮೀರಬೇಗ್ ಉಸ್ತಾದ, ಅಜಮೀರ ಬೆಳ್ಳಿಕಟ್ ಮತ್ತು ತಸ್ಲಿಂ ಮುಲ್ಲಾ, ದುರಗಪ್ಪ ಕಟ್ಟಿಮನಿ, ಗುಂಡಪ್ಪ ಗಂಗಾವತಿ, ಜಂಟಿಯಾಗಿ ಉದ್ಘಾಟಿಸುವ ಮೂಲಕ ನಾಮಫಲಕ ಅನಾವರಣಗೊಳಿಸಿದರು.
ಮುದಗಲ್: ಪಟ್ಟಣದ ರಾಯಚೂರು-ಬೆಳಗಾವಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಮಸ್ಕಿ ರಸ್ತೆಯ ವೃತ್ತಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಎನ್ನುವ ನಾಮಫಲಕವನ್ನು ಪುರಸಭೆ ಸದಸ್ಯ ಅಮೀರಬೇಗ್ ಉಸ್ತಾದ, ಅಜಮೀರ ಬೆಳ್ಳಿಕಟ್ ಮತ್ತು ತಸ್ಲಿಂ ಮುಲ್ಲಾ, ದುರಗಪ್ಪ ಕಟ್ಟಿಮನಿ, ಗುಂಡಪ್ಪ ಗಂಗಾವತಿ, ಜಂಟಿಯಾಗಿ ಉದ್ಘಾಟಿಸುವ ಮೂಲಕ ನಾಮಫಲಕ ಅನಾವರಣಗೊಳಿಸಿದರು.
ಪಟ್ಟಣದಲ್ಲಿ ಸಂವಿಧಾನ ಜಾಗೃತ ಜಾಥಾ ಆಗಮನದ ಹಿನ್ನೆಲೆಯಲ್ಲಿ ಜಾಥಾದ ರಥವನ್ನು ಸ್ವಾಗತಿಸುವುದು ಮತ್ತು ಬಹಿರಂಗ ಸಮಾವೇಶಕ್ಕೆ ಮುಂಚೆ ಬಹು ದಿನಗಳ ಬೇಡಿಕೆ ಪುರಸಭೆ ಸದಸ್ಯ ಅಮೀರಬೇಗ್ ಉಸ್ತಾದ ಅನಾವರಣಗೊಳಿಸಿದರೆ, ಸದಸ್ಯ ಅಜಮೀರ ಬೆಳ್ಳಕಟ್ ನಾಮಫಲಕಕ್ಕೆ ಪೂಜೆ ಸಲ್ಲಿಸಿದರು. ಸದಸ್ಯ ತಸ್ಲಿಂ ಮುಲ್ಲಾ , ದುರಗಪ್ಪ ಕಟ್ಟಿಮನಿ, ಗುಂಡಪ್ಪ ಗಂಗಾವತಿ, ಶಬ್ಬೀರ, ಮಹಿಬುಬ ಕಡ್ಡಿಪುಡಿ ಪುಷ್ಪಾರ್ಪಣೆಗೈಯ್ಯುವ ಮೂಲಕ ವೃತ್ತಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಶರಣಪ್ಪ ಕಟ್ಟಿಮನಿ, ವೆಂಕಟೇಶ ಹಿರೇಮನಿ, ಬಸವರಾಜ ಬಂಕದಮನಿ, ರಘುವೀರ ಮೇಗಳಮನಿ, ಕೃಷ್ಣಾ ಛಲವಾದಿ, ತಮ್ಮಣ್ಣ ಗುತ್ತೇದಾರ, ನಾಗರಾಜ ತಳವಾರ, ಹುಸೇನ್ಲಿ, ಮುಜಾಕೀರ ಹುಸೇನ್, ಸಂತೋಷ ಸೇರಿದಂತೆ ಇನ್ನಿತರರು ಇದ್ದರು.