ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ ಮಡಿಕೇರಿಯಲ್ಲಿ ನೂತನವಾಗಿ ನಿರ್ಮಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಕಚೇರಿ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹಲವು ಅಭಿವೃದ್ದಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಕೃಷಿ ಇಲಾಖೆಯ 100 ಲಕ್ಷ ರು. ವೆಚ್ಚದ ಕಾಮಗಾರಿ, ಹಿಂದುಳಿದ ವರ್ಗಗಳ ಇಲಾಖೆಯ 500 ಲಕ್ಷ ರು. ಕಾಮಗಾರಿ, ನಗರ ನೀರು ಮತ್ತು ಒಳಚರಂಡಿ ಮಂಡಳಿ ನಗರಾಭಿವೃದ್ಧಿ ಇಲಾಖೆಯ 16108 ಲಕ್ಷ ರು.ನ 5 ಕಾಮಗಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 60 ಲಕ್ಷ ರು. ವೆಚ್ಚದ 3 ಕಾಮಗಾರಿ, ಸಮಾಜ ಕಲ್ಯಾಣ ಇಲಾಖೆಯ 375 ಲಕ್ಷ ರು. ವೆಚ್ಚದ ಕಾಮಗಾರಿ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ-ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ 1226 ಲಕ್ಷ ರು. ಕಾಮಗಾರಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕುಶಾಲನಗರ ತಾಲೂಕು ಬಸವನಹಳ್ಳಿಯಲ್ಲಿ ಬಸ್ ಡಿಪೋ ಕಾಮಗಾರಿ) ಸಾರಿಗೆ ಇಲಾಖೆಯ 670.58 ಲಕ್ಷ ರು. ವೆಚ್ಚದ ಕಾಮಗಾರಿ, ಜಿಲ್ಲಾ ನಗರಾಭಿವೃದ್ಧಿ ಇಲಾಖೆಯ 1589.50 ಲಕ್ಷ ರು. ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಜೊತೆಗೆ ಸಣ್ಯ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ 1,100 ಲಕ್ಷ ರು. 2 ಕಾಮಗಾರಿಗಳು, ಪೊನ್ನಂಪೇಟೆ ತಾಲೂಕು ಗೋಣಿಕೊಪ್ಪದ ನೂತನ ಬಸ್ ನಿಲ್ದಾಣ (ಜಿಲ್ಲಾ ಪಂಚಾಯಿತಿ) 200 ಲಕ್ಷ ರು., ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 499.79 ಲಕ್ಷ ರು. ಕಾಮಗಾರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ-ಸಮಾಜ ಕಲ್ಯಾಣ ಇಲಾಖೆಯ 199.50 ಲಕ್ಷ ರು. ಕಾಮಗಾರಿ, ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತದ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ-ಇಂಧನ ಇಲಾಖೆಯ 2417.92 ಲಕ್ಷ ರು.ನ ಕಾಮಗಾರಿ ಒಟ್ಟು 25046.79 ಲಕ್ಷ ರು. ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಉದ್ಘಾಟನೆ: ಪೊಲೀಸ್ ಇಲಾಖೆ-ಗೃಹ ಇಲಾಖೆಯ 1200 ಲಕ್ಷ ರು. ವೆಚ್ಚದ ಕಟ್ಟಡ ಉದ್ಘಾಟನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 63 ಲಕ್ಷ ರು. ವೆಚ್ಚದ 5 ಅಂಗನವಾಡಿ ಕಟ್ಟಡ ಉದ್ಘಾಟನೆ, ಶಾಲಾ ಶಿಕ್ಷಣ ಇಲಾಖೆಯ 404.20 ಲಕ್ಷ ರು.ಗಳ 19 ಕಾಮಗಾರಿಗಳ ಉದ್ಘಾಟನೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 865.80 ಲಕ್ಷ ರೂ. ವೆಚ್ಚದ 11 ಕಾಮಗಾರಿಗಳ ಉದ್ಘಾಟನೆ, ಮಡಿಕೇರಿ ತಾಲೂಕು ನಾಪೋಕ್ಲು ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ-ಸಮಾಜ ಕಲ್ಯಾಣ ಇಲಾಖೆಯ 2500 ಲಕ್ಷ ರು. ವೆಚ್ಚದ 1 ಕಾಮಗಾರಿ ಉದ್ಘಾಟಿಸಿದರು.ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ 1695 ಲಕ್ಷ ರೂ. ವೆಚ್ಚದ 2 ಕಾಮಗಾರಿ ಉದ್ಘಾಟನೆ, ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ-ಮಡಿಕೇರಿಯಿಂದ –ವಿರಾಜಪೇಟೆವರೆಗೆ 37.38 ಕಿ.ಮೀ. ಉದ್ದದ 66 ಕೆ.ವಿ. ವಿದ್ಯುತ್ ಮಾರ್ಗ-ಇಂಧನ ಇಲಾಖೆಯ 3248.42 ಲಕ್ಷ ರು. ವೆಚ್ಚದ ಕಾಮಗಾರಿ ಒಟ್ಟು 9,976.42 ಲಕ್ಷ ರು. ವೆಚ್ಚದ 40 ಕಾಮಗಾರಿಗಳನ್ನು ಉದ್ಘಾಟಿಸಿದರು.
ಕೊಡಗು ವಿಶ್ವವಿದ್ಯಾಲಯವು ಅನುದೀಪ್ ಫೌಂಡೇಶ್, ಐಬಿಎಂ ಹಾಗೂ ಕರ್ನಾಟಕ ಕೌಸಲ್ಯಾಭಿವೃದ್ಧಿ ನಿಗಮದ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿರುವ ಹೊಸ ಕೋರ್ಸುಗಳ ಲೋಕಾರ್ಪಣೆ ಮಾಡಿದರು.ಗೃಹ ಸಚಿವ ಡಾ. ಜಿ. ಪರಮೇಶ್ವರ್, ಉಸ್ತುವಾರಿ ಸಚಿವ ಭೋಸರಾಜು, ಶಾಸಕರಾದ ಎ.ಎಸ್. ಪೊನ್ನಣ್ಣ, ಡಾ. ಮಂತರ್ ಗೌಡ ಮತ್ತಿತರರು ಪಾಲ್ಗೊಂಡಿದ್ದರು.