ಸಾರಾಂಶ
ಗುಂಡ್ಲುಪೇಟೆ ಪಟ್ಟಣದ ಕೆ.ಎಸ್.ನಾಗರತ್ನಮ್ಮ ಬಡಾವಣೆಯಲ್ಲಿ ವಿದ್ಯಾರ್ಥಿ ನಿಲಯವನ್ನು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಪಟ್ಟಣದ ಕೆ.ಎಸ್.ನಾಗರತ್ನ ಬಡಾವಣೆಯಲ್ಲಿ ಡಾ.ಬಿ.ಅರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿ ಪರಿಶಿಷ್ಟ ವರ್ಗದವರ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟಲ್ ಕಟ್ಟಡವನ್ನು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಉದ್ಘಾಟಿಸಿದರು.3.46 ಕೋಟಿ ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಹಾಗೂ ೪ ಕೋಟಿ ವೆಚ್ಚದಲ್ಲಿ ಪರಿಶಿಷ್ಟ ವರ್ಗದವರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು.ಉತ್ತಮ ಸೌಲಭ್ಯ:
ಹಾಸ್ಟೆಲ್‌ಗಳಲ್ಲಿ ಉತ್ತಮವಾದ ವಸತಿ ರೂಂ, ಸ್ಟೋರ್ ರೂಂ, ಅಡುಗೆ ಕೋಣೆ, ಭೋಜನಾಲಯ, ಸಿಕ್ ರೂಂ, ವಾರ್ಡನ್ ರೂಂ, ಡಿಶ್ ವಾಶ್ ಏರಿಯಾ, ಪ್ರತಿ ರೂಂಗೆ ಶೌಚಾಲಯ, ಸ್ನಾನದ ಗೃಹ ಸೌಲಭ್ಯಗಳನ್ನು ಒದಗಿಸಲಾಗಿದೆ. ನೂತನ ಕಟ್ಟಡ 100 ಮಕ್ಕಳು ವಾಸ್ತವ್ಯ ಇರಬಹುದು ಎಂದರು. ಈಗಾಗಲೇ 65 ಮಕ್ಕಳು ವಿದ್ಯಾರ್ಥಿ ನಿಲಯದ ಸದುಪಯೋಗ ಪಡಿಸಿಕೊಳ್ಳಲು ಮುಂದಾಗಿದ್ದು,ಪ್ರಸಕ್ತ ಸಾಲಿನಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ಉಳಿಯುವಂತೆ ಮಾಡಬೇಕು ಅಧಿಕಾರಿಗಳಿಗೆ ಸೂಚಿಸಿದರು.ಸಭೆಯಲ್ಲಿ ಪುರಸಭೆ ಅಧ್ಯಕ್ಷ ಮಧುಸೂದನ್, ಪುರಸಭೆ ಮಾಜಿ ಅಧ್ಯಕ್ಷ ಕಿರಣ್ ಗೌಡ, ಸದಸ್ಯರಾದ ಶ್ರೀನಿವಾಸ್, ಎನ್.ಕುಮಾರ್, ಮಾಜಿ ಸದಸ್ಯರಾದ ಪಿ.ಲಿಂಗರಾಜು, ಟಿ.ರಂಗಸ್ವಾಮಿ, ಮೋಹನ್,ಎ.ಎಲ್ ಶಿವಸ್ವಾಮಿ,ಸೈಯದ್ ದಸ್ತಗೀರ್, ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಜಿಲ್ಲಾ ಪರಿಶಿಷ್ಟ ಇಲಾಖೆಯ ಜಿಲ್ಲಾಧಿಕಾರಿ ಎಚ್.ಎಸ್.ಬಿಂದ್ಯಾ,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಸೇರಿದಂತೆ ಹಾಜರಿದ್ದರು.