ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡದ ಹೆಚ್ಚುವರಿ ಕೊಠಡಿಗಳನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಶಾಸಕರು, ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲಂತಸ್ತಿನ ಹೆಚ್ಚುವರಿ ಸುಸಜ್ಜಿತ ಕೊಠಡಿಗಳ ಕಟ್ಟಡದ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗಿದೆ ಎಂದರು.
ಸಂಜೆ 5 ನಂತರ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಯಾವುದೇ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಇದರಿಂದ ಬಹಳಷ್ಟು ಸಮಸ್ಯೆಗಳನ್ನು ಸಾರ್ವಜನಿಕರು ಎದುರಿಸುತ್ತಿದ್ದರು. ಹೀಗಾಗಿ ಜನತೆಯ ಆರೋಗ್ಯ ದೃಷ್ಟಿಯಿಂದ ಶೀಘ್ರ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಆರಂಭಿಸಿ ವರ್ಷದೊಳಗೆ ಸಾರ್ವಜನಿಕ ಸೇವೆಗೆ ಒದಗಿಸಲಾಗುವುದು ಎಂದರು.ಹಲಗೂರು ಗ್ರಾಪಂನ ಪೌರಕಾರ್ಮಿಕರಿಗೆ ನಿವೇಶನ ಮತ್ತು ವಸತಿ ಸಮಸ್ಯೆ ಬಗ್ಗೆ ಪೌರ ಕಾರ್ಮಿಕ ಸಿಬ್ಬಂದಿ ಶಾಸಕರಿಗೆ ತಿಳಿಸಲಾಗಿ ನಿವೇಶನ ಮತ್ತು ವಸತಿಗೆ ಈಗಾಗಲೇ ಸ್ಥಳವನ್ನ ಗುರುತಿಸಲಾಗಿದೆ. ಶೀಘ್ರ ನಿವೇಶನ ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದರು.
ಈ ವೇಳೆ ಟಿಎಚ್ಒ ಡಾ.ವೀರಭದ್ರಪ್ಪ, ವೈದ್ಯಾಧಿಕಾರಿ ಡಾ.ಸೌಮ್ಯಶ್ರೀ, ಪಿಡಿಒ ಚೆಂದಿಲ್, ಗ್ರಾಪಂ ಅಧ್ಯಕ್ಷೆ ಶಶಿಕಲಾ ಆರ್. ಶ್ರೀವಾಸಚಾರಿ, ಉಪಾಧ್ಯಕ್ಷೆ ಲತಾ ಮಹದೇವ್, ಸದಸ್ಯರಾದ ಲಿಯಾಕತ್ ಅಲಿ, ಜಮೀಲ್ ಪಾಷಾ, ಸದ್ರುಲ್, ಮುಖಂಡರಾದ ಎಚ್.ವಿ.ರಾಜಣ್ಣ, ಪದ್ಮನಾಬ್, ಸಿದ್ದಯ್ಯ, ಸಿದ್ದಪ್ಪಾಜಿ, ಪ್ರಜ್ವಲ್, ಮೋಹನ್ ಕುಮಾರ್, ಜಗದೀಶ್ ಇತರರು ಇದ್ದರು.ಪುರಸಭೆಗೆ ಕೆ.ಬಿ.ಬಸವರಾಜು ನಾಮನಿರ್ದೇಶನಶ್ರೀರಂಗಪಟ್ಟಣ:ಕರ್ನಾಟಕ ರಕ್ಷಣಾ ವೇದಿಕೆ ಮಾಜಿ ಅಧ್ಯಕ್ಷ ಕೆ.ಬಿ.ಬಸವರಾಜು ಅವರನ್ನು ಪಟ್ಟಣ ಪುರಸಭೆ ನಾಮನಿರ್ದೇಶನ ಸದಸ್ಯರನ್ನಾಗಿ ರಾಜ್ಯ ಸರ್ಕಾರ ನೇಮಿಸಿ ಆದೇಶ ಹೊರಡಿಸಿದೆ. ಕರವೇ ಮತ್ತು ಕಸಾಪ ಅಧ್ಯಕ್ಷರಾಗಿ ಜೊತೆಗೆ ಹಲವು ಹೋರಾಟಗಳಲ್ಲಿ ಭಾಗವಹಿಸಿರುವ ಬಸವರಾಜು ಅವರನ್ನು ಶಾಸಕ ರಮೇಶ ಬಂಡಿಸಿದ್ದೇಗೌಡರ ಶಿಫಾರಸ್ಸಿನ ಮೇರೆಗೆ ಸರ್ಕಾರ ಪುರಸಭೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ. ಇವರ ಜೊತೆ ಗಂಜಾಂನ ಪ್ರದೀಪ, ಪಟ್ಟಣದ ಕುಪ್ಪಣ್ಣ ಗರಡಿ ಬೀದಿ ಎಸ್.ಎನ್.ಪ್ರದೀಪ ಕುಮಾರ್, ಜೋನಿಗರ ಬೀದಿ ಲಿಯಾಕತ್ ಪಾಷ, ಗಂಜಾಂನ ಸಿ.ನಾಗರತ್ನ ಗೊಂವಿಂದರಾಜು ಸೇರಿದಂತೆ ಒಟ್ಟು 5 ಮಂದಿ ನಾಮನಿರ್ದೇಶನ ಮಾಡಿದೆ.