ಸಾರಾಂಶ
ಬಿಎಸ್ಸಿ (ಕೃಷಿ) ಅಂತಿಮ ವರ್ಷದ ವಿಧ್ಯಾರ್ಥಿಗಳಿಂದ ಕಾರ್ಯನುಭವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ತರೀಕೆರೆಶಿವಮೊಗ್ಗ ಕೃಷಿ ಮಹಾವಿದ್ಯಾಲಯದ ಬಿಎಸ್ಸಿ (ಕೃಷಿ) ಅಂತಿಮ ವರ್ಷದ ವಿಧ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮ ಪ್ರಯುಕ್ತ ಸಮೀಪದ ಕರಕುಚ್ಚಿ ಗ್ರಾಮದಲ್ಲಿ ''''''''ರೈತ ಮಿತ್ರ'''''''' - ಕೃಷಿ ಮಾಹಿತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕೆ ವಿವಿ ಶಿಕ್ಷಣ ನಿರ್ದೇಶಕ ಡಾ.ಹೇಮ್ಲ ನಾಯ್ಕ್ ಉದ್ಘಾಟಿಸಿ ಮಾತನಾಡಿ ಕೃಷಿ ಮಾಹಿತಿ ಕೇಂದ್ರದಲ್ಲಿ ಕೃಷಿ ಮತ್ತು ಕೃಷಿಗೆ ಸಂಬಂಧಿತ ಜೇನು ಕೃಷಿ, ಅಣಬೆ ಬೇಸಾಯ, ಆಡು-ಕುರಿ ಸಾಕಾಣಿಕೆ, ಹೈನುಗಾರಿಕೆ, ಜೈವಿಕ ಅನಿಲ ಉತ್ಪಾದನಾ ಘಟಕ, ಅಡಕೆಯಲ್ಲಿ ಬಹು ಮಹಡಿ ಕೃಷಿ ಪದ್ಧತಿ, ಅಡಕೆ ಸಿಪ್ಪೆ ಯಿಂದ ಕಾಂಪೋಸ್ಟ್ ತಯಾರಿಕೆ, ಅಜೋಲಾ ಕೃಷಿ ಬಗ್ಗೆ ವಿವರಿಸಿದರು.ಕೃಷಿ ಮಾಹಿತಿ ಕೇಂದ್ರದಲ್ಲಿ ವೈಜ್ಞಾನಿಕ ಕೃಷಿ ಪದ್ಧತಿ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ, ಅದರ ಸದುಪಯೋಗ ಪಡಿಸಿಕೊಳ್ಳಬೇಕು. ಅಡಕೆಯಲ್ಲಿ ಮಿಶ್ರ ಬೆಳೆ ಅಳವಡಿಸಿಕೊಂಡರೆ ಉತ್ತಮ ಆದಾಯ ಪಡೆಯಬಹುದು ಮತ್ತು ಭತ್ತ ಬೆಳೆಯಲು ವಿನಂತಿಸಿದರು.
ಶಿವಮೊಗ್ಗ ಕೃಷಿ ಮಹಾವಿದ್ಯಾಲಯ ಕೀಟ ಶಾಸ್ತ್ರಜ್ಞ ಡಾ.ಶರಣಬಸಪ್ಪ ಅಡಕೆಯಲ್ಲಿ ಬರುವ ಕೀಟಗಳಾದ ಸುಳಿ ತಿಗಣೆ ಮತ್ತು ಅದರ ನಿರ್ವಹಣೆಗೆ ಕ್ವಿನಾಲ್ಫೋಸನ್ನು ಪ್ರತಿ ಲೀಟರ್ ನೀರಿಗೆ 2 ಮಿ.ಲೀ. ಬೆರೆಸಿ ಸಿಂಪಡಿಸಬೇಕು. ಕೆಂಪು ಜೇಡ ನುಸಿ ಹತೋಟಿಗೆ ಪ್ರೋಪರ್ಗೈಟ್ ಸಿಂಪಡಿಸಲು ತಿಳಿಸಿದ ಅವರು ಹಿಂಗಾರು ತಿನ್ನುವ ಹುಳು ಬಗ್ಗೆ ಮಾಹಿತಿ ನೀಡಿದರು.ಗ್ರಾಮೀಣ ಕೃಷಿ ಕಾರ್ಯಾನುಭವದ ಸಂಯೋಜಕ ಡಾ.ಗಜೇಂದ್ರ ಟಿ ಎಚ್ ಈ ಕಾರ್ಯಕ್ರಮದ ಉದ್ದೇಶವನ್ನು ರೈತರಿಗೆ ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಮೋಹನ್ ಅದ್ಯಕ್ಷತೆ ವಹಿಸಿದ್ದರು.
ಕರಕುಚ್ಚಿ ಗ್ರಾಮದ ಸಾಮಾಜಿಕ ಮತ್ತು ಸಂಪನ್ಮೂಲ ನಕ್ಷೆ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾದರಿ ಮೂಲಕ ರೈತರಿಗೆ ವಿವರಿಸಲಾಯಿತು.ಪ್ರಗತಿಪರ ರೈತ ಮೀಟ್ಯ ನಾಯ್ಕ್ , ಗಂಗಾಧರಪ್ಪ , ಡಾ.ತಿಪ್ಪೇಶ್, ಡಾ.ಗಜೇಂದ್ರ, ಡಾ.ಶರಣಬಸಪ್ಪ ಎಸ್ ದೇಷ್ಮುಖ್, ಡಾ.ಮಂಜುನಾಥ್ ಕುದರಿ, ಡಾ.ಪ್ರವೀಣ್ ಮೋಹನ್, ಅರುಣ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೃಷಿ ಮಾಹಿತಿ ಕೇಂದ್ರದಲ್ಲಿ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ ಅಡಿಕೆಗೆ ಬರುವ ರೋಗಗಳು ಹಾಗೂ ಅವುಗಳ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸುವ ಕ್ಯೂ ಆರ್.ಕೋಡ್ ಅನಾವರಣಗೊಳಿಸಲಾಯಿತು.15ಕೆಟಿಆರ್.ಕೆ.08ತರೀಕೆರೆ ಸಮೀಪದ ಕರಕುಚ್ಚಿ ಗ್ರಾಮದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದ ಉದ್ಘಾಟನೆಯನ್ನು ಕೆಳದಿ ಶಿವಪ್ಪ ನಾಯಕ ಕೃಷಿ ತೋಟಗಾರಿಕೆ ವಿ.ವಿ. ಶಿಕ್ಷಣ ನಿರ್ದೇಶಕ ಡಾ.ಹೇಮ್ಲ ನಾಯ್ಕ್ ನೆರವೇರಿಸಿದರು.