ಅಂಬಲಪಾಡಿ ಶ್ರೀ ಕಾಳಿಕಾ ಮಹಿಳಾ ಮಂಡಳಿ ಉದ್ಘಾಟನೆ

| Published : May 28 2024, 01:02 AM IST

ಸಾರಾಂಶ

ಶ್ರೀ ವಿರಾಢ್ವಿಶ್ವಕರ್ಮ ಬ್ರಾಹ್ಮಣ ಶಿಲ್ಪಕಲಾ ಸಂಘ ನಿಡಂಬೂರು, ಅಂಬಲಪಾಡಿ ಇದರ ಸಹ ಸಂಸ್ಥೆಯಾಗಿ ಶ್ರೀ ಕಾಳಿಕಾ ಮಹಿಳಾ ಮಂಡಳಿಯನ್ನು ಪಡುಕುತ್ಯಾರು ಶ್ರೀ ಆನೆಗುಂದಿ ಮಠ ಸಂಸ್ಥಾನದ ಶ್ರೀ ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಶ್ರೀ ವಿರಾಢ್ವಿಶ್ವಕರ್ಮ ಬ್ರಾಹ್ಮಣ ಶಿಲ್ಪಕಲಾ ಸಂಘ ನಿಡಂಬೂರು, ಅಂಬಲಪಾಡಿ ಇದರ ಸಹ ಸಂಸ್ಥೆಯಾಗಿ ಶ್ರೀ ಕಾಳಿಕಾ ಮಹಿಳಾ ಮಂಡಳಿಯನ್ನು ಪಡುಕುತ್ಯಾರು ಶ್ರೀ ಆನೆಗುಂದಿ ಮಠ ಸಂಸ್ಥಾನದ ಶ್ರೀ ಸರಸ್ವತೀ ಮಾತೃ ಮಂಡಳಿ ಅಧ್ಯಕ್ಷೆ ಸಂಧ್ಯಾ ಲಕ್ಷ್ಮಣ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಮಹಿಳೆಯರು ತಮ್ಮ ಕರ್ತವ್ಯ ಗಳೊಂದಿಗೆ ಸಂಸ್ಕಾರಯುತವಾಗಿ ತೊಡಗಿ‌ಸಿಕೊಂಡು ಮುನ್ನಡೆಯಬೇಕೆಂದು ಹಾರೈ‌ಸಿ, ನಿಯೋಜಿತ ಪದಾಧಿಕಾರಿಗಳಿಗೆ ಪ್ರಮಾಣವಚನ ನೆರವೇರಿಸಿದರು.

ಸಂಘ ಅಧ್ಯಕ್ಷ ಕೆ.ಜಗದೀಶ‌ ಆಚಾರ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಿವೃತ್ತ ತಹಸೀಲ್ದಾರ ಹಾಗೂ ವಿಶ್ವಕರ್ಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ. ಮುರಳೀಧರ್, ಮನೆವಾಳ್ತೆಯೊಂದಿಗೆ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡು ಮಹಿಳೆಯರು ಸಾಮಾಜಿಕವಾಗಿ ಅಭಿವೃದ್ಧಿಯಾಗಬೇಕೆಂದು ಹಾರೈಸಿದರು.

ವೇದಿಕೆಯಲ್ಲಿ ಸಂಘ ಗೌರವಾಧ್ಯಕ್ಷ ಗ್ರಾಮ ಮೊಕ್ತೇಸರ ವ್ಯಾಸರಾಯರು ಆಚಾರ್ಯ, ಉಪಾಧ್ಯಕ್ಷ ಕೆ.ಜೆ. ಗಣೇಶ ಆಚಾರ್ಯ, ಮಹಿಳಾ ಮಂಡಳಿಯ ನಿಯೋಜಿತ ಅಧ್ಯಕ್ಷೆ ವಿಲಾಸಿನಿ ಶ್ರೀನಿವಾಸ ಆಚಾರ್ಯ ಮಾತನಾಡಿ, ಎಲ್ಲರ ಸಹಕಾರ ಕೋರಿದರು.

ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.90 ಅಂಕ ಗಳಿಸಿದ ನಿತೀಶ್ ಡಿ. ಆಚಾರ್ಯ ಅವರನ್ನು ಗೌರವಿಸಲಾಯಿತು.

ಆಕಾಂಕ್ಷಾ ಪ್ರಾರ್ಥಿಸಿದರು. ವಿನುತಾ ವೈ. ಆಚಾರ್ಯ ಸ್ವಾಗತಿಸಿದರು. ಸ್ವಾತಿ ಕೆ. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಅನುಷಾ ಎಸ್. ಆಚಾರ್ಯ ವಂದಿಸಿದರು. ಸಂಘದ ಸದ‌ಸ್ಯರೆಲ್ಲರೂ ಸಹಕರಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.