ಸಾರಾಂಶ
ಬ್ಯಾಡಗಿ: ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು ಒಬ್ಬ ಜವಾಬ್ದಾರಿ ರಾಜಕಾರಣಿಯಾಗಿದ್ದು, 4 ಬಾರಿ ವಿಧಾನಸಭೆ ಪ್ರವೇಶಿಸಿದ್ದಾರೆ. ಸೋಮವಾರ ರಾಷ್ಟ್ರೀಯ ಹೆದ್ದಾರಿ ಉದ್ಘಾಟನೆ ವಿಚಾರದಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಬೇಜವಾಬ್ದಾರಿಯಾಗಿ ನಡೆದುಕೊಂಡಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಆರೋಪಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅನುದಾನ ನೀಡಿದ ಕೇಂದ್ರ ಸರ್ಕಾರದ ಜನಪ್ರತಿನಿಧಿಗಳ ಗಮನಕ್ಕೆ ತಾರದೇ ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಕೇವಲ ಒಂದು ಹಸಿರು ಬಾವುಟ ತೋರಿಸುವ ಮೂಲಕ ಮೇಲ್ಸೇತುವೆ ಏಕಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ ಎಂದು ಹೇಳುವುದು ಹಿರಿಯ ರಾಜಕಾರಣಿಗೆ ಶೋಭೆ ತರುವಂತಹುದಲ್ಲ ಎಂದರು..ಅತಿವೃಷ್ಟಿಯಿಂದ ಜಿಲ್ಲೆಯ ರೈತರು ತತ್ತರಿಸಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಸಮಸ್ಯೆಗಳ ಸುರಿಮಳೆಗಳಿವೆ. ನೊಂದವರಿಗೆ ಸಾಂತ್ವನ ಹೇಳುವುದೂ ಸೇರಿದಂತೆ ಪರಿಹಾರ ಕಂಡುಹಿಡಿಯುವ ಬದಲು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೂ ತಾರದೇ ಇನ್ನೂ ಪೂರ್ಣಗೊಳ್ಳದಿರುವ ಸೇತುವೆಯನ್ನು ಉದ್ಘಾಟಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಬಸವರಾಜ ಬೊಮ್ಮಾಯಿ ಅವರಿಗೂ ಸಹ ಇದರ ಬಗ್ಗೆ ಗೊತ್ತಿಲ್ಲ. ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಿತವಾದ ಮೇಲ್ಸೇತುವೆಯನ್ನು ರಾಜ್ಯ ಸರ್ಕಾರದ ಜನಪ್ರತಿನಿಧಿಗಳು ಯಾರಿಗೂ ತಿಳಿಸದೇ ಉದ್ಘಾಟಿಸಿರುವುದು ಹಾಸ್ಯಾಸ್ಪದ ಸಂಗತಿ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ, ಪುರಸಭೆ ಸದಸ್ಯ ವಿನಯ ಹಿರೇಮಠ, ಮುಖಂಡರಾದ ಶಿವಬಸಪ್ಪ ಕುಳೇನೂರ, ಸುರೇಶ ಯತ್ನಳ್ಳಿ, ನಿಂಗಪ್ಪ ಅಂಗಡಿ, ವಿಜಯಭರತ ಬಳ್ಳಾರಿ ಸೇರಿದಂತೆ ಇತರರಿದ್ದರು.ನದಿಗೆ ಹಾರಿ ಯುವಕ ಆತ್ಮಹತ್ಯೆ
ಗುತ್ತಲ: ವರದಾ ನದಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ಹಾಲಗಿ ಗ್ರಾಮದಲ್ಲಿ ಶನಿವಾರ ನಡೆದಿದ್ದು, ಸೋಮವಾರ ಶವ ಬೆಳವಿಗಿ ಗ್ರಾಮದ ಬಳಿ ದೊರೆತಿದೆ.ಸಂತೋಷ ದೇವನಗೌಡ ಕಾಕಡೆ (24) ಆತ್ಮಹತ್ಯೆ ಮಾಡಿಕೊಂಡ ಯುವಕ.ಕಳೆದ ಕೆಲ ವರ್ಷಗಳಿಂದ ತಂದೆಯು ಅನಾರೋಗ್ಯಕ್ಕೆ ತುತ್ತಾಗಿದ್ದರು. ಸಂತೋಷ ಅವರು ಕುಟುಂಬದ ನಿರ್ವಹಣೆ, ಸಾಲ ತೀರಿಸುವುದು ಹೇಗೆಂಬ ವಿಚಾರದಲ್ಲಿ ನೊಂದಿದ್ದರು ಎನ್ನಲಾಗಿದೆ. ಸಂತೋಷ ಅವರು ಶನಿವಾರ ಹಾಲಗಿ- ಮರೋಳ ಗ್ರಾಮದ ಮಧ್ಯೆ ವರದಾ ಸೇತುವೆ ಮೇಲಿಂದ ಹಾರಿದ್ದರು. ಶವ ಸೋಮವಾರ ಬೆಳವಿಗಿ ಗ್ರಾಮದ ಬಳಿ ದೊರೆತಿದೆ.ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದರು. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.