ಉಡುಪಿ ಧರ್ಮಪ್ರಾಂತ್ಯದ ಆಡಿಯೋ ವೀಡಿಯೋ ಸ್ಟುಡಿಯೋ ‘ಅನುಸ್ವರ’ ಉದ್ಘಾಟನೆ

| Published : Jun 14 2024, 01:00 AM IST

ಉಡುಪಿ ಧರ್ಮಪ್ರಾಂತ್ಯದ ಆಡಿಯೋ ವೀಡಿಯೋ ಸ್ಟುಡಿಯೋ ‘ಅನುಸ್ವರ’ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸ್ಟುಡಿಯೋದಲ್ಲಿ ಆಡಿಯೋ ಮತ್ತು ವೀಡಿಯೋ ರೆಕಾರ್ಡಿಂಗ್‌ಗೆ ಪ್ರತ್ಯೇಕ ವಿಭಾಗಗಳಿದ್ದು, ಅತ್ಯಾಧುನಿಕ ಮೈಕ್ರೋಫೋನ್‌ಗಳು ಮತ್ತು ಮೈಕ್ ಸ್ಟ್ಯಾಂಡ್‌ಗಳನ್ನು ಹೊಂದಿದ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಕ್ರೈಸ್ತ ಧರ್ಮಪ್ರಾಂತ್ಯದ ಆಡಿಯೋ ವೀಡಿಯೋ ಸ್ಟುಡಿಯೋ ‘ಅನುಸ್ವರ’ ಇದರ ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯಕ್ರಮ ಬುಧವಾರ ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಜರುಗಿತು.

ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಫ್ರಾನ್ಸಿಸ್ ಸೆರಾವೊ ಸ್ಟುಡಿಯೋವನ್ನು ಉದ್ಘಾಟಿಸಿ, ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಆಶೀರ್ವಚನ ನೆರವೇರಿಸಿದರು.

ಈ ವೇಳೆ ಮಾತನಾಡಿದ ಉಡುಪಿ ಧರ್ಮಾಧ್ಯಕ್ಷರು, ಆಧುನಿಕ ಮಾಧ್ಯಮಕ್ಕೆ ಅನುಗುಣವಾಗಿ ಅತ್ಯಾಧುನಿಕ ಸ್ಟುಡಿಯೊ ಸಜ್ಜುಗೊಂಡಿದ್ದು, ಧರ್ಮಪ್ರಾಂತ್ಯ ವ್ಯಾಪ್ತಿಯ ಚರ್ಚುಗಳಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ರೆಕಾರ್ಡಿಂಗ್ ಮಾಡಲು ಈ ಮೂಲಕ ಸಾಮಾಜಿಕ, ಧಾರ್ಮಿಕ ಕಾರ್ಯಕ್ರಮಗಳ ಪ್ರಸಾರಕ್ಕೆ ಸಹಕಾರಿಯಾಗಲಿದೆ ಎಂದರು.

ಸ್ಟುಡಿಯೋ ನಿರ್ಮಾಣದಲ್ಲಿ ಸಹಕರಿಸಿದ ಸಂದೇಶ ಪ್ರತಿಷ್ಠಾನ ಮಂಗಳೂರು ನಿರ್ದೇಶಕರಾದ ವಂ ಸುದೀಪ್, ಉಜ್ವಾಡ್ ಪತ್ರಿಕೆಯ ಸಂಪಾದಕ ವಂ.ಆಲ್ವಿನ್, ಸೌಂಡ್ ಎಂಜಿನಿಯರ್ ಜ್ಯೊ ಡಿಸೋಜ ಇವರನ್ನು ಧರ್ಮಪ್ರಾಂತ್ಯದ ವತಿಯಿಂದ ಗೌರವಿಸಲಾಯಿತು.

ಈ ವೇಳೆ ಧರ್ಮಪ್ರಾಂತ್ಯದ ವಿಕಾರ್ ಜನರಲ್ ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್, ಕುಲಪತಿ ಡಾ.ರೋಶನ್ ಡಿಸೋಜ, ಸಾರ್ವಜನಿಕ ಸಂಪರ್ಕಾಧಿಕಾರಿ ಡೆನಿಸ್ ಡೆಸಾ, ಅನುಗ್ರಹ ಪಾಲನ ಕೇಂದ್ರದ ನಿರ್ದೇಶಕರಾದ ವಿನ್ಸೆಂಟ್ ಕ್ರಾಸ್ತಾ, ವಲಯಗಳ ಪ್ರಧಾನ ಧರ್ಮಗುರುಗಳು, ವಿವಿಧ ಚರ್ಚುಗಳ ಧರ್ಮಗುರುಗಳು ಉಪಸ್ಥಿತರಿದ್ದರು.

ಸ್ಟುಡಿಯೋದಲ್ಲಿ ಆಡಿಯೋ ಮತ್ತು ವೀಡಿಯೋ ರೆಕಾರ್ಡಿಂಗ್‌ಗೆ ಪ್ರತ್ಯೇಕ ವಿಭಾಗಗಳಿದ್ದು, ಅತ್ಯಾಧುನಿಕ ಮೈಕ್ರೋಫೋನ್‌ಗಳು ಮತ್ತು ಮೈಕ್ ಸ್ಟ್ಯಾಂಡ್‌ಗಳನ್ನು ಹೊಂದಿದ ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ.