ಇಲ್ಲಿನ ಸಾಗರ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿ ಶಾಸಕರ ವಿಶೇಷ ಅನುದಾನದಡಿಯಲ್ಲಿ ನಿರ್ಮಿಸಲಾದ ಸುಸಜ್ಜಿತ ವಿದ್ಯಾರ್ಥಿ ತಂಗುದಾಣವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಲೋಕಾರ್ಪಣೆ ಮಾಡಿದರು.

ರಿಪ್ಪನ್‌ಪೇಟೆ: ಇಲ್ಲಿನ ಸಾಗರ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿ ಶಾಸಕರ ವಿಶೇಷ ಅನುದಾನದಡಿಯಲ್ಲಿ ನಿರ್ಮಿಸಲಾದ ಸುಸಜ್ಜಿತ ವಿದ್ಯಾರ್ಥಿ ತಂಗುದಾಣವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಲೋಕಾರ್ಪಣೆ ಮಾಡಿದರು.

ನಂತರ ಮಾತನಾಡಿ, ವಿದ್ಯಾರ್ಥಿಗಳು ತರಗತಿ ಮುಗಿಸಿಕೊಂಡು ಮನೆಗೆ ಮರಳುವಾಗ ಬಸ್‌ಗಾಗಿ ಬಿಸಿಲು, ಮಳೆಯಲ್ಲಿ ಕಾದು ನಿಲುವಂತಾಗಿದ್ದು, ಇದರಿಂದ ಸಾಕಷ್ಟು ತೊಂದರೆಯಾಗುತ್ತಿತ್ತು. ವಿದ್ಯಾರ್ಥಿಗಳು ಮತ್ತು ಪೋಷಕರು ಈ ಸಂಬಂಧ ತಂಗುದಾಣ ನಿರ್ಮಿಸುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆ ತಮ್ಮ ವಿಶೇಷ ಅನುದಾನದಡಿಯಲ್ಲಿ ತಂಗುದಾಣ ನಿರ್ಮಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಲೇಜು ಸಿಡಿಸಿ ಉಪಾಧ್ಯಕ್ಷ ಆರ್. ಎಚ್. ಶ್ರೀನಿವಾಸ್, ಡಿ. ಈ. ಮಧುಸೂದನ್, ಎಚ್. ವಿ. ಈಶ್ವರಪ್ಪಗೌಡ, ಬಗರ್‌ಹುಕುಂ ಸಮಿತಿ ಸದಸ್ಯೆ ಸಾಕಮ್ಮ, ಗ್ಯಾರಂಟಿ ಸಮಿತಿಯ ಸದಸ್ಯ ರವೀಂದ್ರ ಕೆರೆಹಳ್ಳಿ, ಕಾಲೇಜು ಉಪನ್ಯಾಸಕರಾದ ಕುಮಾರ್, ಶಿವಾಜಿರಾವ್, ಬಿ. ಹರ್ಷ, ನಾಗರಾಜ, ಪ್ರಕಾಶ ಪಾಲೇಕರ್, ವಿದ್ಯಾರ್ಥಿ ಸಂಘದ ಪ್ರತಿನಿಧಿ ಕಾವ್ಯ, ಅಶೀಫ್ ಭಾಷಾ, ರಮೇಶ್ ಪ್ಯಾನ್ಸಿ ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.