ಸಾರಾಂಶ
ಸಂಘದ ಕೋಟ್ಯಂತ ರು, ಬೆಲೆಬಾಳುವ ಆಸ್ತಿಪಾಸ್ತಿಗಳನ್ನು ಗುರುತಿಸುವ ಮೂಲಕ ಅವುಗಳಿಂದ ಅಭಿವೃದ್ಧಿ ಪಡಿಸುವುದರೊಂದಿಗೆ ಸಂಘಕ್ಕೆ ವಾರ್ಷಿಕ 15 ರಿಂದ 18 ಲಕ್ಷ ರು. ಆದಾಯ ಬರುವ ರೀತಿಯಲ್ಲಿ ಕ್ರಮ ವಹಿಸಲಾಗಿದೆ. ಸಂಘದ ನಿರ್ದೇಶಕರ ಸಹಕಾರದಿಂದ ಮುಂದಿನ ವರ್ಷಗಳಲ್ಲಿ ಕನಿಷ್ಠ 40 ರಿಂದ 50 ಲಕ್ಷ ಆದಾಯ ಬರುವ ರೀತಿಯಲ್ಲಿ ಆಸ್ತಿ ಆಸ್ತಿಗಳನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಮೃತ ಮಹೋತ್ಸವದ ನೆನಪಿನಾರ್ಥ ವಾಣಿಜ್ಯ ಮಳಿಗೆಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಎಸ್. ಬಿ.ಮಹಾದೇವು ಹೇಳಿದರು.ಪಟ್ಟಣದ ಸಂಘದ ತೂಕದ ಯಂತ್ರ ಶಾಖೆ ಆವರಣದಲ್ಲಿ 38.50 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿ, ಸಂಘದ ಸಂಸ್ಥಾಪಕ ಅಧ್ಯಕ್ಷ ದಿ.ಕೋಣಸಾಲೆ ಪಟೇಲ್ ಕೆ.ತಮ್ಮಣ್ಣಗೌಡರು ತಾಲೂಕಿನ ರೈತರ ಹಿತ ದೃಷ್ಟಿಯಿಂದ ಸ್ಥಾಪನೆ ಮಾಡಿದ ಸಹಕಾರ ಸಂಘ 75 ವರ್ಷಗಳನ್ನು ಪೂರೈಸಿ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಇದರ ಜ್ಞಾಪಕಾರ್ತವಾಗಿ ವಾಣಿಜ್ಯ ಮಳಿಗೆ ನಿರ್ಮಿಸಲಾಗಿದೆ ಎಂದರು.
ಈ ಹಿಂದೆ ಕೆಲವೊಂದು ಸ್ವಹಿತ ವ್ಯಕ್ತಿಗಳ ನಿರ್ಲಕ್ಷದಿಂದ ಅಭಿವೃದ್ಧಿಗೆ ಹಿನ್ನಡೆಯಾಗಿತ್ತು. ಆನಂತರ ಕಳೆದ 5 ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಹೊಸ ಆಡಳಿತ ಮಂಡಳಿಯಿಂದ ಸಂಘ ಆರ್ಥಿಕವಾಗಿ ಮುನ್ನಡೆ ಸಾಧಿಸಲು ಕಾರಣವಾಗಿದೆ ಎಂದರು.ಸಂಘದ ಕೋಟ್ಯಂತ ರು, ಬೆಲೆಬಾಳುವ ಆಸ್ತಿಪಾಸ್ತಿಗಳನ್ನು ಗುರುತಿಸುವ ಮೂಲಕ ಅವುಗಳಿಂದ ಅಭಿವೃದ್ಧಿ ಪಡಿಸುವುದರೊಂದಿಗೆ ಸಂಘಕ್ಕೆ ವಾರ್ಷಿಕ 15 ರಿಂದ 18 ಲಕ್ಷ ರು. ಆದಾಯ ಬರುವ ರೀತಿಯಲ್ಲಿ ಕ್ರಮ ವಹಿಸಲಾಗಿದೆ.
ಸಂಘದ ನಿರ್ದೇಶಕರ ಸಹಕಾರದಿಂದ ಮುಂದಿನ ವರ್ಷಗಳಲ್ಲಿ ಕನಿಷ್ಠ 40 ರಿಂದ 50 ಲಕ್ಷ ಆದಾಯ ಬರುವ ರೀತಿಯಲ್ಲಿ ಆಸ್ತಿ ಆಸ್ತಿಗಳನ್ನು ಅಭಿವೃದ್ಧಿಪಡಿಸಲು ಚಿಂತನೆ ನಡೆಸಲಾಗಿದೆ ಎಂದರು.ಸಂಘ ಪ್ರಸ್ತುತ 4200 ಮಂದಿ ಷೇರು ದಾರ ಸದಸ್ಯರನ್ನು ಹೊಂದಿದ್ದು, ಇವರಲ್ಲಿ 2880 ಪೂರ್ಣ ಪ್ರಮಾಣ ಸದಸ್ಯರಿದ್ದಾರೆ. ಈ ಎಲ್ಲರ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸಂಘವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಪಿ.ರಾಘವ, ನಿರ್ದೇಶಕರಾದ ಕೆ.ಟಿ.ಶೇಖರ್, ಹೊನ್ನೇಗೌಡ, ಕರಿಯಪ್ಪ, ಶಂಕರ್ ಲಿಂಗಯ್ಯ, ಸುಧಾ, ಅಮೂಲ್ಯ, ಇಂದಿರಾ, ಗೌರಮ್ಮ, ಚಂದ್ರನಾಯಕ್, ಜೆ.ಕೃಷ್ಣ, ನಾಮ ನಿರ್ದೇಶಕ ಸದಸ್ಯರಾದ ಪಿ.ಸಂದರ್ಶ, ಗೋಪಿ, ಕೆ.ಅನಿತಾ, ಪ್ರಭಾರ ಸಿಇಓ ಸಿ.ಕೆ.ಯೋಗಾನಂದ ಭಾಗವಹಿಸಿದ್ದರು.