ಸಂಪಾಜೆ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ

| Published : Mar 02 2025, 01:17 AM IST

ಸಂಪಾಜೆ ಗ್ರಾಮದಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡ ರಸ್ತೆ ಕಾಂಕ್ರಿಟ್‌ ಕಾಮಗಾರಿ ಉದ್ಘಾಟನೆಯನ್ನು ಟಿ ಎಂ ಶಾಹಿದ್‌ ತೆಕ್ಕಿಲ್‌ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಕಲ್ಲು ಅಲಡ್ಕ ಮುಂಡಡ್ಕದಲ್ಲಿ 14,36,000 ರು. ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ನಿಧಿ 15 ನೇ ಹಣಕಾಸು ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡ ರಸ್ತೆ ಕಾಂಕ್ರಿಟ್ ಕಾಮಗಾರಿ ಉದ್ಘಾಟನೆಯನ್ನು ಕೇಂದ್ರ ನಾರು ಮಂಡಳಿ ಮಾಜಿ ಸದಸ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ನೆರವೇರಿಸಿದರು.

ಬಳಿಕ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಟಿ ಎಂ ಶಾಹಿದ್, ಸಂಪಾಜೆ ಗ್ರಾಮದ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಮೂಲಕ 2 ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪಡೆದಿದೆ. ಈ ಭಾಗದ ಜನ ಪ್ರತಿನಿಧಿಗಳು ಕ್ರಿಯಾಶೀಲರಾಗಿ ಕೆಲಸ ಮಾಡುವ ಮೂಲಕ ಅನುದಾನ ತರಿಸುವಲ್ಲಿ ಪ್ರಯತ್ನ ಮಾಡಿದ್ದಾರೆ.

ನಾನು ಕೂಡ ಗಡಿಕಲ್ಲು ಅಂಗನವಾಡಿ ಕಟ್ಟಡ, ರಸ್ತೆ ಕಾಂಕ್ರಿಟ್ ಕಾಮಗಾರಿಗೆ ಅನುದಾನ ದೊರಕಿಸಿ ಕೊಟ್ಟಿದ್ದೇನೆ. ಪೇರಡ್ಕ ದರ್ಕಾಸ್ ಭಾಗದಲ್ಲಿ ರಸ್ತೆ ಕಾಂಕ್ರಿಟ್ ಕಾಮಗಾರಿ, ಅಂಗನವಾಡಿ ಕೇಂದ್ರದ ಆವರಣ ಗೋಡೆ, ಪೇರಡ್ಕ ಸೇತುವೆ ಕಾಮಗಾರಿ, ಗೂನಡ್ಕ ದರ್ಕಾಸ್ ಪೇರಡ್ಕ ರಸ್ತೆ, ಪೆರುಂಗೋಡಿ ರಸ್ತೆ ಡಾಮರು ಕಾಮಗಾರಿ ಮಾಡಿಸಿಕೊಟ್ಟಿದ್ದೇನೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಯಿಂದ ಸುಮಾರು ಎರಡು ಕೋಟಿ ಹಣ ಬರಲಿದ್ದು ಮುಂದೆಯೂ ಈ ಭಾಗದಲ್ಲಿ ಗ್ರಾಮದ ಸಮಗ್ರ ಅಭಿವೃದ್ಧಿಯಲ್ಲಿ ಕೈ ಜೋಡಿಸುತ್ತೇನೆ ಎಂದ ಅವರು ನಮ್ಮ ಪೂರ್ವಜರು ಹಾಕಿ ಕೊಟ್ಟ ದಾರಿಯಲ್ಲಿ ಮುಂದೆ ಸಾಗಿ ಎಲ್ಲ ಅಭಿವೃದ್ಧಿಗೆ ನಾನು ಸ್ಪಂದಿಸುವುದಾಗಿ ಹೇಳಿದರು.

ಈ ಸಂದರ್ಭ ಗಡಿಕಲ್ಲು ಹಾಗೂ ಕಲ್ಲುಗುಂಡಿ ಅಂಗನವಾಡಿ ಕೇಂದ್ರದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಉದ್ಘಾಟನೆಯನ್ನು ಪಂಚಾಯತ್ ಅಭಿವೃದ್ದಿ ಅಧಿಕಾರಿ ಸರಿತಾ ಡಿಸೋಜಾ, ಆನೆ ಮಲ್ಲಡ್ಕ ರಸ್ತೆ ಕಾಂಕ್ರಿಟ್ ರಸ್ತೆ ಕಾಮಗಾರಿ 3 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಕಾಮಗಾರಿಯನ್ನು ಮಾಜಿ ಪಂಚಾಯತ್ ಅಧ್ಯಕ್ಷರಾದ ಜಗದೀಶ್ ರೈ , ಕೈಪಡ್ಕ ಚರಂಡಿ ಕಾಂಕ್ರೀಟ್ ಕಾಮಗಾರಿಯನ್ನು ಪಂಚಾಯತ್ ಸದಸ್ಯೆ ವಿಮಲಾ ಪ್ರಸಾದ್, ಚಟ್ಟೆಕಲ್ಲು ರಸ್ತೆ ಕಾಂಕ್ರಿಟ್ ಕಾಮಗಾರಿ 5 ಲಕ್ಷ ರು. ವೆಚ್ಚದ ಕಾಂಕ್ರೀಟ್ ಕಾಮಗಾರಿ ಹಾಗೂ ಚಟ್ಟೆಕಲ್ಲು ಕಾಂಕ್ರೀಟ್ ಚರಂಡಿ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸುಂದರಿ, ಜಿ. ಕೆ. ಹಮೀದ್ ಗೂನಡ್ಕ, 3 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡ ಕಡೆಪಾಲ ರಸ್ತೆ ಕಾಂಕ್ರಿಟ್ ಕಾಮಗಾರಿ, ಚರಂಡಿ ಕಾಂಕ್ರೀಟ್ ಕಾಮಗಾರಿಯನ್ನು ಮಾಜಿ ಉಪಾಧ್ಯಕ್ಷರು ಗ್ರಾ.ಪಂ. ಸದಸ್ಯರಾದ ಲಸ್ಸಿ ಮೊನಾಲಿಸಾ ಹಾಗೂ ದಿನಕರ ಗೌಡ ಸಣ್ಣಮನೆ, ಪೆರುಂಗೋಡಿ ಪೇರಡ್ಕ ರಸ್ತೆ ಕಾಂಕ್ರಿಟ್ ರಸ್ತೆ ಹಾಗೂ ಚರಂಡಿ ಕಾಂಕ್ರೀಟ್ ಕಾಮಗಾರಿಯನ್ನು ಗ್ರಾ.ಪಂ. ಮಾಜಿ ಸದಸ್ಯರಾದ ಕುಸುಮಾವತಿ ಪುಟ್ಟಯ್ಯ ಗೌಡ ಉದ್ಘಾಟನೆ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷರಾದ ಸುಮಾತಿ ಶಕ್ತಿವೇಲು ವಹಿಸಿದ್ದರು.

ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿ ಮೋಹಿನಿ ವಂದಿಸಿದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯರಾದ ಸುಂದರಿ, ರಜನಿ ಶರತ್, ವಿಮಲಾ ಪ್ರಸಾದ್, ವಿಜಯ ಕುಮಾರ್ ಅಲಡ್ಕ , ಮಾಜಿ ಪಂಚಾಯಿತಿ ಸದಸ್ಯರಾದ ತಾಜ್ ಮಹಮ್ಮದ್, ಸರೋಜಿನಿ ಕಡೆಪಾಲ, ಕುಸುಮಾವತಿ ಪುಟ್ಟಯ್ಯ, ದಿನಕರ ಗೌಡ ಸಣ್ಣ ಮನೆ, ಮಹಮ್ಮದ್ ಕುಂಞಿ, ಉಪ್ಪಿ ಅಬ್ದುಲ್ ರಹಿಮಾನ್ ಸಂಪಾಜೆ, ಬಿ. ಟಿ. ಬಷೀರ್, ಇಸ್ಮಾಯಿಲ್ ಏಸ್. ಪಿ., ಮಹಮ್ಮದ್ ಏಸ್ ಎಂ , ಹ್ಯಾರಿಸ್ ಸಂಪಾಜೆ, ಪ್ರಸಾದ್ ಕಲ್ಲುಗುಂಡಿ, ಅಬ್ದುಲ್ ಖಾದರ್ ಮೊಟ್ಟಂಗರ್, ಜನಾರ್ದನ ಗೌಡ ಪೇರಡ್ಕ, ವಿಶ್ವನಾಥ್ ಗೌಡ, ಸರೋಜಿನಿ ಕಡೆಪಾಲ, ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿರು.