ಜಿಲ್ಲಾಸ್ಪತ್ರೆಗೆ ಎಕೋ ಕಾರ್ಡಿಯೋ ಯಂತ್ರ ಲೋಕಾರ್ಪಣೆ

| Published : Feb 23 2025, 12:33 AM IST

ಜಿಲ್ಲಾಸ್ಪತ್ರೆಗೆ ಎಕೋ ಕಾರ್ಡಿಯೋ ಯಂತ್ರ ಲೋಕಾರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಹೃದಯ ಸಂಬಂಧಿ ಸೇರಿದಂತೆ ವಿವಿಧ ಶಸ್ತ್ರಚಿಕಿತ್ಸೆಗಳಿಗೂ ಎಕೋ ಕಾರ್ಡಿಯೋಗ್ರಾಮ್ ಅವಶ್ಯಕವಾಗಿ ಬೇಕಿದ್ದು, ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸೇವೆ ಬರುವ ರೋಗಿಗಳಿಗೆ ನೆರವಾಗಲಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ರಾಮನಗರ: ಹೃದಯ ಸಂಬಂಧಿ ಸೇರಿದಂತೆ ವಿವಿಧ ಶಸ್ತ್ರಚಿಕಿತ್ಸೆಗಳಿಗೂ ಎಕೋ ಕಾರ್ಡಿಯೋಗ್ರಾಮ್ ಅವಶ್ಯಕವಾಗಿ ಬೇಕಿದ್ದು, ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ಸೇವೆ ಬರುವ ರೋಗಿಗಳಿಗೆ ನೆರವಾಗಲಿದೆ ಎಂದು ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದರು.

ನಗರದ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಕೆನರಾಬ್ಯಾಂಕ್ ಕ್ಯಾನ್ಫಿನ್ ಹೋಮ್ಸ್ (ಲಿ), ಸಿಎಸ್ಆರ್ ಅನುದಾನದಡಿ ಮತ್ತು ರೋಟರಿ ಬೆಂಗಳೂರು ಸಹಯೋಗದಲ್ಲಿ ನೀಡಲಾದ ಎಕೋ ಕಾರ್ಡಿಯೋಗ್ರಾಮ್ ಯಂತ್ರ ಲೋಕಾರ್ಪಣೆ ಮಾಡಿದ ಬಳಿಕ ಮಾತನಾಡಿದ ಅವರು, ರಾಮನಗರ ಜಿಲ್ಲಾಸ್ಪತ್ರೆಗೆ ಎಕೋ ಕಾರ್ಡಿಯೋ ಯಂತ್ರ ಅಳವಡಿಕೆ ಮಾಡುವಂತೆ ಬಹಳ ದಿನಗಳಿಂದ ಸಾರ್ವಜನಿಕರ ಬೇಡಿಕೆ ಇತ್ತು. ಅದಕ್ಕೆ ಕೆನರಾಬ್ಯಾಂಕ್ ಕ್ಯಾನ್ಫಿನ್ ಹೋಮ್ಸ್ (ಲಿ) ಮತ್ತು ರೋಟರಿ ಬೆಂಗಳೂರು ಅವರನ್ನು ಎಕೋ ಯಂತ್ರ ಕೊಡುಗೆಯಾಗಿ ನೀಡುವಂತೆ ಮನವಿ ಮಾಡಿದ್ದು, ಇಂದು ಅವರು 17 ಲಕ್ಷ ವೆಚ್ಚದ ಎಕೋ ಯಂತ್ರ ನೀಡಿದ್ದಾರೆ. ಹಾಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಎಕೋ ಕಾರ್ಡಿಯೋಗ್ರಾಮ್ ಯಂತ್ರ ಹೃದಯ ಸಂಬಂಧಿ ತಪಾಸಣೆಗೆ ಬಹಳ ಮುಖ್ಯ, ಹೃದಯದ ಶಕ್ತಿ, ಫಂಕ್ಷನ್, ಹೃದಯದ ಬಾಗಿಲುಗಳು ಸರಿಯಾಗಿವೆಯೇ ಎಂಬುದನ್ನು ಪರೀಕ್ಷೆಯಿಂದ ತಿಳಿಯಬಹುದಾಗಿದೆ. ಜೊತೆಗೆ ಮುಂದಿನ ಚಿಕಿತ್ಸೆ ನೀಡುವ ಬಗ್ಗೆ ಅರಿತುಕೊಳ್ಳಲು ಸಹ ನೆರವಾಗಲಿದೆ. ಇದರ ಜೊತೆಗೆ ಬಹುಮುಖ್ಯವಾಗಿ ಮೂಳೆ, ಅರ್ಣಿಯಾ, ಪಿತ್ತಕೋಶದಲ್ಲಿ ಕಲ್ಲಿನ ಶಸ್ತ್ರ ಚಿಕಿತ್ಸೆ ಮಾಡುವ ಮುನ್ನಾ ಅರವಳಿಕೆ ತಜ್ಞರು ಎಕೋ ತಪಾಸಣೆ ಮಾಡಿಸುತ್ತಾರೆ. ಅಗಾಗಿ ಆರೋಗ್ಯ ತಪಸಣೆಗಳಲ್ಲಿ ಇದರ ಪ್ರಾಮುಖ್ಯತೆ ಹೆಚ್ಚು ಕಂಡು ಬರುತ್ತದೆ ಎಂದು ಹೇಳಿದರು.

ಬಿಪಿಎಲ್ ಕಾರ್ಡ್ ದಾರರಿಗೆ ಎಕೋ ಪರೀಕ್ಷೆಗೆ 100 ರು. ಶುಲ್ಕ ನಿಗಧಿ ಮಾಡಬಹುದಾಗಿದೆ. 100 ರು. ಕಟ್ಟಲಾಗದ ಪರಿಸ್ಥಿತಿ ಇರುವವರಿಗೆ ಉಚಿತವಾಗಿ ಎಕೋ ಪರೀಕ್ಷೆ ನಡೆಸುವ ಬಗ್ಗೆಯೂ ಮೆಡಿಕಲ್ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ. ಸಾರ್ವಜನಿಕರು ಎಕೋ ಕಾರ್ಡಿಯೋಗ್ರಾಮ್ ಯಂತ್ರದ ಬಳಕೆ ಮಾಡಿಕೊಂಡು ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವಂತೆ ಮಂಜುನಾಥ್ ಮನವಿ ಮಾಡಿದರು.

ಈ ವೇಳೆ ದಿಶಾ ಸದಸ್ಯರಾದ ವಿ.ನರಸಿಂಹಮೂರ್ತಿ, ಶಿವಣ್ಣ, ಶೋಭಾ, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಕೆಎಸ್ಐಸಿ ಮಾಜಿ ಅಧ್ಯಕ್ಷ ಗೌತಮ್ ಗೌಡ, ಗ್ರಾಮಾಂತರ ಮಂಡಲ ಅಧ್ಯಕ್ಷ ಜಗದೀಶ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಮಂಜುನಾಥ್, ಕ್ಯಾನ್ಫಿನ್ ಹೋಮ್ಸ್ ರಾಘವೇಂದ್ರ, ಮುಖಂಡರಾದದ ಪ್ರಸಾದ್ ಗೌಡ, ಎಸ್.ಆರ್.ರಾಮಕೃಷ್ಣಯ್ಯ, ಜಯ್ ಕುಮಾರ್, ವೆಂಕಟೇಶ್, ಮಂಜು, ಉಮೇಶ, ಜಾಲಮಂಗಲ ರಾಜು ಮತ್ತಿತರರು ಹಾಜರಿದ್ದರು.

ಕೋಟ್ ...........

ನಾವು ಯಾವ ರಾಜ್ಯದಲ್ಲಿ ಇರುತ್ತೇವೆಯೋ, ಆ ನಾಡಿನ ಮಾತೃ ಭಾಷೆಗೆ ಹೊಂದಿಕೊಳ್ಳಬೇಕು. ಆಗ ಮಾತ್ರ ಅದು ಸರ್ವ ಭಾರತೀಯರ ಸಂಸ್ಕೃತಿಯಾಗುತ್ತದೆ. ಮರಾಠಿಗರು ಮರಾಠಿ ಭಾಷೆಯನ್ನು ಮಾತನಾಡಬಾರದು ಎಂದು ಹೇಳುವುದಿಲ್ಲ, ಅವರು ಕನ್ನಡ ನೆಲದಲ್ಲಿರುವಾಗ ಕನ್ನಡವನ್ನು ಮಾತನಾಡಬೇಕು, ಪ್ರೀತಿ ಮಾಡಬೇಕು, ಕನ್ನಡವನ್ನು ದ್ವೇಷ ಮಾಡಬಾರದು.

- ಡಾ.ಸಿ.ಎನ್.ಮಂಜುನಾಥ್, ಸಂಸದರು

22ಕೆಆರ್ ಎಂಎನ್ 2.ಜೆಪಿಜಿ

ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ಎಕೋ ಕಾರ್ಡಿಯೋಗ್ರಾಮ್ ಯಂತ್ರ ಲೋಕಾರ್ಪಣೆ ಮಾಡಿದರು.