ಕರಿನೇರವಂಡ ಕುಟುಂಬಸ್ಥರ ಗುರುಮಠ ಸಂಪರ್ಕ ಕಾಂಕ್ರಿಟ್‌ ರಸ್ತೆ ಉದ್ಘಾಟನೆ

| Published : Sep 21 2024, 01:47 AM IST

ಕರಿನೇರವಂಡ ಕುಟುಂಬಸ್ಥರ ಗುರುಮಠ ಸಂಪರ್ಕ ಕಾಂಕ್ರಿಟ್‌ ರಸ್ತೆ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದ ಕರಿನೇರವಂಡ ಕುಟುಂಬಸ್ಥರ ಗುರುಮಠಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರಿಟ್‌ ರಸ್ತೆಯನ್ನು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಗ್ರಾಮೀಣ ಪ್ರದೇಶಗಳಲ್ಲಿ ಹಲವು ಜ್ವಲಂತ ಸಮಸ್ಯೆಗಳಿವೆ. ಸರ್ಕಾರದ ಅನುದಾನ ಬಳಸಿಕೊಂಡು ಹಂತ ಹಂತವಾಗಿ ಸಮಸ್ಯೆಗೆ ಪರಿಹಾರ ದೊರಕಿಸುವಲ್ಲಿ ಪ್ರಯತ್ನಿಸುವುದಾಗಿ ಎಂದು ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಹೇಳಿದ್ದಾರೆ.

ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದ ಕರಿನೇರವಂಡ ಕುಟುಂಬಸ್ಥರ ಗುರುಮಠಕ್ಕೆ ಸಂಪರ್ಕ ಕಲ್ಪಿಸುವ ಕಾಂಕ್ರಿಟ್‌ ರಸ್ತೆ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಹಲವಾರು ಸಮಸ್ಯೆಗಳಿವೆ. ಅಲ್ಲದೆ ಅಧಿಕ ಮಳೆಯಾದ ಕಾರಣ ರಸ್ತೆಗಳು ಹಾನಿಯಾಗಿವೆ. ಕುಡಿಯುವ ನೀರು ಮತ್ತು ಇತರ ಸಮಸ್ಯೆಗಳು ಕಾಡುತ್ತಿವೆ. ಗ್ರಾಮಸ್ಥರು ಸಮಸ್ಯೆಯ ದೂರು ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಅರ್ಜಿಗಳ ತ್ವರಿತ ವಿಲೇವಾರಿಗೆ ಕ್ರಮ ವಹಿಸಲಾಗಿದೆ ಎಂದರು.

ಕರಿನೇರವಂಡ ಮಿಟ್ಟು ಅಯ್ಯಪ್ಪ ಮಾತನಾಡಿ, ಸುಮಾರು ೨೦ ವರ್ಷಗಳಿಂದ ಈ ರಸ್ತೆ ದುಃಸ್ಥಿತಿಯಲ್ಲಿತ್ತು. ಕಾಂಕ್ರಿಟ್‌ ರಸ್ತೆ ನಿರ್ಮಾಣಕ್ಕೆ ಸಲ್ಲಿಸಿದ ಅರ್ಜಿ ಪರಿಗಣಿಸಿ ಶಾಸಕ ಸುಮಾರು ಐದು ಲಕ್ಷ ರು. ವೆಚ್ಚದಲ್ಲಿ ರಸ್ತೆ ನಿರ್ಮಾಣ ಮಾಡಿಸಿರುವುದಾಗಿ ತಿಳಿಸಿದರು.

ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆಫ್ರೀ ಉತ್ತಪ್ಪ, ಸದಸ್ಯರಾದ ಪ್ರಶಾಂತ್ ಉತ್ತಪ್ಪ, ಎಂ.ಎಂ. ಇಸ್ಮಾಯಿಲ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಗುತ್ತಿಗೆದಾರಾದ ಬಲ್ಟಿಕಾಳಂಡ ರಂಜಿ, ಕರಿನೇರವಂಡ ಕುಟುಂಬಸ್ಥ ಜಾಲು ಚೆಂಗಪ್ಪ, ಜಿತನ್, ಡ್ಯಾನಿ, ಸಂಕೇತ್ ಕಾಳಯ್ಯ, ಸರಿತಾ ಮತ್ತು ರತಿ ಮತ್ತಿತರರಿದ್ದರು.