ಸಾರಾಂಶ
- ₹53 ಲಕ್ಷ ವೆಚ್ಚದ ಕಟ್ಟಡ ಶಾಸಕ ಶಾಂತನಗೌಡರಿಂದ ಉದ್ಘಾಟನೆ: ಅಧ್ಯಕ್ಷ ಸೋಮಪ್ಪ - - - ಕನ್ನಡಪ್ರಭಾ ವಾರ್ತೆ ಹೊನ್ನಾಳಿ
ತಾಲೂಕಿನ ಹಿರೇಗೋಣಿಗೆರೆ ಗ್ರಾಮ ಪಂಚಾಯಿತಿ ನೂತನ ಹೈಟೆಕ್ ಕಟ್ಟಡವನ್ನು ₹53 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ನೂತನ ಕಟ್ಟಡವನ್ನು ಶಾಸಕ ಡಿ.ಜಿ.ಶಾಂತನಗೌಡ ಜೂ.28ರಂದು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಪ್ಪ ತಿಳಿಸಿದ್ದಾರೆ.ಮಂಗಳವಾರ ಮಾಹಿತಿ ನೀಡಿರುವ ಅವರು, ಹಿರೇಗೋಣಿಗೆರೆ ಗ್ರಾ.ಪಂ. ತಾಲೂಕಿನಲ್ಲೇ ದೊಡ್ಡ ಗ್ರಾಮ ಪಂಚಾಯಿತಿಯಾಗಿದೆ. ಇದರ ವ್ಯಾಪ್ತಿಗೆ ಹಿರೇಗೋಣಿಗೆರೆ, ಚಿಕ್ಕಗೋಣಿಗೆರೆ, ಹೊನ್ನೂರು ವಡ್ಡರಹಟ್ಟಿ, ಹೊನ್ನೂರು ವಡ್ಡರಹಟ್ಟಿ ತಾಂಡಾ, ಹರಗನಹಳ್ಳಿ, ಕೋಣನತಲೆ ಗ್ರಾಮಗಳು ಬರುತ್ತವೆ. ಈ ಗ್ರಾ.ಪಂ. 17 ಸದಸ್ಯರನ್ನು ಹೊಂದಿದೆ. ಈ ಹಿಂದೆ ಇದ್ದ ಗ್ರಾಪಂ ಹಳೇ ಕಟ್ಟಡ ಶಿಥಿಲಗೊಂಡಿತ್ತು. ಮಳೆ ಬಂದರೆ ಸೋರುತ್ತಿತ್ತು. ಆದ್ದರಿಂದ ಗ್ರಾಪಂ ಸರ್ವ ಸದಸ್ಯರು ಪಕ್ಷತೀತವಾಗಿ ಚರ್ಚಿಸಿ, ಉದ್ಯೋಗ ಖಾತ್ರಿ (ನರೇಗಾ ಯೋಜನೆ) ಯೋಜನೆಯಿಂದ ₹53 ಲಕ್ಷ ವೆಚ್ಚದಲ್ಲಿ ಹಣ ಬಳಸಿ, ನೂತನ ಹೈಟೆಕ್ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ನೂತನ ಕಟ್ಟಡವನ್ನು ಜೂನ್ 28ರಂದು ಮಧ್ಯಾಹ್ನ 12.30ಕ್ಕೆ ಉದ್ಘಾಟನೆಯಾಗಲಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆ ಗ್ರಾಪಂ ಅಧ್ಯಕ್ಷ ಸೋಮಪ್ಪ, ಎನ್‍ಆರ್‌ಎಲ್‍ಎಂ ಘಟಕದ ಕಟ್ಟಡ ಉದ್ಘಾಟನೆಯನ್ನು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜನ್ ನೆರವೇರಿಸುವರು. ಹೊನ್ನೂರು ವಡ್ಡರಹಟ್ಟಿ ಗ್ರಾಮದಲ್ಲಿ ಸೋಲಾರ್ ವಿದ್ಯುತ್ ದೀಪಗಳ ಸೇವೆಗೆ ನೂತನ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಲಿದ್ದಾರೆ ಎಂದಿದ್ದಾರೆ.ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ತು ಸದಸ್ಯರಾದ ಡಿ.ಎಸ್. ಅರುಣ್ ಕುಮಾರ್, ಡಾ.ಧನಂಜಯ್ ಸರ್ಜಿ, ಎಸ್.ಎಲ್. ಭೋಜೇಗೌಡ, ಅಬ್ದುಲ್ ಜಬ್ಬಾರ್, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಜಿ.ಪಂ. ಮಾಜಿ ಅಧ್ಯಕ್ಷ ಎಚ್.ಬಿ. ಮಂಜಪ್ಪ, ಆರ್.ನಾಗಪ್ಪ, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಸಿದ್ದಪ್ಪ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್, ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಉಪವಿಭಾಗಾಧಿಕಾರಿ ವಿ.ಅಭಿಷೇಕ್, ಜಿಪಂ ಉಪ ಕಾರ್ಯದರ್ಶಿ ಕೃಷ್ಣನಾಯ್ಕ, ಜಿಪಂ ಯೋಜನಾಧಿಕಾರಿ ಮಲ್ಲಾನಾಯ್ಕ, ತಾ.ಪಂ. ಇ.ಒ. ಎಚ್.ವಿ. ರಾಘವೇಂದ್ರ, ಕಾರ್ಯಪಾಲಕ ಅಭಿಯಂತರ ಎಚ್.ಟಾಟಾ ಶಿವನ್, ಕಾರ್ಯಪಾಲಕ ಅಭಿಯಂತರ ವೈ.ಬಿ.ಹನುಮಂತಪ್ಪ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೆ.ಅರುಣ್, ಕಾರ್ಯದರ್ಶಿ ಎಸ್.ರಾಜೇಂದ್ರ, ಗ್ರಾಪಂ ಸದಸ್ಯರು ಭಾಗವಹಿಸುವರು ಎಂದು ತಿಳಿಸಿದ್ದಾರೆ.
- - - -25ಎಚ್.ಎಲ್.ಐ1: ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ಗ್ರಾಪಂ ಹೈಟೆಕ್ ಕಟ್ಟಡ.