ಶಿವಶರಣ ಶರಣೆಯರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಚಾಲನೆ

| Published : Dec 13 2024, 12:50 AM IST

ಸಾರಾಂಶ

ಬಂಕಾಪುರ ಪಟ್ಟಣದ ಸುಂಕದಕೇರಿಯ ಶ್ರೀ ದೇಸಾಯಿಮಠದ ವತಿಯಿಂದ ಜರುಗಿದ ಶತಮಾನದ ಶಿವಶರಣ ಶರಣೆಯರ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯಕ್ರಮ ಹಾಗೂ ಉತ್ಸವ ಕಾರ್ಯಕ್ರಮಕ್ಕೆ ಮುರುಘಾಮಠದ ಶ್ರೀ ಸಂಗನಬಸವ ಸ್ವಾಮಿಗಳು ಹಾಗೂ ಬಂಕಾಪುರ ದೇಸಾಯಿಮಠದ ಶ್ರೀ ಮ.ನಿ.ಪ್ರ. ಮಹಾಂತ ಮಹಾಸ್ವಾಮಿಗಳು ಚಾಲನೆ ನೀಡಿದರು.

ಬಂಕಾಪುರ: ಪಟ್ಟಣದ ಸುಂಕದಕೇರಿಯ ಶ್ರೀ ದೇಸಾಯಿಮಠದ ವತಿಯಿಂದ ಜರುಗಿದ ಶತಮಾನದ ಶಿವಶರಣ ಶರಣೆಯರ ಮೂರ್ತಿಗಳ ಪ್ರತಿಷ್ಠಾಪನಾ ಕಾರ್ಯಕ್ರಮ ಹಾಗೂ ಉತ್ಸವ ಕಾರ್ಯಕ್ರಮಕ್ಕೆ ಮುರುಘಾಮಠದ ಶ್ರೀ ಸಂಗನಬಸವ ಸ್ವಾಮಿಗಳು ಹಾಗೂ ಬಂಕಾಪುರ ದೇಸಾಯಿಮಠದ ಶ್ರೀ ಮ.ನಿ.ಪ್ರ. ಮಹಾಂತ ಮಹಾಸ್ವಾಮಿಗಳು ಚಾಲನೆ ನೀಡಿದರು.

ಇದಕ್ಕೂ ಮುನ್ನ ಟ್ರ್ಯಾಕ್ಟರ್‌ಗಳಲ್ಲಿ ಶ್ರೀ ಅಲ್ಲಮಪ್ರಭು, ಶ್ರೀ ಬಸವೇಶ್ವರರ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯನವರ ಮೂರ್ತಿಗಳನ್ನು ಇಟ್ಟುಕೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ತಲೆಯ ಮೇಲೆ ಕುಂಭ ಹೊತ್ತು ನೂರಾರು ಮಹಿಳೆಯರು ಭಕ್ತಿಯಿಂದ ಕುಂಭಮೇಳದಲ್ಲಿ ಪಾಲ್ಗೊಂಡಿದ್ದು ಗಮನ ಸೆಳೆಯಿತು. ಮೆರವಣಿಗೆಯು ಹೊಂಡದ ದುರ್ಗಾದೇವಿಯ ದೇವಸ್ಥಾನದ ಆವರಣದಿಂದ ಚಾಲನೆಗೊಂಡು ಸುಂಕದಕೇರಿ, ಸುಣಗಾರ ಓಣಿ ಮಾರ್ಗವಾಗಿ ಅರಳೆಲೆಮಠದ ದಾರಿಯ ಮುಖಾಂತರ ಮುಂದೆ ಬ್ರಾಹ್ಮಣ ಓಣಿಯಿಂದ ಟಾಕೀಸ್ ಸರ್ಕಲ್ ಹಾಗೂ ಮಾರ್ಕೆಟ್ ಮುಖಾಂತರ ಹಾದು ದೇಸಾಯಿ ಮಠಕ್ಕೆ ಬಂದು ಸೇರಿತು. ಆನಂತರ ಶ್ರೀ ಅಲ್ಲಮಪ್ರಭು, ಶ್ರೀ ಬಸವೇಶ್ವರರ, ಅಕ್ಕಮಹಾದೇವಿಯವರ ಮೂರ್ತಿಗಳನ್ನು ದೇಸಾಯಿಮಠದ ಮುಖ್ಯದ್ವಾರದಲ್ಲಿ ಹಾಗೂ ಅಂಬಿಗರ ಚೌಡಯ್ಯ ಹಾಗೂ ಮಡಿವಾಳ ಮಾಚಿದೇವರ ಮೂರ್ತಿಗಳನ್ನು ಮುಖ್ಯದ್ವಾರದ ಬಲ ಮತ್ತು ಎಡ ಭಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಮತ್ತೊಂದು ಅಕ್ಕಮಹಾದೇವಿ ಮೂರ್ತಿಯನ್ನು ದೇಸಾಯಿ ಮಠದಲ್ಲಿರುವ ಭಾವಿಯಲ್ಲಿ ಪ್ರತಿಷ್ಠಾಪಿಸಲಾಯಿತು.

ಉತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಎ.ಕೆ. ಆದವಾನಿಮಠ, ನಿಂಗನಗೌಡ ಪಾಟೀಲ, ಹುಚ್ಚಪ್ಪ ಹುಚ್ಚಯ್ಯನಮಠ, ಬಸವಂತರಾವ ಮಾಮ್ಲೆದೇಸಾಯಿ, ಎಂ.ಬಿ.ಉಂಕಿ, ದೇವಣ್ಣ ಹಳವಳ್ಳಿ, ಕಿರಣ ಸಕ್ರಿ, ಪುಟ್ಟಪ್ಪ ಕಟ್ಟಿಮನಿ, ಶೇಖಪ್ಪ ಕಟ್ಟಿಮನಿ, ರಾಘು ಗುಡಗುಡಿ, ನಟರಾಜ ಮೆಳ್ಳಳ್ಳಿ, ವಿರೂಪಾಕ್ಷಪ್ಪ ರಾಣೋಜಿ ಹಾಗೂ ಎಲ್ಲ ಸಮಾಜದ ಜನರು ಭಾಗವಹಿಸಿದ್ದರು.