ಸಾರಾಂಶ
ಹಂಪನಕಟ್ಟೆಯ ಸಿಟಿ ಲೈಟ್ ಬಿಲ್ಡಿಂಗ್‍ನಲ್ಲಿ ಆರಂಭವಾಗಿರುವ ಈ ಹೊಸ ಮಳಿಗೆ ಈಗ ಮಂಗಳೂರಿನ ಅತಿದೊಡ್ಡ ಸಿಹಿತಿನಸು ಮಳಿಗೆ ಎನಿಸಿದೆ. ಭಾರತದ ಅತ್ಯುತ್ತಮ ಸಿಹಿ ತಿನಿಸುಗಳು ಮತ್ತು ತಿಂಡಿಗಳನ್ನು ಈ ಪ್ರದೇಶದ ಗ್ರಾಹಕರಿಗೆ ಒದಗಿಸಲಿದೆ.
ಮಂಗಳೂರು: ಭಾರತದ ಅತಿ ವೇಗವಾಗಿ ಬೆಳೆಯುತ್ತಿರುವ ಸಾಂಪ್ರದಾಯಿಕ ಸಿಹಿತಿನಸು ಬ್ರ್ಯಾಂಡ್‍ಗಳಲ್ಲಿ ಒಂದಾಗಿರುವ ಇಂಡಿಯಾ ಸ್ವೀಟ್ ಹೌಸ್ ತನ್ನ 40ನೇ ಮಳಿಗೆಯನ್ನು ಮಂಗಳೂರಿನಲ್ಲಿ ಉದ್ಘಾಟಿಸಿದೆ. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಬೊಂಬಾಟ್ ಭೋಜನ ಖ್ಯಾತಿಯ ಸಿಹಿ ಕಹಿ ಚಂದ್ರು ಮತ್ತು ಎಜೆ ಸಮೂಹದ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ ಈ ಸಂದರ್ಭ ಇದ್ದರು.
ಹಂಪನಕಟ್ಟೆಯ ಸಿಟಿ ಲೈಟ್ ಬಿಲ್ಡಿಂಗ್‍ನಲ್ಲಿ ಆರಂಭವಾಗಿರುವ ಈ ಹೊಸ ಮಳಿಗೆ ಈಗ ಮಂಗಳೂರಿನ ಅತಿದೊಡ್ಡ ಸಿಹಿತಿನಸು ಮಳಿಗೆ ಎನಿಸಿದೆ. ಭಾರತದ ಅತ್ಯುತ್ತಮ ಸಿಹಿ ತಿನಿಸುಗಳು ಮತ್ತು ತಿಂಡಿಗಳನ್ನು ಈ ಪ್ರದೇಶದ ಗ್ರಾಹಕರಿಗೆ ಒದಗಿಸಲಿದೆ ಎಂದು ಸಂಸ್ಥೆಯ ಸಹ ಸಂಸ್ಥಾಪಕರಾದ ಶ್ವೇತಾ ರಾಜಶೇಖರ್ ಮತ್ತು ವಿಶ್ವನಾಥ ಮೂರ್ತಿ ಹೇಳಿದರು.ಮಂಗಳೂರಿನ ಸಿಹಿ ತಿಂಡಿ ಪ್ರೇಮ ಜನಜನಿತವಾಗಿದೆ. ಹಾಗಾಗಿ ನಮ್ಮ 40ನೇ ಮಳಿಗೆಯನ್ನು ಆರಂಭಿಸಲು ಇದಕ್ಕಿಂತ ಒಳ್ಳೆಯ ಸ್ಥಳ ಇಲ್ಲ ಎನ್ನುವುದು ನಮ್ಮ ಭಾವನೆ. ಈ ನಮ್ಮ ಮಳಿಗೆಯು ಈ ಐದು ವರ್ಷಗಳಲ್ಲಿ ನಾವು ಎಷ್ಟು ದೂರ ಬಂದಿದ್ದೇವೆ ಎಂಬುದಕ್ಕೆ ಅತ್ಯುತ್ತಮ ಪುರಾವೆಯಾಗಿದೆ ಎಂದರು.ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಶ್ವದ ಅತಿದೊಡ್ಡ ಹಾಗೂ ವಿಶಿಷ್ಟ ಎನಿಸಿದ 156 ಕೆ.ಜಿ ತೂಕದ ಮೈಸೂರುಪಾಕ್ ಕೇಕ್ ಕತ್ತರಿಸಿ ಸಂಭ್ರಮಿಸಲಾಯಿತು. ಕಾರ್ಯಕ್ರಮದಲ್ಲಿ ಸಿಹಿ ಖಾದ್ಯ ಪ್ರಿಯರು ಮತ್ತು ಗಣ್ಯರು ಭಾಗವಹಿಸಿದ್ದರು. ಕೇವಲ ನಾಲ್ಕು ವರ್ಷಗಳಲ್ಲಿ ದೇಶದ ಅತಿದೊಡ್ಡ ಸಿಹಿತಿನಸು ಮಳಿಗೆಯಾಗಿ ಬೆಳೆದಿರುವ ಇಂಡಿಯಾ ಸ್ವೀಟ್ ಹೌಸ್ ಸಾಧನೆಯ ಪಯಣಕ್ಕೆ ಸಾಕ್ಷಿಗಳಾದರು.ಇಂಡಿಯಾ ಸ್ವೀಟ್ ಹೌಸ್ ಸಂಸ್ಥೆಯು ಹಾಲು, ತುಪ್ಪ ಮತ್ತು ಖೋವಾದಂಥ ಹೈನುಗಾರಿಕೆ ಉತ್ಪನ್ನಗಳನ್ನು ನೇರವಾಗಿ ಫಾರ್ಮ್ ಗಳಿಂದ ಪಡೆದು ಸಾಂಪ್ರದಾಯಿಕ ಪಾಕಪದ್ಧತಿಗಳ ಮೂಲಕ ಖಾದ್ಯಗಳನ್ನು ತಯಾರಿಸುತ್ತದೆ. ಈ ಮೂಲಕ ಭಾರತದ ಸಿಹಿ ಖಾದ್ಯಗಳ ವಿಭಾಗದಲ್ಲಿ ಸಂಚಲನ ಉಂಟು ಮಾಡಿದೆ. ಮಂಗಳೂರಿನ ಮಳಿಗೆಯು ಅದ್ಭುತ ವಾತಾವರಣವನ್ನು ಹೊಂದಿದ್ದು, ಅತ್ಯುತ್ತಮ ಖಾದ್ಯಗಳ ಶ್ರೇಣಿಯನ್ನು ಪ್ರಸ್ತುತಪಡಿಸುತ್ತದೆ.