ಸಾರಾಂಶ
- ಪ್ರದರ್ಶನ- ಮಾರಾಟ ಮೇಳ ಉದ್ಘಾಟಿಸಿದ ಕೈಗಾರಿಕೋದ್ಯಮಿ ಎಸ್.ಎಸ್.ಗಣೇಶ
- - - ಕನ್ನಡಪ್ರಭ ವಾರ್ತೆ, ದಾವಣಗೆರೆಬೆಂಗಳೂರಿನ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯೂಯಲರ್ಸ್‌ನಿಂದ ದಾವಣಗೆರೆ ನಗರದ ಗ್ರಾಹಕರಿಗಾಗಿ ಹಮ್ಮಿಕೊಂಡಿರುವ ಮೂರು ದಿನಗಳ ವಿಶೇಷ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಿರಿಯ ಕೈಗಾರಿಕೋದ್ಯಮಿ ಎಸ್.ಎಸ್.ಗಣೇಶ್ ಉದ್ಘಾಟಿಸಿದರು.
ವಿಶೇಷ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿದ ಎಸ್.ಎಸ್. ಗಣೇಶ, ದಾವಗೆರೆಯಲ್ಲಿ ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್‌ನಿಂದ ಹಮ್ಮಿಕೊಂಡಿರುವ ಮೇಳ ಯಶಸ್ವಿಯಾಗಲಿ. ಗ್ರಾಹಕರಿಗೆ ಇಷ್ಟದ ಆಭರಣಗಳನ್ನು ಒದಗಿಸುವ ಮೂಲಕ ಉತ್ತಮ ವಹಿವಾಟು ನಡೆಸಲಿ ಎಂದು ಶುಭ ಕೋರಿದರು.ಸಿ.ಕೃಷ್ಣಯ್ಯ ಚೆಟ್ಟಿ ಗ್ರೂಪ್‌ನ ಕಾರ್ಯಕಾರಿ ನಿರ್ದೇಶಕರಾದ ತ್ರಿವೇಣಿ ವಿನೋದ್ ಮಾತನಾಡಿ, ಆ.10ರಿಂದ 12ರವರೆಗೆ ಆಭರಣಗಳ ಪ್ರದರ್ಶನ ಮತ್ತು ಮೇಳ ನಡೆಯಲಿದೆ. ಶುದ್ಧ ಚಿನ್ನ ಮತ್ತು ರತ್ನಗಳು, ಅತ್ಯುತ್ತಮವಾದ ಕರಕುಶಲತೆಯೊಂದಿಗೆ ಸಾಂಪ್ರಾದಾಯಿಕ ಮತ್ತು ಸಮಕಾಲೀನ ಸೃಷ್ಟಿಗಳ ಸಂಗ್ರಹವನ್ನು ವಿಶಿಷ್ಟ ಶ್ರೇಣಿಯೊಂದಿಗೆ ಪ್ರದರ್ಶಿಸಲಾಗುತ್ತಿದೆ. ವೈಡೂರ್ಯ, ಸಿಟ್ರಿನ್, ಮುತ್ತುಗಳು, ನೀಲ, ಮಾಣಿಕ್ಯಗಳಂತಹ ಅಪರೂಪದ ವಜ್ರಗಳ ಸೂಕ್ಷ್ಮ ವಿನ್ಯಾಸದೊಂದಿಗೆ ಸೊಬಗು, ಕ್ಲಾಸಿಕ್ ಶೈಲಿಯ ಸಮ್ಮಿಲನ ಇಲ್ಲಿದೆ ಎಂದರು.
ಸಂಸ್ಥೆಯ ಲ್ಯಾಬ್ ಗ್ರೋನ್ ಡೈಮಂಡ್ಸ್ ಹೃದಯ ಭಾಗದಲ್ಲಿ ಒಂದು ಸೊಗಸಾದ ಸ್ವರೂಪ ಹೊಂದಿವೆ. ಕಾಸ್ಮಿಕ್ ಮತ್ತು ಸೊಗಸಾದ ಕರಕುಶಲತೆಯ ಸಮ್ಮಿಳಿತವಿದೆ. ಕೈಗೆಟುಕುವ ಬೆಲೆಯ ಬೆಳ್ಳಿ ಆಭರಣಗಳು ಇಲ್ಲಿವೆ. ₹599ನಿಂದ ಬೆಲೆಗಳು ಆರಂಭವಾಗುತ್ತವೆ. ಸಿಕೆಸಿ ಹಾಲ್ ಮಾರ್ಕ್ ಹೊಂದಿರುವ 925 ಶುದ್ಧ ಬೆಳ್ಳಿಯ ಆಭರಣಗಳನ್ನು ಕ್ರ್ಯಾಶ್ ಕ್ಲಬ್‌ನಲ್ಲಿ 52 ಅಂಕಗಳ ಗುಣಮಟ್ಟದ ಪರಿಶೀಲನೆಯೊಂದಿಗೆ ಮತ್ತು 155 ವರ್ಷಗಳ ಸಾಬೀತಾದ ಪರಂಪರೆಯೊಂದಿಗೆ ನೀಡುತ್ತೇವೆ ಎಂದು ತಿಳಿಸಿದರು.ಶೈಲಿ ಮತ್ತು ಫ್ಯಾಷನ್ ಅನ್ವೇಷಿಸಲು ಉತ್ಸುಕರಾಗಿರುವ ಪ್ರತಿ ಮಹಿಳೆಗೆ, ನಮ್ಮ ಸಂಗ್ರಹವು ಅತ್ಯಾಧುನಿಕ ಆಭರಣ ಶ್ರೇಣಿ ಒದಗಿಸುತ್ತದೆ. ಪ್ರತಿಯೊಂದು ಆಭರಣವು ಆಕರ್ಷಕ ಕಥೆಯನ್ನು ಹೊಂದಿದೆ. ಸರಳತೆ, ತಾಜಾತನ ಮತ್ತು ಸ್ಪಷ್ಟತೆಯ ಮೌಲ್ಯಗಳಿಂದ ಸ್ಫೂರ್ತಿ ಪಡೆದಿದೆ. ಆಭರಣಗಳ ಪೂರ್ಣ ಸಂಗ್ರಹ ವೀಕ್ಷಿಸಲು ** https://www.ckcjewellers.com **ಗೆ ಭೇಟಿ ನೀಡಬಹುದು. ಇಲ್ಲಿನ ಗ್ರಾಹಕರಿಗಾಗಿ ಸಿ. ಕೃಷ್ಣಯ್ಯ ಚೆಟ್ಟಿ ಜ್ಯೂವೆಲರ್ಸ್ ವಿಶೇಷ ಕೊಡುಗೆಯೊಂದಿಗೆ ಬಂದಿದೆ ಎಂದು ಅವರು ಮಾಹಿತಿ ನೀಡಿದರು.
ಸಂಸ್ಥೆಯ ವ್ಯವಸ್ಥಾಪಕ ಶ್ರೀಹರಿ ಇತರರು ಇದ್ದರು.- - -
-11ಕೆಡಿವಿಜಿ4, 5:ದಾವಣಗೆರೆಯಲ್ಲಿ ವಿಶೇಷ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಹಿರಿಯ ಉದ್ಯಮಿ ಎಸ್.ಎಸ್ ಗಣೇಶ ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕಿ ತ್ರಿವೇಣಿ ವಿನೋದ್, ವ್ಯವಸ್ಥಾಪಕ ಶ್ರೀಹರಿ ಇತರರು ಇದ್ದರು.