ಸಾರಾಂಶ
ಬೈಂದೂರು ವಿಧಾನಸಭಾ ಕ್ಷೇತ್ರದ 4 ಪ್ರೌಢಶಾಲೆಗಳಲ್ಲಿ ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್ ವತಿಯಿಂದ ಯಕ್ಷಗಾನ ತರಬೇತಿ ಪಡೆದ ವಿದ್ಯಾರ್ಥಿಗಳ ಪ್ರದರ್ಶನ- ಕಿಶೋರ ಯಕ್ಷಗಾನ ಸಂಭ್ರಮ ಕಾರ್ಯಕ್ರಮವನ್ನು, ಸಿದ್ದಾಪುರದ ಸರ್ಕಾರಿ ಪ್ರೌಢಶಾಲೆಯ ಮುಂಭಾಗದಲ್ಲಿ ಡಿಸೆಂಬರ್ 28ರಂದು, ಕಮಲಶಿಲೆ ದೇವಳದ ಆಡಳಿತ ಮುಕ್ತೇಸರರಾದ ಸಚ್ಚಿದಾನಂದ ಚಾತ್ರಾ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಬೈಂದೂರು ವಿಧಾನಸಭಾ ಕ್ಷೇತ್ರದ 4 ಪ್ರೌಢಶಾಲೆಗಳಲ್ಲಿ ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್ ವತಿಯಿಂದ ಯಕ್ಷಗಾನ ತರಬೇತಿ ಪಡೆದ ವಿದ್ಯಾರ್ಥಿಗಳ ಪ್ರದರ್ಶನ- ಕಿಶೋರ ಯಕ್ಷಗಾನ ಸಂಭ್ರಮ ಕಾರ್ಯಕ್ರಮವನ್ನು, ಸಿದ್ದಾಪುರದ ಸರ್ಕಾರಿ ಪ್ರೌಢಶಾಲೆಯ ಮುಂಭಾಗದಲ್ಲಿ ಡಿಸೆಂಬರ್ 28ರಂದು, ಕಮಲಶಿಲೆ ದೇವಳದ ಆಡಳಿತ ಮುಕ್ತೇಸರರಾದ ಸಚ್ಚಿದಾನಂದ ಚಾತ್ರಾ ಉದ್ಘಾಟಿಸಿದರು.ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಪ್ರದರ್ಶನ ಸಮಿತಿಯ ಕಾರ್ಯಾಧ್ಯಕ್ಷ ಡಾ. ಜಗದೀಶ್ ಶೆಟ್ಟಿ, ಕಾರ್ಯದರ್ಶಿ ಗೋಪಾಲ್ ಕಾಂಚನ್, ಶ್ರೀಕಾಂತ್ ನಾಯಕ್, ಚಂದ್ರ ಕುಲಾಲ್, ಸುನಿಲ್ ಹೊಲಾಡು, ಮಧುಸೂದನ ಕಾಮತ್, ಕೆ. ಬೋಜ ಶೆಟ್ಟಿ, ರಾಜೇಂದ್ರ ಬೆಚ್ಚಳ್ಳಿ, ಶ್ರೀಲತಾ ಶೆಟ್ಟಿ, ಗಣೇಶ್ ಶೇಟ್, ನರಸಿಂಹ ಕುಲಾಲ್ ಭಾಗವಹಿಸಿದರು. ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ ಶುಭಾಶಂಸನೆಗೈದರು. ಯಕ್ಷಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಎಚ್.ಎನ್. ಶೃಂಗೇಶ್ವರ್ ಮತ್ತು ಗಣೇಶ್ ಬ್ರಹ್ಮಾವರ ಸಹಕರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ರಾಮ್ಸನ್ ಸರ್ಕಾರಿ ಪ್ರೌಢಶಾಲೆ ಕಂಡ್ಲೂರು ಇಲ್ಲಿನ ವಿದ್ಯಾರ್ಥಿಗಳಿಂದ ಬೇಳೂರು ವಿಷ್ಣುಮೂರ್ತಿ ನಾಯಕ್ ಇವರ ನಿರ್ದೇಶನದಲ್ಲಿ ಶ್ರೀಕೃಷ್ಣಗಾರುಡಿ ಮತ್ತು ಸರಕಾರಿ ಪ್ರೌಢಶಾಲೆ ಸಿದ್ದಾಪುರ ಇಲ್ಲಿನ ವಿದ್ಯಾರ್ಥಿಗಳಿಂದ ನಾಗೇಂದ್ರ ಗಾಣಿಗ ನಿರ್ದೇಶನದಲ್ಲಿ ಅಭಿಮನ್ಯು ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.