ಇಲ್ಲಿನ ಪಣಿಯೂರು ನೂರುಲ್ ಇಸ್ಲಾಂ ಮದರಸಾ ವತಿಯಿಂದ ಅಭಿವೃದ್ಧಿಪಡಿಸಿರುವ ‘ಮದರಸಾ ಮ್ಯಾನೇಜ್‌ಮೆಂಟ್ ಆ್ಯಪ್’ನ್ನು ಖತೀಬ್ ತೊಡರ್ ಉಸ್ತಾದ್ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಯಿತು.
ಕಾಪು: ಇಲ್ಲಿನ ಪಣಿಯೂರು ನೂರುಲ್ ಇಸ್ಲಾಂ ಮದರಸಾ ವತಿಯಿಂದ ಅಭಿವೃದ್ಧಿಪಡಿಸಿರುವ ‘ಮದರಸಾ ಮ್ಯಾನೇಜ್‌ಮೆಂಟ್ ಆ್ಯಪ್’ನ್ನು ಖತೀಬ್ ತೊಡರ್ ಉಸ್ತಾದ್ ಸಾನ್ನಿಧ್ಯದಲ್ಲಿ ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ರಾಕ್‌ಝಿರೋ ಟೆಕ್ ಪ್ರೈ.ಲಿ.ನ ಆಡಳಿತ ಮಂಡಳಿ ಸದಸ್ಯ ಶಮೀರ್ ಅಹ್ಮದ್, ಇ26 ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ಶರೀಫ್, ಸಿಇಓ ಮೊಹಮ್ಮದ್ ಹಝೀಮ್ ಶೈಮ್, ಬ್ರಾಕ್‌ಝಿರೋ ಟೆಕ್ ಸಿಓಇ ಇಸ್ಮಾಯಿಲ್ ಝಬೀಹ್ ಹಾಗೂ ಎಂಡಿ ಬಿಲಾಲ್ ಮೊಹಮ್ಮದ್ ಸುಲೈಮಾನ್ ಸಹಿತ ಗಣ್ಯರು ಉಪಸ್ಥಿತರಿದ್ದರು. ಮದರಸಾ ಶಿಕ್ಷಣ ವ್ಯವಸ್ಥೆಯನ್ನು ಆಧುನಿಕ ಹಾಗೂ ಡಿಜಿಟಲ್ ತಂತ್ರಜ್ಞಾನದೊಂದಿಗೆ ಸುಲಭವಾಗಿ ನಿರ್ವಹಿಸುವ ಉದ್ದೇಶದಿಂದ ಈ ಆ್ಯಪ್‌ನ್ನು ಪರಿಚಯಿಸಲಾಗಿದೆ. ವಿದ್ಯಾರ್ಥಿಗಳ ಮಾಹಿತಿ, ತರಗತಿಗಳ ವಿವರ, ಹಾಜರಾತಿ, ಪರೀಕ್ಷಾ ಮಾಹಿತಿ, ಶುಲ್ಕ ಹಾಗೂ ಮದರಸಾ ಆಡಳಿತಕ್ಕೆ ಸಂಬಂಧಿಸಿದ ವಿವಿಧ ಕಾರ್ಯಗಳನ್ನು ಒಂದೇ ವೇದಿಕೆ ಮೂಲಕ ನಿರ್ವಹಿಸಲು ಈ ಆ್ಯಪ್ ಸಹಕಾರಿಯಾಗಲಿದೆ.