ಸಾರಾಂಶ
ವಿಶೇಷ ಮಕ್ಕಳ ಆಸರೆ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಜೈವಿಟ್ಟಲ್ ಅವರನ್ನು ಮಾನಸಿಕ ಅಸ್ವಸ್ಥ ರೋಗಿಗಳಿಗೆ ಪ್ರಾಮಾಣಿಕವಾಗಿ ಸಮರ್ಪಿತ ಕೆಲಸಕ್ಕಾಗಿ ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಾಹೆಯ ಅಂಗಸಂಸ್ಥೆ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸ್ವಯಂಸೇವಕರಿಗೆ ಮಣಿಪಾಲದಲ್ಲಿ ಮೇ 13ರಿಂದ ಮೇ 20ರ ವರೆಗೆ ಆಯೋಜಿಸಿದ್ದ 3ನೇ ವಾರ್ಷಿಕ ವಿಶೇಷ ಶಿಬಿರವನ್ನು ರಾಜ್ಯ ಎನ್‌ಎಸ್‌ಎಸ್ ನಿರ್ದೇಶನಾಲಯದ ಯುವ ಅಧಿಕಾರಿ ಶ್ರೀಧರ ಜಿ. ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಎನ್.ಎಸ್.ಎಸ್. ಚಟುವಟಿಕೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನಕ್ಕೆ ಮೌಲ್ಯವನ್ನು ಸೇರಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಎನ್.ಎಸ್.ಎಸ್. ಕಾರ್ಯಕ್ರಮ ಸಮನ್ವಯ ಮಾಜಿ ಅಧಿಕಾರಿ ಡಾ.ಗಣನಾಥ್ ಎಕ್ಕಾರ್ ಮಾತನಾಡಿ, ವಿದ್ಯಾರ್ಥಿ ಸಮೂಹವನ್ನು ಪರಿಸರ ಸೇವೆಗೆ ಪ್ರೇರೇಪಿಸುವ ಉಪನ್ಯಾಸ ನೀಡಿದರು ನೀಡಿದರು.ಎಂಐಟಿಯ ನಿರ್ದೇಶಕ ಕಮಾಂಡರ್ ಡಾ.ಅನಿಲ್ ರಾಣಾ, ಎನ್‌ಎಸ್ಎಸ್ ಒಂದು ಅನುಭವವಾಗಿದ್ದು, ಇದು ಅನುಭವ ಹೊಂದಲು, ನಾಯಕತ್ವದ ಅಭಿವೃದ್ಧಿ ಮತ್ತು ಜ್ಞಾನವನ್ನು ಗಳಿಸಲು ಒಂದು ಅದ್ಭುತ ಅವಕಾಶವಾಗಿದೆ ಎಂದರು.
ಈ ಸಂದರ್ಭದಲ್ಲಿ ವಿಶೇಷ ಮಕ್ಕಳ ಆಸರೆ ಸಂಸ್ಥೆಯ ಅಧ್ಯಕ್ಷ ಕೆ.ಎಸ್. ಜೈವಿಟ್ಟಲ್ ಅವರನ್ನು ಮಾನಸಿಕ ಅಸ್ವಸ್ಥ ರೋಗಿಗಳಿಗೆ ಪ್ರಾಮಾಣಿಕವಾಗಿ ಸಮರ್ಪಿತ ಕೆಲಸಕ್ಕಾಗಿ ಸನ್ಮಾನಿಸಲಾಯಿತು.ಎಂಐಟಿಯ ಅಭಿವೃದ್ಧಿ ಮತ್ತು ಯೋಜನಾ ಸಹನಿರ್ದೇಶಕ ಡಾ.ರಾಮಚಂದ್ರ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಡಾ. ಲಕ್ಷ್ಮಣ್ ರಾವ್, ಡಾ. ಪೂರ್ಣಿಮಾ ಭಾಗವತ್, ಡಾ. ಆಶಾ ಸಿ.ಎಸ್, ಉಪಸ್ಥಿತರಿದ್ದರು. ಪ್ರಾಗ್ಹ್ಯಾ ಡೋರಾ ಕಾರ್ಯಕ್ರಮ ನಿರೂಪಿಸ್ದರು. ಡಾ. ಬಾಲಕೃಷ್ಣ ಮದ್ದೋಡಿ ಸ್ವಾಗತಿಸಿದರು.