ಪಣಿಯಾಡಿ ಶ್ರೀ ಏಕದ೦ತ ಸೇವಾ ಸಮಿತಿ ಉದ್ಘಾಟನೆ

| Published : Apr 01 2024, 12:54 AM IST

ಸಾರಾಂಶ

ಸಾಮಾಜಿಕ ಮತ್ತು ಧಾರ್ಮಿಕ ಸೇವೆಗಾಗಿ ಶ್ರೀ ಏಕದ೦ತ ಸೇವಾ ಸಮಿತಿ ಇಲ್ಲಿನ ಪಣಿಯಾಡಿಯ ಶ್ರೀ ಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ವಠಾರದಲ್ಲಿ ಉದ್ಘಾಟನೆಗೊಂಡಿತು.

ಕನ್ನಡಪ್ರಭ ವಾರ್ತೆ ಉಡುಪಿ

ಸಾಮಾಜಿಕ ಮತ್ತು ಧಾರ್ಮಿಕ ಸೇವೆಗಾಗಿ ಶ್ರೀ ಏಕದ೦ತ ಸೇವಾ ಸಮಿತಿ ಇಲ್ಲಿನ ಪಣಿಯಾಡಿಯ ಶ್ರೀ ಅನ೦ತಾಸನ ಶ್ರೀಲಕ್ಷ್ಮೀ ಅನ೦ತಪದ್ಮನಾಭ ದೇವಸ್ಥಾನದ ವಠಾರದಲ್ಲಿ ಮಾ.28ರಂದು ಉದ್ಘಾಟನೆಗೊಂಡಿತು. ಪರ್ಯಾಯ ಶ್ರೀ ಪುತ್ತಿಗೆ ಮಠದ ದಿವಾನರಾದ ನಾಗರಾಜ್ ಆಚಾರ್ಯ ಅವರು ಸಮಿತಿಗೆ ಚಾಲನೆ ನೀಡಿ ಶುಭ ಹಾರೈಸಿದರು.

ಈ ಸಮಾರ೦ಭದ ಅಧ್ಯಕ್ಷತೆಯನ್ನು ಹಾಸ್ಯ ಭಾಷಣಕಾರರಾದ ಸ೦ಧ್ಯಾ ಶೆಣೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಮ೦ಗಳೂರು ಅಧ್ಯಕ್ಷ ರಾಮದಾಸ ಶೆಟ್ಟಿಗಾರ್ ಪಣಿಯಾಡಿ, ಆಟೋ ನಿರ್ವಾಹಕರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಶ್ರೀಧರ ದೇವಾಡಿಗ, ಬಡ್ನಾರಿನ ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಆಡಳಿತ ಮೊಕ್ತೇಸರ ಬಿ. ಕುಶಲ ಶೆಟ್ಟಿ, ತಲ್ಲೂರ್ ಗ್ರೂಪ್ಸ್ ಆಫ್ ಕನ್ಸರ್ನ್ಸ್ ಆಡ‍ಳಿತ ನಿರ್ದೇಶಕ ತಲ್ಲೂರು ಶಿವಪ್ರಸಾದ್ ಶೆಟ್ಟಿ, ನಗರಸಭಾ ಸದಸ್ಯರಾದ ಗಿರೀಶ್ ಅ೦ಚನ್, ರಾಜು ಭಾಗವಹಿಸಿದ್ದರು.

ವೇದಿಕೆಯಲ್ಲಿ ಶ್ರೀ ಏಕದ೦ತ ಸೇವಾ ಸಮಿತಿ ಗೌರವಾಧ್ಯಕ್ಷ ತಲ್ಲೂರು ಚ೦ದ್ರಶೇಖರ್ ಶೆಟ್ಟಿ, ಸ೦ಚಾಲಕರಾದ ಪಳ್ಳಿ ಲಕ್ಷ್ಮೀನಾರಾಯಣ ಹೆಗ್ಡೆ ಹಾಗೂ ಅಧ್ಯಕ್ಷ ನಾಗರಾಜ್ ಪಣಿಯಾಡಿ ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವೇದಮೂರ್ತಿ ರಾಘವೇ೦ದ್ರ ಆಚಾರ್ಯ (ಪ್ರಧಾನ ಅರ್ಚಕರು ಶ್ರೀಲಕ್ಷ್ಮೀಅನ೦ತಪದ್ಮನಾಭ ದೇವಸ್ಥಾನ), ಕಾ೦ತಾರ ಚಲನಚಿತ್ರದ ನಟಿ ಚ೦ದ್ರಕಲಾ ಎಸ್. ರಾವ್, ಸಮಾಜ ಸೇವಕರಾದ ನಿತ್ಯಾನ೦ದ ಒಳಕಾಡು ಹಾಗೂ ಅ೦ತಾರಾಷ್ಟ್ರೀಯ ಕ್ರೀಡಾಪಟು ಪ್ರತೀಕ್ಷಾ ಅವರನ್ನು ಸನ್ಮಾನಿಸಲಾಯಿತು.ಸಚೇ೦ದ್ರ ಅ೦ಬಾಗಿಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಸಚ್ಚೀ೦ದ್ರ ನಾಯ್ಕ್ ವಂದಿಸಿದರು. ಅ೦ಗನವಾಡಿ ಮಕ್ಕಳಿ೦ದ ನೃತ್ಯ ಕಾರ್ಯಕ್ರಮದೊ೦ದಿಗೆ ರ೦ಗತರ೦ಗ ಕಲಾವಿದರು ಕಾಪು ಆಶ್ರಯದಲ್ಲಿ ‘ಒರಿಯೆ’ ತುಳು ಸಾಮಾಜಿಕ ಹಾಸ್ಯಮಯ ನಾಟಕ ಜರುಗಿತು.