22 ರಂದು ರಾಮ ಮಂದಿರ ಉದ್ಘಾಟನೆ

| Published : Jan 17 2024, 01:49 AM IST

ಸಾರಾಂಶ

ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮತ್ತು ಮಂದಿರದ ಉದ್ಘಾಟನೆಯ ಸಮಾರಂಭವನ್ನು ಜ.22 ರಂದು ನಿಗದಿಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಸಂಕೇಶ್ವರ

ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮತ್ತು ಮಂದಿರದ ಉದ್ಘಾಟನೆಯ ಸಮಾರಂಭವನ್ನು ಜ.22 ರಂದು ನಿಗದಿಪಡಿಸಲಾಗಿದೆ ಎಂದು ಶ್ರೀರಾಮ ಸೇವಾ ಸಮಿತಿ ಸದಸ್ಯ ರೋಹನ ನೇಸರಿ ಹೇಳಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.20 ರಂದು ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಶ್ರೀ ಶಂಕರಲಿಂಗ (ಕರವೀರ) ದೇವಸ್ಥಾನದಿಂದ ಹೌಸಿಂಗ್ ಕಾಲೋನಿವರಗೆ ಶ್ರೀರಾಮನ ವಿಗ್ರಹವನ್ನು ಕುಂಭಮೇಳ, ಭವ್ಯ ವಾಧ್ಯಮೇಳಗದೊಂದಿಗೆ ಮೆರವಣಿಗೆ ನಡೆಸಲಾಗುವುದು. ಜ.21 ಶ್ರೀಗಣೇಶ ಪೂಜೆ, ನವಗ್ರಹಹೋಮ-ವಾಸ್ತುಹೋಮ ನೆರವೇರಿಸಲಾಗುವುದು. ಸಂಜೆ ಶ್ರೀರಾಮ ಮೂರ್ತಿಯ ಪಟ್ಟಾಭೀಷೆಕ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿ, ಸಂಕೇಶ್ವರ ಶಂಕರಾಚಾರ್ಯ ಸಂಸ್ಥಾನ ಮಠದ ವಿದ್ಯಾನರಸಿಂಹ ಭಾರತಿ ಮಹಾಸ್ವಾಮೀಜಿ, ನೂಲ ಸುರಗೀಶ್ವರ ಸಿದ್ಧ ಸಂಸ್ಥಾನ ಮಠದ ಪಂಚಮ ಗುರುಸಿದ್ಧೇಶ್ವರ ಮಹಾಸ್ವಾಮೀಜಿ, ಹತ್ತರಗಿ ಸುಕ್ಷೇತ್ರ ಕಾರೀಮಠ ಗುರುಸಿದ್ಧೇಶ್ವರ ಮಹಾಸ್ವಾಮೀಜಿ, ಹುಕ್ಕೇರಿ ಕ್ಯಾರಗುಡ್ಡ ಅಭಿನವ ಮಂಜುನಾಥ ಮಹಾರಾಜರು ಸಾನ್ನಿಧ್ಯ ವಹಿಸಲಿದ್ದು, ಶಾಸಕ ನಿಖಿಲ್ ಕತ್ತಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಮಾಜಿ ಸಚಿವರು ಎ.ಬಿ.ಪಾಟೀಲ, ಹಿರಿಯರಾದ ಅಪ್ಪಾಸಾಹೇಬ ಶಿರಕೋಳಿ, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಗಜಾನನ ಕ್ವಳ್ಳಿ, ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಹತನೂರಿ, ಪುರಸಭೆ ಮಾಜಿ ಅಧ್ಯಕ್ಷರು ಸೀಮಾ ಹತನೂರಿ, ಮಾಜಿ ಉಪಾಧ್ಯಕ್ಷ ಅಜೀತ ಕರಜಗಿ ಆಗಮಿಸಲಿದ್ದಾರೆ.

ಗೋಷ್ಠಿಯಲ್ಲಿ ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಕಾಡಪ್ಪ ಕಮತಿ, ಉಪಾಧ್ಯಕ್ಷ ಜಿತೇಂದ್ರ ಬೋಪಳೆ, ರಾಮಗೌಡ ಗುಡಸಿ, ದಯಾನಂದ ಕಂಚಿಕಾನಟ್ಟಿ ಪುರಸಭೆ ಸದಸ್ಯ ವಿವೇಕ ಕ್ವಳ್ಳಿ, ರಾಜು ಸುತಾರ, ರಮೇಶ ಬಡಿಗೇರ, ಕಿರಣ ಬಾವಿದಂಡಿ, ಸುಶೀಲ ಪಾಟೀಲ, ರಾಜಕುಮಾರ ಸಂಸುದ್ದಿ, ಮಲ್ಲಪ್ಪ ಶಿರಗಾವಿ, ಆರ್.ಎಸ್.ಚೌಗಲಾ, ತುಕಾರಾಮ ನೂಲವಿ, ರಾಜು ಠಾಕೂರ್, ಸೇರಿದಂತೆ ಇತರರು ಇದ್ದರು.