ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕಾಲೇಜು ಶಿಕ್ಷಣ ಇಲಾಖೆ, ಮಹಿಳಾ ಸರ್ಕಾರಿ ಕಾಲೇಜು (ಸ್ವಾಯತ್ತ) ಇವರ ವತಿಯಿಂದ ನ. ೧೪ರಂದು ಬೆಳಗ್ಗೆ ೧೦.೩೦ಕ್ಕೆ ಕಾಲೇಜಿನ ವನರಂಗದಲ್ಲಿ ೨೦೨೪-೨೫ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್ ಅಂಡ್ ಗೈಡ್ಸ್ ರೇಂಜರ್ಸ್ ಹಾಗೂ ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಗುರುರಾಜ ಪ್ರಭು ತಿಳಿಸಿದರು.ಶಾಸಕ ಪಿ. ರವಿಕುಮಾರ್ ಸಮಾರಂಭ ಉದ್ಘಾಟಿಸುವರು. ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮೈಸೂರು ಉಮೇಶ್ ಮುಖ್ಯಅತಿಥಿಯಾಗಿ ಭಾಗವಹಿಸುವರು. ಡಾ. ಗುರುರಾಜ ಪ್ರಭು ಅಧ್ಯಕ್ಷತೆ ವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಾಲೇಜಿನ ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಎಚ್.ಎಸ್.ನಿಂಗರಾಜು, ಖಜಾಂಚಿ ಡಾ.ಕೆ.ಎಂ.ಮಂಗಳಮ್ಮ, ಕ್ರೀಡಾ ಸಂಚಾಲಕ ಕೆ.ಆರ್. ಲೋಕೇಶ್, ಸ್ನಾತಕ ಪದವಿ ರಾ.ಸೇ.ಯೋಜನೆ ಅಧಿಕಾರಿ ಡಾ. ಎಚ್.ಎಸ್.ಶಿವರಾಜು, ಸ್ನಾತಕೋತ್ತರ ಪದವಿ ವಿಭಾಗದ ರಾ.ಸೇ.ಯೋ. ಅಧಿಕಾರಿ ಎಂ. ಮಾದೇಗೌಡ, ಸ್ಕೌಟ್ಸ್ ಅಂಡ್ ಗೈಡ್ಸ್ ರೇಂಜರ್ಸ್ ಸಂಚಾಲಕಿ ಡಾ.ಎಂ.ಎಸ್.ರೇಖಾ, ಪತ್ರಾಂಕಿತ ವ್ಯವಸ್ಥಾಪಕ ಕೆ.ಪಿ. ರವಿಕಿರಣ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.ಕಾಲೇಜಿನ ವತಿಯಿಂದ ಜಾನಪದ ಜಾತ್ರೆ, ಕನ್ನಡದ ಹಬ್ಬ, ಸಮಾರೋಪ ಸಮಾರಂಭ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಬೇರೆ ಬೇರೆ ಕ್ಷೇತ್ರದ ಪರಿಣಿತರನ್ನು ಕರೆತಂದು ವಿಚಾರಗೋಷ್ಠಿಗಳು, ಸಂಕಿರಣಗಳನ್ನು ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮಗಳು, ಸಮಾಜಮುಖಿ ಸಂದೇಶ ನೀಡುವಂತಹವು, ಪಠ್ಯೇತರ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.ಕಾಲೇಜಿನ ಅಧ್ಯಾಪಕರಾದ ಡಾ. ನಿಂಗರಾಜು, ಡಾ. ಶಿವರಾಜು, ಡಾ. ರವಿಕಿರಣ್, ರವಿಕಾತ್ ಗೋಷ್ಠಿಯಲ್ಲಿದ್ದರು.ನಾಳೆ ಮುಖವಾಡಗಳು ಕವನಸಂಕಲನ ಬಿಡುಗಡೆ
ಕನ್ನಡಪ್ರಭ ವಾರ್ತೆ ಮಂಡ್ಯಸಿರಿ ಪ್ರಕಾಶನ ಹಾಗೂ ಕರ್ನಾಟಕ ಸಂಘದಿಂದ ತಾರಾ ಸಮೂಹ ಸಂಸ್ಥೆಗಳ ಮಾಲೀಕ ಡಾ.ಕೆ.ಚಂದ್ರಶೇಖರ್ ರಚಿಸಿರುವ ಮುಖವಾಡಗಳು ಕವನ ಸಂಕಲನ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭವನ್ನು ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಹಿರಿಯ ಪತ್ರಕರ್ತ ಡಿ.ಎನ್.ಶ್ರೀಪಾದು ಹೇಳಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ ಗೌಡ ಅವರು ಅಧ್ಯಕ್ಷತೆ ಹಾಗೂ ಅಭಿನಂದನೆಯನ್ನು ನೆರವೇರಿಸುವರು. ರಾಮನಗರ ಸಂಸದ ಡಾ.ಸಿ.ಎನ್.ಮಂಜುನಾಥ ಅವರನ್ನು ಅಭಿನಂದಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕಿ ಮೀರಾ ಶಿವಲಿಂಗಯ್ಯ, ಸಾಹಿತಿ ಡಾ.ಹೆಚ್.ಎಸ್.ಮುದ್ದೇಗೌಡ, ಮಿಮ್ಸ್ ನಿವೃತ್ತ ಅಧೀಕ್ಷಕ ಡಾ.ಎನ್.ರಾಮಲಿಂಗೇಗೌಡ, ಕಿಮ್ಸ್ ಪ್ರಾಂಶುಪಾಲ ಡಾ.ಬಿ.ಸಿ.ಭಗವಾನ್, ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ಬಿಜಿಎಸ್ ಮೆಡಿಕಲ್ ಕಾಲೇಜು ಪ್ರಾಧ್ಯಾಪಕ ಡಾ.ಆದರ್ಶ ಭಾಗವಹಿಸಲಿದ್ದಾರೆ. ಡಾ.ಚಂದ್ರಶೇಖರ್ ಉಪಸ್ಥಿತರಿರುವರು ಎಂದರು.
ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಚಂದ್ರಶೇಖರ್ ಅವರು ಹಲವು ಕೃತಿಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದು, ತಾವು ಕಂಡಂತಹ ಸಮಾಜದೊಳಗಿನ ಸಂಗತಿಗಳು, ಕಂಡ ಘಟನೆಗಳಿಗೆ ಅಕ್ಷರದ ರೂಪ ಕೊಟ್ಟು ಕವನ ಸಂಕಲನದಲ್ಲಿ ಮೂಡಿಸಿದ್ದಾರೆ. ಅವರ ಕವಿತೆಯಲ್ಲಿ ಪ್ರೀತಿ, ವಾತ್ಸಲ್ಯವಿದೆ, ವ್ಯಂಗ್ಯವಿದೆ. ವಿಡಂಬನೆ, ಜಡ್ಡುಗಟ್ಟಿದ ವ್ಯವಸ್ಥೆಯ ಬಗ್ಗೆ ತಿರಸ್ಕಾರ, ನೊಂದವರ ದನಿಯಾಗುವ ಕಾಳಜಿ ಹೀಗೆ ಹಲವು ಭಾವಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.ಗೋಷ್ಠಿಯಲ್ಲಿ ಪ್ರೊ.ಬಿ.ಜಯಪ್ರಕಾಶಗೌಡ, ಡಾ.ಚಂದ್ರಶೇಖರ್ ಬಸವರಾಜು ಇದ್ದರು.