The inauguration of this year's discourse series on Allama Prabhu's *Vachanas*—conducted by Dr. Basavalinga Pattaddevaru of the Hiremath Samsthana—will take place on Wednesday at 6:00 PM
ಭಾಲ್ಕಿ, ಇಲ್ಲಿಯ ಚನ್ನಬಸವಾಶ್ರಮ ಪರಿಸರದಲ್ಲಿ ಹಿರೇಮಠ ಸಂಸ್ಥಾನದಿಂದ ಶ್ರಾವಣ ಮಾಸದ ನಿಮಿತ್ತ ಬುಧವಾರ ಸಾಯಂಕಾಲ 6 ಗಂಟೆಗೆ ಡಾ.ಬಸವಲಿಂಗ ಪಟ್ಟದ್ದೇವರು ನಡೆಸಿ ಕೊಡುತ್ತಿರುವ ಪ್ರಸಕ್ತ ಸಾಲಿನ ಅಲ್ಲಮಪ್ರಭುವಿನ ವಚನ ದರ್ಶನ ಪ್ರವಚನ ಉದ್ಘಾಟನೆಗೊಳ್ಳಲಿದೆ. ನಾಡೋಜ ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಲಿದ್ದಾರೆ. ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸುವರು. ಶಿವಬಸವ ಸ್ವಾಮಿ, ಸಿದ್ದಬಸವ ಸ್ವಾಮಿ ಸಮ್ಮುಖ ವಹಿಸಲಿದ್ದಾರೆ. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ ಬನ್ನಾಳೆ ಪ್ರವಚನ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತಾಲೂಕು ವಚನ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗುಂಡಪ್ಪ ಸಂಗಮಕರ್ ಬಸವ ಗುರುವಿನ ಪೂಜೆ ನೆರವೇರಿಸುವರು. ಶ್ರಾವಣ ಮಾಸದ ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಸ್ವರೂಪಾ ಬಂಡೆಪ್ಪ ಬಳತೆ, ಮಲ್ಲಮ್ಮ ನಾಗನಕೇರೆ, ದೀಪಕ ಠಮಕೆ, ರಾಜು ಜುಬರೆ ಸೇರಿದಂತೆ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.--ಚಿತ್ರ 11ಬಿಡಿಆರ್63ಬಸವಲಿಂಗ ಪಟ್ಟದ್ದೇವರು.--