ವಿವೇಕ ಶಾಲಾ ಯೋಜನೆಯಡಿ ನಿರ್ಮಿಸಿದ ಶಾಲಾ ಕೊಠಡಿ ಉದ್ಘಾಟನೆ

| Published : Dec 05 2024, 12:33 AM IST

ವಿವೇಕ ಶಾಲಾ ಯೋಜನೆಯಡಿ ನಿರ್ಮಿಸಿದ ಶಾಲಾ ಕೊಠಡಿ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲೂ ಸಹ ಗುಣಮಟ್ಟದ ಶಿಕ್ಷಣವನ್ನು ಒದಗಿಸಬೇಕು, ಆ ಮೂಲಕ ಗ್ರಾಮೀಣ ಭಾಗದ ಬಡವರ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು ಎಂಬ ಆಶಯದೊಂದಿಗೆ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಲುವಾಗಿ 2022-23ನೇ ಸಾಲಿನ ವಿವೇಕ ಶಾಲಾ ಯೋಜನೆಯಡಿ 30 ಲಕ್ಷಗಳ ರು. ವೆಚ್ಚದಲ್ಲಿ ನೂತನವಾಗಿ ಸುಸಜ್ಜಿತ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ.

ಕನ್ನಡಪ್ರಭ ವಾರ್ತೆ ನಂಜನಗೂಡುಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಲುವಾಗಿ ವಿವೇಕ ಶಾಲಾ ಯೋಜನೆಯಡಿ 30 ಲಕ್ಷ ರು. ವೆಚ್ಚದಲ್ಲಿ ಎರಡು ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.ತಾಲೂಕಿನ ದೇವರಾಯ ಶೆಟ್ಟಿ ಗ್ರಾಮದಲ್ಲಿ 30 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಎರಡು ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ಖಾಸಗಿ ಶಾಲೆಗಳಂತೆ ಸರ್ಕಾರಿ ಶಾಲೆಗಳಲ್ಲೂ ಸಹ ಗುಣಮಟ್ಟದ ಶಿಕ್ಷಣವನ್ನು ಒದಗಿಸಬೇಕು, ಆ ಮೂಲಕ ಗ್ರಾಮೀಣ ಭಾಗದ ಬಡವರ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು ಎಂಬ ಆಶಯದೊಂದಿಗೆ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಸಲುವಾಗಿ 2022-23ನೇ ಸಾಲಿನ ವಿವೇಕ ಶಾಲಾ ಯೋಜನೆಯಡಿ 30 ಲಕ್ಷಗಳ ರು. ವೆಚ್ಚದಲ್ಲಿ ನೂತನವಾಗಿ ಸುಸಜ್ಜಿತ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ. ಗುಣಮಟ್ಟದ ಕಾಮಗಾರಿಗಳನ್ನು ನಡೆಸಲಾಗಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಬುಧವಾರ ತಾಲೂಕಿನ ದೇವರಾಯಶೆಟ್ಟಿಪುರ ಗ್ರಾಮದಲ್ಲಿ 20 ಲಕ್ಷ, ಹೊಸವೀಡು ಗ್ರಾಮದಲ್ಲಿ 20 ಲಕ್ಷ, ಹೊಸಕಡಜೆಟ್ಟಿ ಗ್ರಾಮದಲ್ಲಿ 20 ಲಕ್ಷ, ಕಂದೇಗಾಲ ಗ್ರಾಮದಲ್ಲಿ 20 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ, ತಾಲೂಕಿನ ಹೊಸವೀಡು, ಬೀರೆದೇವರಪುರ, ಆದನೂರು ಒಡೆಯನಪುರ, ಹಾಡ್ಯದ ಹುಂಡಿ, ಸಿದ್ದೇಗೌಡನ ಹುಂಡಿ, ಗ್ರಾಮದಲ್ಲಿ ಕನಕ ಭವನ, ಮಡುವಿನಹಳ್ಳಿ, ಹಾಡ್ಯ ಗ್ರಾಮಗಳಲ್ಲಿ ಉಪ್ಪಾರ ಸಮುದಾಯ ಭವನ, ಮಡಕೆಹುಂಡಿ, ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನಗಳಿಗೆ ತಲಾ 5 ಲಕ್ಷ, ಸೇರಿದಂತೆ ಒಟ್ಟು 1.80 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠ ನಾಯಕ, ಜಿಪಂ ಮಾಜಿ ಸದಸ್ಯ ಕೆ. ಮಾರುತಿ, ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜ್, ಗ್ರಾಮ ಅಧ್ಯಕ್ಷೆ ಶಿಲ್ಪಸುರೇಶ್, ಹಾಡ್ಯ ಗ್ರಾಪಂ ಅಧ್ಯಕ್ಷ ಹರೀಶ್, ಮುಖಂಡರಾದ ದೊರೆಸ್ವಾಮಿನಾಯಕ, ಹಾಡ್ಯ ಜಯರಾಮು, ಗೋವಿಂದರಾಜು, ಮಹದೇವು, ನೇಮತ್ ಉಲ್ಲಾ ಖಾನ್, ನಾಗರಾಜು, ಸತೀಶ್ ಇದ್ದರು.