ಸಾರಾಂಶ
ಹುಣಸಗಿ ಪಟ್ಟಣದ ಆಶೀರ್ವಾದ ಗ್ಲೋಬಲ್ ಶಾಲೆಯಲ್ಲಿ ಮಕ್ಕಳಿಂದ ವಿಜ್ಞಾನ ಮೇಳ- ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ತಯಾರಿಸಿದ ಚಂದ್ರಯಾನ-3, ರಾಮ ಮಂದಿರ, ಮಳೆ ನೀರು ಕೊಯ್ಲು, ಹವಾಮಾನ ವೈಪರಿತ್ಯ, ಹೃದಯ ಹಾಗೂ ಹೃದಯಕ್ಕೆ ಸಂಬಂಧಿಸಿದ ರೋಗಗಳು, ವಾಯು ಮಾಲಿನ್ಯ, ಪ್ರಕೃತಿಕ ವಿಕೋಪಗಳು, ಹನಿ ನೀರಾವರಿ ಸೇರಿ ಇನ್ನಿತರ ವಸ್ತುಗಳ ಪ್ರದರ್ಶನ ನೋಡಿ ಮಕ್ಕಳ ಕ್ರಿಯಾಶೀಲತೆಯನ್ನು ಪ್ರಶಂಷಿಸಿ, ಪ್ರೋತ್ಸಾಹಿಸಿದರು.
ಕನ್ನಡಪ್ರಭ ವಾರ್ತೆ ಹುಣಸಗಿ
ಮಕ್ಕಳಲ್ಲಿ ಬೌದ್ಧಿಕಮಟ್ಟ ವೃದ್ಧಿಗೊಳ್ಳಲು ಪಠ್ಯೇತರ ಚಟುವಟಿಕೆಗಳು ಪೂರಕವಾಗಿದೆ. ತಾಂತ್ರಿಕವಾಗಿ ಬೆಳೆಯುತ್ತಿರುವ ಹಿಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಲ್ಲಿ ಅಕ್ಷರ ಜ್ಞಾನದ ಜೊತೆಗೆ ಗುಣಾತ್ಮಕ ಶಿಕ್ಷಣ ದೊರೆಯಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ಹೇಳಿದರು.ಪಟ್ಟಣದ ಆಶೀರ್ವಾದ ಗ್ಲೋಬಲ್ ಶಾಲೆಯಲ್ಲಿ ಮಕ್ಕಳಿಂದ ವಿಜ್ಞಾನ ಮೇಳ- ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ತಯಾರಿಸಿದ ಚಂದ್ರಯಾನ-3, ರಾಮ ಮಂದಿರ, ಮಳೆ ನೀರು ಕೊಯ್ಲು, ಹವಾಮಾನ ವೈಪರಿತ್ಯ, ಹೃದಯ ಹಾಗೂ ಹೃದಯಕ್ಕೆ ಸಂಬಂಧಿಸಿದ ರೋಗಗಳು, ವಾಯು ಮಾಲಿನ್ಯ, ಪ್ರಕೃತಿಕ ವಿಕೋಪಗಳು, ಹನಿ ನೀರಾವರಿ ಸೇರಿ ಇನ್ನಿತರ ವಸ್ತುಗಳ ಪ್ರದರ್ಶನ ನೋಡಿ ಮಕ್ಕಳ ಕ್ರಿಯಾಶೀಲತೆಯನ್ನು ಪ್ರಶಂಷಿಸಿ, ಪ್ರೋತ್ಸಾಹಿಸಿದರು.
ಸಂಸ್ಥೆ ಅಧ್ಯಕ್ಷ ಡಾ. ವೀರಭದ್ರಗೌಡ ಹೊಸಮನಿ, ಕಾರ್ಯದರ್ಶಿ ಡಾ. ಆಶಾ ಹೊಸಮನಿ, ಉಪಾಧ್ಯಕ್ಷ ಡಾ. ಚನ್ನಬಸನಗೌಡ, ಮುಖ್ಯ ಗುರು ಸೌದಾಗರ್ ಪವಾರ್, ಮಲ್ಲಿಕಾರ್ಜುನಯ್ಯ, ಆಡಳಿತ ಅಧಿಕಾರಿ ಬಸವನಗೌಡ ವಠಾರ ಸೇರಿದಂತೆ ಇತರರಿದ್ದರು.