ಸಿದ್ದಾಪುರದಲ್ಲಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಉದ್ಘಾಟನೆ

| Published : Dec 21 2024, 01:15 AM IST

ಸಿದ್ದಾಪುರದಲ್ಲಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಹಕ ಹಾಗೂ ಬ್ಯಾಂಕಿನ ನಡುವೆ ಸಿಬ್ಬಂದಿ ಸೇವೆ ವಿಶ್ವಾಸದ ಸೇತುವೆಯಾಗಿ ಕೆಲಸ ಮಾಡುತ್ತದೆ. ಬ್ಯಾಂಕಿನ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಜನರ ವಿಶ್ವಾಸ ಕಳೆದುಕೊಳ್ಳುವ ಕೆಲಸ ಯಾವತ್ತೂ ಮಾಡಬಾರದು.

ಸಿದ್ದಾಪುರ: ಶಿರಸಿ ಅರ್ಬನ್ ಸಹಕಾರಿ ಬ್ಯಾಂಕಿನ ೨೨ನೇ ಶಾಖೆಯು ಡಿ. ೧೮ರಂದು ಪಟ್ಟಣದ ಎಪಿಎಂಸಿ ರಸ್ತೆಯಲ್ಲಿರುವ ಸ್ವಂತ ಕಟ್ಟಡದಲ್ಲಿ ಆರಂಭವಾಯಿತು.

ಶಾಖೆಯನ್ನು ಉದ್ಘಾಟಿಸಿದ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀಪಾದ ವಡೇರ ಸ್ವಾಮೀಜಿ, ಗೋಕರ್ಣದ ಪರ್ತಗಾಳಿ ಮಠವು ಶಿರಸಿ ಅರ್ಬನ್ ಬ್ಯಾಂಕಿನೊಂದಿಗೆ ಹಲವಾರು ವರ್ಷಗಳಿಂದ ಅವಿರತ ಸಂಬಂಧವನ್ನು ಹೊಂದಿದ್ದು, ಬ್ಯಾಂಕು ಸಿದ್ದಾಪುರದಲ್ಲಿ ನೂತನ ಶಾಖೆ ಪ್ರಾರಂಭಿಸಿರುವುದು ಸಂತಸ ತಂದಿದೆ ಎಂದರು.

ಗ್ರಾಹಕ ಹಾಗೂ ಬ್ಯಾಂಕಿನ ನಡುವೆ ಸಿಬ್ಬಂದಿ ಸೇವೆ ವಿಶ್ವಾಸದ ಸೇತುವೆಯಾಗಿ ಕೆಲಸ ಮಾಡುತ್ತದೆ. ಬ್ಯಾಂಕಿನ ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಜನರ ವಿಶ್ವಾಸ ಕಳೆದುಕೊಳ್ಳುವ ಕೆಲಸ ಯಾವತ್ತೂ ಮಾಡಬಾರದು. ಜನರು ವಿಶ್ವಾಸ ಕಳೆದುಕೊಂಡರೆ ಮತ್ತೆ ಅತ್ತ ಕಡೆ ಕಾಲಿಡುವುದಿಲ್ಲ. ಶಿರಸಿ ಅರ್ಬನ್ ಬ್ಯಾಂಕಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಗ್ರಾಹಕರು ಸೇವಾ ಮನೋಭಾವದಿಂದ ಜನರ ವಿಶ್ವಾಸ ಗಳಿಸಿ ಹೆಚ್ಚಿನ ಶಾಖೆಗಳನ್ನು ತೆರೆಯುತ್ತಿದ್ದಾರೆ ಎಂದು ಶ್ಲಾಘಿಸಿದರು.

ಜಯದೇವ ನಿಲೇಕಣಿಯವರ ಅಧ್ಯಕ್ಷತೆಯಲ್ಲಿ ಬ್ಯಾಂಕು ಕಳೆದ ೫ ವರ್ಷದಲ್ಲಿ ೬ ಹೊಸ ಶಾಖೆಗಳನ್ನು ರಾಜ್ಯದ ದೊಡ್ಡ ಪಟ್ಟಣದಲ್ಲಷ್ಟೇ ಅಲ್ಲದೆ ಚಿಕ್ಕ ಚಿಕ್ಕ ಊರಿನಲ್ಲೂ ತೆರೆದು ಅಲ್ಲಿಯ ಜನರಿಗೆ ಸೇವೆ ಕೊಡುವ ಉದ್ದೇಶ ಇರುವುದರಿಂದ ಬ್ಯಾಂಕು ಅಭಿವೃದ್ಧಿ ಹೊಂದುತ್ತಿದೆ. ಬ್ಯಾಂಕು ಇನ್ನೂ ಹೆಚ್ಚಿನ ಶಾಖೆಗಳನ್ನು ಮುಂದಿನ ದಿನಗಳಲ್ಲಿ ತೆರೆದು, ಶ್ರೀಮಠವಿರುವ ನೆರೆಯ ಗೋವಾದಲ್ಲಿಯೂ ನೂತನ ಶಾಖೆ ತೆರೆಯಲು ಯಶಸ್ಸು ಸಿಗಲಿ ಎಂದು ಆಶೀರ್ವದಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿರಸಿ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಜಯದೇವ ನಿಲೇಕಣಿ ಮಾತನಾಡಿ, ಶ್ರೀಗಳ ಆಶೀರ್ವಾದದಿಂದ ಈ ಸಾಲಿನಲ್ಲಿ ಮಂಗಳೂರು, ಗದಗ, ಧಾರವಾಡ ಹಾಗೂ ಸಿದ್ದಾಪುರದಲ್ಲಿ ಶಾಖೆಗಳನ್ನು ಪ್ರಾರಂಭಿಸಿದೆ. ಬ್ಯಾಂಕು ೪೭೦೦೦ಕ್ಕಿಂತ ಹೆಚ್ಚು ಸದಸ್ಯರನ್ನು, ₹೧,೩೦೦ ಕೋಟಿ ಠೇವು ಹಾಗೂ ₹೯೧೦ ಕೋಟಿ ಸಾಲ ನೀಡಿ, ಒಟ್ಟೂ ₹೨,೨೦೦ ಕೋಟಿ ವ್ಯವಹಾರದೊಂದಿಗೆ ಕರ್ನಾಟಕದ ಪ್ರಮುಖ ಸಹಕಾರಿ ಬ್ಯಾಂಕಾಗಿ ಗುರುತಿಸಿಕೊಂಡಿದೆ ಎಂದು ಹೆಮ್ಮೆಯಿಂದ ಹೇಳಿದರು.

ಈ ಸಂದರ್ಭದಲ್ಲಿ ನೂತನ ಎಟಿಎಂ, ಲಾಕರ್ ವ್ಯವಸ್ಥೆಯನ್ನು ಶ್ರೀಗಳು ಉದ್ಘಾಟಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಸಂತೋಷ್ ಎಸ್. ಪಂಡಿತ, ಮಂಡಳಿಯ ನಿರ್ದೇಶಕ ಮಿಲಿಂದ ವಿ. ಪಂಡಿತ, ಮೋಹನ ಎಸ್. ಪ್ರಭು, ಸದಾನಂದ ಎಂ. ನಾಯ್ಕ, ಟಿ. ಎಸ್. ಬಾಲಮಣಿ, ಸುವರ್ಣಾ ಪಿ. ಪ್ರಭು, ಸುರೇಂದ್ರ ಜೆ. ರೇವಣಕರ, ವರೀಂದ್ರ ಎಸ್. ಕಾಮತ, ನಿತಿನ ಎಸ್. ಕಾಸರಕೋಡ, ಪ್ರಕಾಶ ವಿ. ಪೈ, ಸೂರ್ಯಕಾಂತ ಡಿ. ದೇವಳಿ, ಪ್ರೊ. ಕೆ.ಎನ್. ಹೊಸಮನಿ, ಸಂತೋಷ ಎಸ್. ಉಡ್ಪಿಕರ್, ವಂದನಾ ಕಾಮತ, ರಾಜೇಶ ಜಿ. ಧಾಕಪ್ಪ, ಬ್ರುನೋ ಎಫ್. ಮಸ್ಕರೆನಸ್, ಟಿ. ಶ್ರೀಧರಮೂರ್ತಿ, ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಕೆ.ಎಸ್. ಶ್ರೀನಿವಾಸ ಹಾಗೂ ಸತೀಶ ಎಸ್. ಬಾಡಗಾಂವಕರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಎಸ್. ಶೆಟ್ಟರ್, ಹಿರಿಯ ಅಧಿಕಾರಿಗಳು, ಶಾಖಾ ವ್ಯವಸ್ಥಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು. ಪ್ರೊ. ಕೆ.ಎನ್. ಹೊಸಮನಿ ನಿರ್ವಹಿಸಿದರು.