ಮಡಿಕೇರಿ ನಗರ ದಸರಾ ಸಮಿತಿಯ ಕಚೇರಿ ಉದ್ಘಾಟನೆ ಮತ್ತು ದಸರಾ ಲೋಗೋ ಅನಾವರಣ ಜರುಗಿತು.

ಮಡಿಕೇರಿ : ಮಡಿಕೇರಿ ನಗರ ದಸರಾ ಸಮಿತಿಯ ಕಚೇರಿ ಉದ್ಘಾಟನೆ ಮತ್ತು ದಸರಾ ಲೋಗೋ ಅನಾವರಣ ಜರುಗಿತು.

ನಗರಸಭಾ ಸಂಕೀಣ೯ದಲ್ಲಿ ದಸರಾ ಕಚೇರಿಯಲ್ಲಿ ಗಣಪತಿ ಹೋಮ ಮೂಲಕ ದಸರಾ ಕಚೇರಿಗೆ ಚಾಲನೆ ನೀಡಲಾಯಿತು. ಅಂತೆಯೇ ಮಡಿಕೇರಿ ನಗರ ದಸರಾ ಸಂಬಂಧಿತ ಲೋಗೋವನ್ನು ಈ ಸಂದರ್ಭ ಅನಾವರಣಗೊಳಿಸಲಾಯಿತು.ಮಡಿಕೇರಿ ನಗರಸಭಾ ಅಧ್ಯಕ್ಷೆ ಮತ್ತು ದಸರಾ ಸಮಿತಿಯ ಅಧ್ಯಕ್ಷರಾದ ಪಿ. ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಖಜಾಂಜಿ ಸಬಿತಾ, ನಗರಸಭೆ ಪೌರಾಯುಕ್ತರಾದ ಎಚ್.ಆರ್. ರಮೇಶ್, ನಗರಸಭೆ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ, ದಸರಾ ಸಮಿತಿಯ ಗೌರವ ಸಲಹೆಗಾರರಾದ ಸತೀಶ್ ಪೈ, ಜಿ.ಚಿದ್ವಿಲಾಸ್, ಸಾಂಸ್ಕೃತಿಕ ಸಮಿತಿಯ ಗೌರವ ಸಲಹೆಗಾರ ಅನಿಲ್ ಹೆಚ್.ಟಿ., ದಸರಾ ಸಮಿತಿ ಪ್ರಮುಖರಾದ ಎ.ಸಿ.ದೇವಯ್ಯ, ಅಜ್ಜೇಟಿರ ಲೋಕೇಶ್, ವಿನು ಈರಪ್ಪ, ನವೀನ್ ಅಂಬೆಕಲ್. ಮುದ್ದುರಾಜ್, ರವಿ, ಮುನೀರ್ ಮಾಚರ್, ದಸರಾ ಸಮಿತಿ ವ್ಯವಸ್ಥಾಪಕ ಶಶಿಕುಮಾರ್, ನಗರಸಭೆ ಸದಸ್ಯರಾದ ಚಂದ್ರಶೇಖರ್, ಮಡಿಕೇರಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಚಂದ್ರು, ನವೀನ್ ಸೇರಿದಂತೆ ಪ್ರಮುಖರು ಹಾಜರಿದ್ದರು. ಶ್ರೀಕೖಷ್ಣ ಉಪಾಧ್ಯಾಯ ಅವರು ದೈವಿಕ ಕಾಯ೯ಗಳನ್ನು ಕೈಗೊಂಡರು. ಈ ವರ್ಷ ಮಡಿಕೇರಿ ದಸರಾ ಸಂದರ್ಭ ನಾಲ್ಕು ಶಕ್ತಿದೇವತೆಗಳ ಕರಗ ಪೂಜೆಯು ಅ.11 ರಂದು ಜರುಗಲಿದ್ದು, ಗಾಂಧಿ ಮೈದಾನದಲ್ಲಿ ಅ.12 ರಂದು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ.