ಸಾರಾಂಶ
ಟಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ನೆಮ್ಮೆಲೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕಟ್ಟಡವನ್ನು ವಿರಾಜಪೇಟೆ ಶಾಸಕ ಪೊನ್ನಣ್ಣ ಲೋಕಾರ್ಪಣೆ ಮಾಡಿದರು.
ಕನ್ನಡಪ್ರಭ ವಾರ್ತೆ ಶ್ರೀಮಂಗಲ
ಟಿ. ಶೆಟ್ಟಿಗೇರಿ ಗ್ರಾ. ಪಂ. ವ್ಯಾಪ್ತಿಯ ನೆಮ್ಮಲೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಅಂಗನವಾಡಿ ಕಟ್ಟಡವನ್ನು ವಿರಾಜಪೇಟೆ ಶಾಸಕ ಅಜ್ಜಿ ಕುಟ್ಟಿರ ಎಸ್. ಪೊನ್ನಣ್ಣ ಲೋಕಾರ್ಪಣೆ ಮಾಡಿದರು.ಬಳಿಕ ಮಾತನಾಡಿದ ಶಾಸಕರು, ಅಂಗನವಾಡಿಯಲ್ಲಿ ಕಲಿಯುವ ಪುಟಾಣಿ ಮಕ್ಕಳು ತಮ್ಮ ವಿದ್ಯಾಭ್ಯಾಸ ಹಾಗೂ ಭವಿಷ್ಯವನ್ನು ಇಲ್ಲಿಂದಲೇ ಪ್ರಾರಂಭಿಸುತ್ತಾರೆ. ಆದ್ದರಿಂದ ಅಂಗನವಾಡಿ ಕೇಂದ್ರಗಳು ಮಕ್ಕಳ ಆರಂಭಿಕ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸುವಂತಾಗಲು ಸರಕಾರ ಹೆಚ್ಚು ಕಾಳಜಿ ವಹಿಸುತ್ತಿದೆ. ಅಂಗನವಾಡಿಯ ಶಿಕ್ಷಕಿಯರು, ಮಕ್ಕಳ ವಿದ್ಯಾಭ್ಯಾಸಕ್ಕೆ ಭದ್ರ ಬುನಾದಿ ಆಗುವಂತಹ ಕೆಲಸವನ್ನು ಮಾಡಬೇಕೆಂದು ಹೇಳಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ವಲಯ ಅಧ್ಯಕ್ಷ ತಿತೀರ ಪ್ರಭು, ತಾಲೂಕು ಅಕ್ರಮ ಸಕ್ರಮ ಅಧ್ಯಕ್ಷ ಲಾಲಾ ಅಪ್ಪಣ್ಣ, ಪಕ್ಷದ ಪ್ರಮುಖರಾದ ಚೊಟ್ಟೆಯಂಡಮಾಡ ವಿಶು, ಆಲೆಮಾಡ ಸೋಮಣ್ಣ, ಪೆಮ್ಮಂಡ ರಾಜ, ಮುಕ್ಕಾಟಿರ ಸಂದೀಪ್, ಕೆ. ಎಂ.ಬಾಲಕೃಷ್ಣ, ಬೋಸು, ದಿನೇಶ್, ಮಂಜು, ಕಿರಣ್, ಅನಿಲ್, ಮನು, ಕೃಷ್ಣ, ನಟೇಶ್, ಉದಯ್, ದೀಪು, ಸುರೇಂದ್ರ, ದರ್ಶನ್, ರವಿ, ಸತೀಶ್, ಹಾಗೂ ಪ್ರಮುಖರು ಉಪಸ್ಥಿತರಿದ್ದರು.