ನಗರದ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯ ಎರಡನೇ ಮಹಡಿಯಲ್ಲಿ ಯು.ಎಸ್. ನಾಯಕ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಪಾಂಗಾಳ ರಬೀಂದ್ರ ನಾಯಕ್ ಸ್ಮಾರಕ ಸಭಾಭವನವನ್ನು ಸಂಸ್ಥೆಯ ಟ್ರಸ್ಟಿ ಸೀತಾರಾಮ ನಾಯಕ್ ಉದ್ಘಾಟಿಸಿದರು.
ಉಡುಪಿ: ನಗರದ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯ ಎರಡನೇ ಮಹಡಿಯಲ್ಲಿ ಯು.ಎಸ್. ನಾಯಕ್ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಾಣಗೊಂಡ ಪಾಂಗಾಳ ರಬೀಂದ್ರ ನಾಯಕ್ ಸ್ಮಾರಕ ಸಭಾಭವನವನ್ನು ಸಂಸ್ಥೆಯ ಟ್ರಸ್ಟಿ ಸೀತಾರಾಮ ನಾಯಕ್ ಉದ್ಘಾಟಿಸಿದರು.ಉಡುಪಿ ಶಾಸಕ ಯಶಪಾಲ್ ಎ. ಸುವರ್ಣ ಮಾತನಾಡಿ ಟ್ರಸ್ಟ್‌ನ ಸಮಾಜಮುಖಿ ಸೇವಾಕಾರ್ಯವನ್ನು ಶ್ಲಾಘಿಸಿದರು. ಉಡುಪಿ ಡಯಟ್ ಪ್ರಾಂಶುಪಾಲ ಡಾ.ಅಶೋಕ ಕಾಮತ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಯಲ್ಲಮ್ಮ, ಹಿರಿಯ ಪರಿಸರವಾದಿ ರವೀಂದ್ರನಾಥ ಶ್ಯಾನ್ ಭಾಗ್, ಟ್ರಸ್ಟಿ ಸುರೇಶ ನಾಯಕ್, ನಿವೃತ್ತ ದೈಹಿಕ ಶಿಕ್ಷಕ ಪರಿವೀಕ್ಷಣಾಧಿಕಾರಿ ವಿಶ್ವನಾಥ ಬಾಯರಿ, ಎಲ್ಐಸಿಯ ಕಂಡ್ಲೂರು ಪುಂಡಲೀಕ ಪ್ರಭು, ಇಲಾಖಾ ಟಿಪಿಇಒ ರವೀಂದ್ರ ನಾಯ್ಕ್, ಬಿಆರ್‌ಸಿ ಸಂಯೋಜಕ ಶೇಖರ್ ಭೋವಿ, ಕಚೇರಿಯ ವ್ಯವಸ್ಥಾಪಕ ಸಂತೋಷ್, ಶಿಕ್ಷಕ ಸಂಘದ ಪದಾಧಿಕಾರಿಗಳಾದ ಸಂಜೀವ ನಾಯಕ್, ಕಿರಣ್ ಕುಮಾರ್ ಕಟಪಾಡಿ ಮುಂತಾದವರು ಹಾಜರಿದ್ದರು.ಟ್ರಸ್ಟ್ ವತಿಯಿಂದ ನಿರ್ಮಿಸಲ್ಪಟ್ಟ ಈ ಸಭಾಭವನದಲ್ಲಿ ಸುಮಾರು 125 ಮಂದಿಗೆ ಆಸನ ವ್ಯವಸ್ಥೆ ಇದ್ದು ಶಿಕ್ಷಣ ಇಲಾಖೆಯ ಸಭೆ,ಕಾರ್ಯಾಗಾರ, ಉಪನ್ಯಾಸ ಕಾರ್ಯಕ್ರಮಗಳಿಗೆ ಅನುಕೂಲವಾಗುವಂತೆ ಸುಸಜ್ಜಿತವಾಗಿ ನಿರ್ಮಿಸಲಾಗಿದೆ.