ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಿಡಲಾಗುತ್ತಿದೆ. ಈ ನಿಟ್ಟಿನಲ್ಲಿ ನೀವು ನಾಯಕತ್ವ ಅಳವಡಿಸಿಕೊಳ್ಳಬೇಕು
ಕನ್ನಡಪ್ರಭ ವಾರ್ತೆ ಮೈಸೂರು
ಸಂಸ್ಕೃತಿ ಉಳಿಸುವ ಕೆಲಸ ಮಹಿಳೆಯರಿಂದ ಮಾತ್ರ ಸಾಧ್ಯ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.ನಗರದ ಬೋಗಾದಿ ರಸ್ತೆಯಲ್ಲಿರುವ ಕುದುರೆ ಮಾಳದ ಸಮುದಾಯ ಭವನದದಲ್ಲಿ ಮೈಸೂರು ಮಹಾನಗರ ಪಾಲಿಕೆ ಮತ್ತು ಜ್ಞಾನಜ್ಯೋತಿ ಸಂಸ್ಥೆ ಆರಂಭಿಸಿರುವ ನಗರ ಜೀವನೋಪಾಯ ಕೇಂದ್ರವನ್ನು (ಪೂರ್ವ) ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಕೌಶಲ್ಯ ವೃದ್ಧಿಸಿಕೊಳ್ಳಿ. ಮಹಿಳೆಯರಿಗೆ ನಾಯಕತ್ವದ ಕೊರತೆ ಇದೆ ಅದನ್ನು ರೂಢಿಸಿಕೊಳ್ಳಿ. ಭಾರತೀಯ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ನಾಯಕತ್ವ ವೃದ್ದಿಸಿಕೊಳ್ಳುವುದು ಬಹಳ ಮುಖ್ಯ ಎಂದರು.ರಾಜಕೀಯದಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಿಡಲಾಗುತ್ತಿದೆ. ಈ ನಿಟ್ಟಿನಲ್ಲಿ ನೀವು ನಾಯಕತ್ವ ಅಳವಡಿಸಿಕೊಳ್ಳಬೇಕು. ಇಲ್ಲಿ ನಿರ್ಮಿಸಿರುವ ಕೇಂದ್ರಕ್ಕೆ ಮೂಲ ಸೌಕರ್ಯ ನೀಡುತ್ತೇವೆ. ವಿಕಸಿತ ಭಾರತದ ಮೂಲಕ ಸೌಲಭ್ಯಗಳನ್ನು ಜನರು ಉತ್ತಮವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.ಮಾಜಿ ಮೇಯರ್ ಭಾಗ್ಯವತಿ, ವಲಯ-4ರ ಆಯುಕ್ತ ಮಹೇಶ್, ಹೆಚ್ಚುವರಿ ಆಯುಕ್ತೆ ಕುಸುಮರಾಣಿ, ಜ್ಞಾನಜ್ಯೋತಿ ಸಂಸ್ಥೆ ಕಾರ್ಯದರ್ಶಿ ಎಂ.ಎಸ್. ಹೇಮಾವತಿ ಮೊದಲಾದವರು ಇದ್ದರು.