ಸಾರಾಂಶ
ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು ಹಾಗೂ ಫಾದರ್ ಮುಲ್ಲರ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಬಿ.ಎಸ್ಸಿ ನರ್ಸಿಂಗ್ ೪ನೇ ಬ್ಯಾಚ್, ಬಿ.ಎಸ್ಸಿ ಅನಸ್ತೇಶಿಯಾ ಹಾಗೂ ಆಪರೇಶನ್ ಥಿಯೇಟರ್ ಟೆಕ್ನೋಲಜಿ, ಮೆಡಿಕಲ್ ಇಮೇಜಿಂಗ್ ಟೆಕ್ನೋಲಜಿ ಕೋರ್ಸ್‌ಗಳ ಉದ್ಘಾಟನಾ ಸಮಾರಂಭ ಶುಕ್ರವಾರ ಕಾಲೇಜಿನ ಪ್ಲೋರೆನ್ಸ್ ನೈಂಟಿಗೆಲ್ ಸಭಾಂಗಣದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ತುಂಬೆ ಫಾದರ್ ಮುಲ್ಲರ್ ನರ್ಸಿಂಗ್ ಕಾಲೇಜು ಹಾಗೂ ಫಾದರ್ ಮುಲ್ಲರ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಬಿ.ಎಸ್ಸಿ ನರ್ಸಿಂಗ್ ೪ನೇ ಬ್ಯಾಚ್, ಬಿ.ಎಸ್ಸಿ ಅನಸ್ತೇಶಿಯಾ ಹಾಗೂ ಆಪರೇಶನ್ ಥಿಯೇಟರ್ ಟೆಕ್ನೋಲಜಿ, ಮೆಡಿಕಲ್ ಇಮೇಜಿಂಗ್ ಟೆಕ್ನೋಲಜಿ ಕೋರ್ಸ್‌ಗಳ ಉದ್ಘಾಟನಾ ಸಮಾರಂಭ ಶುಕ್ರವಾರ ಕಾಲೇಜಿನ ಪ್ಲೋರೆನ್ಸ್ ನೈಂಟಿಗೆಲ್ ಸಭಾಂಗಣದಲ್ಲಿ ನಡೆಯಿತು.ಮುಖ್ಯಅತಿಥಿ ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್ ಮಾಜಿ ನಿರ್ದೇಶಕ ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಭಾಗವಹಿಸಿ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಸೇವೆ ಮಾಡುವುದು ದೇವರು ಕೊಟ್ಟ ಅವಕಾಶವಾಗಿದ್ದು, ದಾದಿಯರ ಕರ್ತವ್ಯ ನಿರ್ವಹಣೆಗೆ ಸಂಬಂಧ ಹಾಗೂ ಸಂವಹನ ಅತಿ ಅಗತ್ಯವಾಗಿದೆ. ರೋಗಿಗಳಿಗೆ ಪ್ರೀತಿಯುತ ಆರೈಕೆಯ ಮಾತುಗಳು ಅವರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಾಣುತ್ತದೆ ಎಂದರು.ಮಂಗಳೂರು ಫಾದರ್ ಮುಲ್ಲರ್ ಚಾರಿಟೇಬಲ್ ಇನ್‌ಸ್ಟಿಟ್ಯೂಶನ್ಸ್ ನಿರ್ದೇಶಕ ಪಾವೋಸ್ತಿನ್ ಲುಕಾಸ್ ಲೋಬೊ ಅಧ್ಯಕ್ಷತೆ ವಹಿಸಿ ಮಾತನಾಡಿ, ದಾದಿಯ ಕರ್ತವ್ಯ ನಿರ್ವಹಣೆಯ ಸಂದರ್ಭ ಜ್ಞಾನ, ಕೌಶಲ್ಯ ಹಾಗೂ ಮೌಲ್ಯ ಎಂಬ ಮೂರು ಅಂಶಗಳ ಕುರಿತು ಅರಿತುಕೊಳ್ಳುವುದು ಅಗತ್ಯ ಎಂದು ಹೇಳಿದರು.ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕಿರಣ್ ಶೆಟ್ಟಿ, ನರ್ಸಿಂಗ್ ಕಾಲೇಜು ಉಪಪ್ರಾಂಶುಪಾಲೆ ಪ್ರೊ.ಜಾನೆಟ್ ಸಿಕ್ವೇರಾ ವೇದಿಕೆಯಲ್ಲಿದ್ದರು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಡಾ.ಮೈಕಲ್ ಸಾಂತ್ ಮಯೂರ್ ಉಪಸ್ಥಿತರಿದ್ದರು. ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ ಸ್ವಾಗತಿಸಿದರು. ತುಂಬೆ ಫಾದರ್ ಮುಲ್ಲರ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಶಿವಶಂಕರ್ ಎ.ಆರ್. ವಂದಿಸಿದರು. ನಿಶಾ ಸಿಲ್ವಿಯಾ ಲೋಬೊ ಕಾರ್ಯಕ್ರಮ ನಿರ್ವಹಿಸಿದರು.