ಪಠ್ಯದಲ್ಲಿ ಕೆಂಪೇಗೌಡರ ಸಾಧನೆಗಳ ಪಾಠ ಸೇರಿಸಿ

| Published : Jul 08 2024, 12:31 AM IST

ಸಾರಾಂಶ

ಮಾಗಡಿ: ಕೆಂಪೇಗೌಡರು ನಾಡಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದು ಅವರ ಸಾಧನೆಗಳನ್ನು ಒಳಗೊಂಡ ಪಾಠವನ್ನು ಸರ್ಕಾರ ಶಾಲಾ ಹಂತದಿಂದ ಉನ್ನತ ಶಿಕ್ಷಣದವರಗೂ ಪಠ್ಯಕ್ರಮದಲ್ಲಿ ಸೇರಿಸಬೇಕಿದೆ ಎಂದು ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಪೀಠಾಧ್ಯಕ್ಷರಾದ ನಂಜಾವಧೂತ ಮಹಾಸ್ವಾಮೀಜಿ ಆಗ್ರಹಿಸಿದರು.

ಮಾಗಡಿ: ಕೆಂಪೇಗೌಡರು ನಾಡಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದು ಅವರ ಸಾಧನೆಗಳನ್ನು ಒಳಗೊಂಡ ಪಾಠವನ್ನು ಸರ್ಕಾರ ಶಾಲಾ ಹಂತದಿಂದ ಉನ್ನತ ಶಿಕ್ಷಣದವರಗೂ ಪಠ್ಯಕ್ರಮದಲ್ಲಿ ಸೇರಿಸಬೇಕಿದೆ ಎಂದು ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಪೀಠಾಧ್ಯಕ್ಷರಾದ ನಂಜಾವಧೂತ ಮಹಾಸ್ವಾಮೀಜಿ ಆಗ್ರಹಿಸಿದರು.

ಮಾಗಡಿ ರಸ್ತೆ ತಾವರೆಕೆರೆಯಲ್ಲಿ ಭಾನುವಾರ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾಡಪ್ರಭು ಕೆಂಪೇಗೌಡರು ಕೇವಲ ಸಾಮಂತರಷ್ಟೇ ಅಲ್ಲದೆ ಮಹಾಪ್ರಭುಗಳಾಗಿದ್ದರು. ನಾಡಿನ ಜನತೆಗೆ ಪೂರಕವಾದ ಕೆರೆಕಟ್ಟೆ, ದೇಗುಲ, ಕೋಟೆಗಳ ನಿರ್ಮಾಣದ ಜೊತೆಗೆ ಸರ್ವ ಜನಾಂಗವನ್ನು ಸಮವಾಗಿ ಕಾಣುವ ವ್ಯಾಪಾರ ವಹಿವಾಟಿಗೆ ಪೂರಕವಾದ ಅಕ್ಕಿಪೇಟೆ, ಚಿಕ್ಕಪೇಟೆ, ಕುಂಬಾರಪೇಟೆ, ಮಡಿವಾರಳ ಪೇಟೆ, ಮಾಮೂಲ್ ಪೇಟೆ ಹೀಗೆ ಹಲವಾರು ಪೇಟೆಗಳನ್ನು ನಿರ್ಮಿಸಿ ಸರ್ವ ಜನಾಂಗದ ಶಾಂತಿಯ ತೋಟದ ಮಾದರಿಯನ್ನು ಕಟ್ಟಿಕೊಟ್ಟ ಕೆಂಪೇಗೌಡರ ಹೆಸರಿನಲ್ಲಿ ಪಠ್ಯದಲ್ಲಿ ಸೇರಿಸುವ ಕೆಲಸ ಮಾಡಬೇಕಿದೆ ಎಂದು ಒತ್ತಾಯಿಸಿದರು.

ಎಲ್ಲ ಸಮುದಾಯದವರು ಧರ್ಮದವರು ಭಾಷಿಕರು ಒಟ್ಟಾಗಿ ಬಾಳಿ ಬದುಕುವ ಮೂಲಕ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಒಟ್ಟಾಗಿ ಮಾಡುವುದರ ಮೂಲಕ ಕೆಂಪೇಗೌಡರನ್ನು ನಿರಂತರವಾಗಿ ಗೌರವಿಸುತ್ತಿದ್ದಾರೆ. ಮುಂದಿನ ಬಾರಿ ತಾವರೆಕೆರೆಯಲ್ಲಿ ಕೆಂಪೇಗೌಡರ ಬೃಹತ್ ಪುತ್ಥಳಿಯನ್ನು ನಿರ್ಮಿಸುವುದರ ಮೂಲಕ ಎಲ್ಲ ಸಮುದಾಯದವರು ಸೇರಿ ವಿಜೃಂಭಣೆಯಿಂದ ಕೆಂಪೇಗೌಡರ ಜಯಂತಿಯನ್ನು ಆಚರಿಸುವಂತಾಗಲಿ ಎಂದು ಸ್ವಾಮೀಜಿ ತಿಳಿಸಿದರು.

ಕಾರ್ಯಕ್ರಮದಲ್ಲಿ ತಾವರೆಕೆರೆ ಕಾಳಪ್ಪಸ್ವಾಮಿ ಮಠದ ರೇವಣಸಿದ್ದಯ್ಯ ಸ್ವಾಮೀಜಿ, ತಾವರೆಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಕೆಂಪೇಗೌಡ, ಗ್ರಾಮಸ್ಥರಾದ ಟಿ.ಎಲ್.ಚಂದ್ರಶೇಖರ್, ಶಂಕರೇಗೌಡ, ಟಿ.ಎ.ಮೂರ್ತಿ, ಗಂಗನರಸಯ್ಯ ಶಿಕ್ಷಕ ಚಿಕ್ಕವೀರಯ್ಯ, ಲಕ್ಷ್ಮೀಶ್ ಗೌಡ, ವೆಂಕಟೇಶ್, ಎಸ್‌ಎಲ್‌ಎನ್‌ ನವೀನ್, ಕಾಂತರಾಜು ಇತರರು ಭಾಗವಹಿಸಿದ್ದರು.

(ಫೋಟೋ ಕ್ಯಾಫ್ಷನ್‌)

ಮಾಗಡಿ ರಸ್ತೆ ತಾವರೆಕೆರೆಯಲ್ಲಿ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಿತು.