ದಾಂಡೇಲಿಯಲ್ಲಿ ಆದಾಯ ತೆರಿಗೆ, ಟಿಡಿಎಸ್ ಜಾಗೃತಿ ಕಾರ್ಯಾಗಾರ

| Published : Oct 19 2024, 12:33 AM IST / Updated: Oct 19 2024, 12:34 AM IST

ದಾಂಡೇಲಿಯಲ್ಲಿ ಆದಾಯ ತೆರಿಗೆ, ಟಿಡಿಎಸ್ ಜಾಗೃತಿ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಸಂಬಳದ ಮೇಲೆ ಟಿಡಿಎಸ್‌ನ್ನು ಉದ್ಯೋಗದಾತರು ಕಡಿತ ಮಾಡುತ್ತಾರೆ.

ದಾಂಡೇಲಿ: ಆದಾಯ ತೆರಿಗೆ ಟಿಡಿಎಸ್ ವಿಭಾಗ ಹುಬ್ಬಳ್ಳಿ ಮತ್ತು ಹಳಿಯಾಳ ಅರಣ್ಯ ಇಲಾಖೆ ವಿಭಾಗದ ಸಹಯೋಗದಲ್ಲಿ ದಾಂಡೇಲಿ ಅರಣ್ಯ ಇಲಾಖೆಯ ಹಾರ್ನ್‌ಬಿಲ್ ಭವನದಲ್ಲಿ ಶುಕ್ರವಾರ ಆದಾಯ ಸರ್ಕಾರಿ ನೌಕರರಿ ಹಾಗೂ ಲೆಕ್ಕಪರಿಶೋಧಕರಿಗೆ ತೆರಿಗೆ ಜಾಗೃತಿ ಕಾರ್ಯಾಗಾರ ನಡೆಯಿತು.ಹುಬ್ಬಳ್ಳಿಯ ಟಿಡಿಎಸ್ ವಿಭಾಗದ ಜಂಟಿ ಆಯುಕ್ತ ರವಿಂದ್ರ ಹತ್ತಳ್ಳಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಸಂಬಳದ ಮೇಲೆ ಟಿಡಿಎಸ್‌ನ್ನು ಉದ್ಯೋಗದಾತರು ಕಡಿತ ಮಾಡುತ್ತಾರೆ. ಬ್ಯಾಂಕ್‌ಗಳು ಗ್ರಾಹಕರು ಇಡುವ ಠೇವಣಿಗಳ ಮತ್ತು ಬಾಂಡ್‌ಗಳ ಮೇಲೆ ಬರುವ ಬಡ್ಡಿಯ ಮೇಲೆ ಟಿಡಿಎಸ್ ಕಡಿತ ಮಾಡುತ್ತಾರೆ. ವೃತ್ತಿಪರ ಶುಲ್ಕಗಳು, ಸಂಬಳ, ಒಪ್ಪಂದದ ಪಾವತಿಗಳು, ಸ್ವತಂತ್ರ ಕೆಲಸಗಳ ಟಿಡಿಎಸ್ ಕುರಿತು ಮಾಹಿತಿ ನೀಡಿದರು.

ಹುಬ್ಬಳ್ಳಿಯ ಉಪ ಆಯುಕ್ತ ಟಿಡಿಎಸ್ ವಿಭಾಗದ ಕೀರ್ತಿ ನಾಯ್ಕ ಅವರು, ಹಳಿಯಾಳ, ದಾಂಡೇಲಿ, ಜೋಯಿಡಾ ವಲಯದಲ್ಲಿ ಆದಾಯ ಮೂಲಗಳು ಬೆಳೆಯುತ್ತಿವೆ. ಅದಕ್ಕಾಗಿ ಇಲ್ಲಿ ತೆರಿಗೆ ಕುರಿತು ಮಾಹಿತಿ ನೀಡುವುದು ಅತಿ ಅವಶ್ಯ. ನೌಕರ ವಲಯದ ಮತ್ತು ನೌಕರರಿಗೆ ನೀಡುತ್ತಿರುವ ಸಂಬಳ ಹಾಗೂ ಟಿಡಿಎಸ್ ಕಡಿತ ಮಾಡುವ ಕುರಿತು ಮಾಹಿತಿ ನೀಡಿದರು. ತೆರಿಗೆ ಸಂಬಂಧಿಸಿದಂತೆ ೧೯೨ ಮತ್ತು ೧೯೪ರಿಂದ ೧೯೪ ಕಲಂಗಳ ಕುರಿತು ಮಾಹಿತಿ ನೀಡಿದರು.

ಹುಬ್ಬಳ್ಳಿಯ ಆದಾಯ ತೆರಿಗೆಯ ಇನ್ಸ್‌ಪೆಕ್ಟರ್ ಶಿವಕುಮಾರ, ಲೆಕ್ಕಪರಿಶೋಧಕ ಸುಬ್ರಹ್ಮಣ್ಯ ಗಾಂವಕರ, ದಾಂಡೇಲಿ ಟಿಂಬರ್ ಡಿಪೋದ ಎಸಿಎಫ್ ಗುರುದತ್ತ ಕೆ. ಶೇಟ್ ಮಾತನಾಡಿದರು. ಕಾರ್ಯಾಗಾರದ ಯಶಸ್ವಿಗೆ ಅರಣ್ಯ ಇಲಾಖೆ ಸಿಬ್ಬಂದಿ, ತೆರಿಗೆ ಇಲಾಖೆಯ ಸಿಬ್ಬಂದಿ ಹಾಗೂ ವಿನಾಯಕ ಬಾರಕೇರಿ ಸಹಕರಿಸಿದರು.

ಮೂರು ಕ್ಷೇತ್ರದಲ್ಲೂ ಗೆಲುವು ನಮ್ದೇ: ಸಚಿವ ಮಂಕಾಳ ವೈದ್ಯ

ಕಾರವಾರ: ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿಗಳೇ ಗೆಲುತ್ತಾರೆ. ಉಪಚುನಾವಣಾ ಕ್ಷೇತ್ರಗಳ ಗೆಲುವಿಗೆ ಅಗತ್ಯ ಸಹಾಯ, ಸಹಕಾರವನ್ನು ನೀಡುತ್ತೇವೆ ಎಂದು ಸಚಿವ ಮಂಕಾಳು ವೈದ್ಯ ವಿಶ್ವಾಸ ವ್ಯಕ್ತಪಡಿಸಿದರು.ಪತ್ರಕರ್ತರ ಜತೆ ಮಾತನಾಡಿದ ಅವರು, ಕ್ಷೇತ್ರದ ಅಭ್ಯರ್ಥಿ ಗೆಲುವಿಗೆ ನಮ್ಮ ಕೈಯಲ್ಲಾದ ಪ್ರಯತ್ನ ಮಾಡುತ್ತೇವೆ. ನಮ್ಮ ಸರ್ಕಾರದಿಂದ ಜನರಿಗೆ ನೀಡಿರುವ ಯೋಜನೆಗಳನ್ನು ನಮ್ಮ ಅಭ್ಯರ್ಥಿ ಪರವಾಗಿ ತಿಳಿಸುತ್ತೇವೆ. ಇದುವರೆಗೂ ಯಾವುದೇ ಕ್ಷೇತ್ರದ ಉಸ್ತುವಾರಿ ನೀಡಿಲ್ಲ. ಹೈಕಮಾಂಡ್ ಸೂಚನೆಯಂತೆ ನಾವೆಲ್ಲ ಕಾರ್ಯನಿರ್ವಹಿಸುತ್ತೇವೆ ಎಂದರು.ಇದೇ‍ ವೇಳೆ ಕಳೆದ ೨೦ ದಿನದಿಂದ ಅಪರ ಜಿಲ್ಲಾಧಿಕಾರಿ ಹುದ್ದೆ ಖಾಲಿ ಇರುವ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಿದ ಸಚಿವರು, ಅಧಿಕಾರಿಗಳು ವರ್ಗಾವಣೆಯಾದ ಬಳಿಕ ಹೊಸಬರು ಬರುವುದು, ಹಳಬರು ಹೋಗುವುದು ಸಾಮಾನ್ಯವಾಗಿದೆ. ವರ್ಗಾವಣೆಯಾದವರು ಆದಷ್ಟು ಬೇಗ ಹಾಜರಾಗಬಹುದು ಎಂದರು.

ಈ ಹಿಂದೆ ತಿಂಗಳ ಕಾಲ ಹುದ್ದೆ ಖಾಲಿಯಿತ್ತು. ೨೦ ದಿನ ಆದರೂ ಬರದಿರುವುದು ದೊಡ್ಡ ವಿಷಯ ಅಲ್ಲ. ಅವರು ಅಧಿಕಾರ ಸ್ವೀಕರಿಸಿಲ್ಲ. ಹುದ್ದೆ ಖಾಲಿಯಿದೆ ಎಂದು ಯಾರಿಗಾದರೂ ಸಮಸ್ಯೆ ಆಗಿದೆಯೇ? ಜಿಲ್ಲಾಡಳಿತದ ಕೆಲಸಗಳು ಎಲ್ಲವೂ ಎಂದಿನಂತೆ ನಡೆಯುತ್ತಿವೆ. ಈ ಹುದ್ದೆಗೆ ವರ್ಗಾವಣೆಯಾದವರು ಆದಷ್ಟು ಬೇಗ ಹಾಜರಾಗಬಹುದು ಎಂದರು.