ಎಲ್ಲಾ ಭಾರತೀಯರು ಮಹಾತ್ಮ ಗಾಂಧಿಯವರ ಜನ್ಮ ವಾರ್ಷಿಕೋತ್ಸವವನ್ನು ಪ್ರೀತಿ ಮತ್ತು ಕೃತಜ್ಞತೆಯಿಂದ ಆಚರಿಸುತ್ತಾರೆ. ಸತ್ಯ, ಅಹಿಂಸೆ ಮತ್ತು ಪ್ರಾಮಾಣಿಕತೆಯ ತತ್ವಗಳು ಇನ್ನೂ ಶಾಶ್ವತವಾಗಿ ಉಳಿದಿವೆ ಮತ್ತು ಗಾಂಧಿಯವರು ಎಲ್ಲಾ ಭಾರತೀಯರ ಹೃದಯಗಳಲ್ಲಿ ವಾಸಿಸುತ್ತಾರೆ. ರಾಷ್ಟ್ರಪಿತನನ್ನು ಹೊರತುಪಡಿಸಿ ಅವರು ಜನಸಾಮಾನ್ಯರ ನಾಯಕರಾಗಿದ್ದರು. ಭಾರತದ ರಾಜಕೀಯ ಇತಿಹಾಸದಲ್ಲಿ, ಗಾಂಧಿಯವರ ಸಾಧನೆಗಳು ಇನ್ನೂ ವಿಶಿಷ್ಟ ಸ್ಥಾನದಲ್ಲಿ ಉಳಿದಿವೆ ಎಂದು ತಿಳಿಸಿದರು.
ಕನ್ನಡಪ್ರಭ ವಾರ್ತೆ ಆಲೂರು
ಮಹಾತ್ಮ ಗಾಂಧೀಜಿ, ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಸಂದೇಶವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಚಿಕ್ಕಕಣಗಾಲು ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಘು ಹೇಳಿದರು.ತಾಲೂಕಿನ ಪಾಳ್ಯ ಹೋಬಳಿ ತಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಕಣಗಾಲು ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆ ಅಂಗವಾಗಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಎಲ್ಲಾ ಭಾರತೀಯರು ಮಹಾತ್ಮ ಗಾಂಧಿಯವರ ಜನ್ಮ ವಾರ್ಷಿಕೋತ್ಸವವನ್ನು ಪ್ರೀತಿ ಮತ್ತು ಕೃತಜ್ಞತೆಯಿಂದ ಆಚರಿಸುತ್ತಾರೆ. ಸತ್ಯ, ಅಹಿಂಸೆ ಮತ್ತು ಪ್ರಾಮಾಣಿಕತೆಯ ತತ್ವಗಳು ಇನ್ನೂ ಶಾಶ್ವತವಾಗಿ ಉಳಿದಿವೆ ಮತ್ತು ಗಾಂಧಿಯವರು ಎಲ್ಲಾ ಭಾರತೀಯರ ಹೃದಯಗಳಲ್ಲಿ ವಾಸಿಸುತ್ತಾರೆ. ರಾಷ್ಟ್ರಪಿತನನ್ನು ಹೊರತುಪಡಿಸಿ ಅವರು ಜನಸಾಮಾನ್ಯರ ನಾಯಕರಾಗಿದ್ದರು. ಭಾರತದ ರಾಜಕೀಯ ಇತಿಹಾಸದಲ್ಲಿ, ಗಾಂಧಿಯವರ ಸಾಧನೆಗಳು ಇನ್ನೂ ವಿಶಿಷ್ಟ ಸ್ಥಾನದಲ್ಲಿ ಉಳಿದಿವೆ ಎಂದು ತಿಳಿಸಿದರು.
ಶಿಕ್ಷಕ ಯೋಗೇಶ್ ಮಾತನಾಡಿ, ಪ್ರತಿ ವರ್ಷ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಅಚರಣೆ ಮಾಡುವಂತೆ ನಾವು ಮತ್ತೊಬ್ಬರು ಶ್ರೇಷ್ಠ ಮುತ್ಸದ್ಧಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜಯಂತಿಯನ್ನು ಆಚರಣೆ ಮಾಡುತ್ತೇವೆ. ಅವರ ಜನ್ಮ ದಿನವೂ ಸಹ ಇದೇ ಅಕ್ಟೋಬರ್ 2ರಂದು. ಲಾಲ್ ಬಹದ್ಧೂರ್ ಶಾಸ್ತ್ರಿ ಈ ದೇಶ ಕಂಡ ಅಪ್ರತಿಮ ನಾಯಕ. ಸಜ್ಜನ ನೇತಾರ. ಗಾಂಧೀಜಿಯವರನ್ನು ನೆನೆಯುವಂತೆ, ಈ ದಿನದಂದು ನಾವು ಅವರ ಕೊಡುಗೆಗಳನ್ನು ಸಹ ನೆನೆಯುವ ದಿನವು ಹೌದು. ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧೀಜಿ ಅನುಯಾಯಿಯಾಗಿ ಅವರ ಕೊಡುಗೆಯು ಅಪಾರವಾಗಿದೆ. ಬಡತನದಲ್ಲೇ ಹುಟ್ಟಿ, ಬಡತನದಲ್ಲೇ ಬೆಳೆದು, ಬಡತನದಲ್ಲೇ ನಿಧನರಾದ ಭಾರತದ ಏಕೈಕ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಎಂದರೆ ತಪ್ಪಾಗಲಾರದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣ, ಸದಸ್ಯರಾದ ಆನಂದ್, ನಿಂಗರಾಜು, ಶಾಲಾ ಶಿಕ್ಷಕಿಯರಾದ ಭಾವನಿ, ಸುಮಿತ್ರಾ, ಮಹೇರಾ ಭಾನು, ಪ್ರವೀಣ್, ಸೇರಿದಂತೆ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.