ಶರಣರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ: ಶ್ರೀಗಳು

| Published : May 11 2024, 01:33 AM IST / Updated: May 11 2024, 01:12 PM IST

ಶರಣರ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಿ: ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಶರಣರ ಕಾಯಕ ನಿಷ್ಠೆ ಶರಣರ ಆದರ್ಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಂಬಿಗರ ಚೌಡಯ್ಯ ಪೀಠದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ಹೇಳಿದರು.

 ರಬಕವಿ- : ಬನಹಟ್ಟಿ : ಶರಣರ ಕಾಯಕ ನಿಷ್ಠೆ ಶರಣರ ಆದರ್ಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಂಬಿಗರ ಚೌಡಯ್ಯ ಪೀಠದ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮೀಜಿ ಹೇಳಿದರು.

ಬನಹಟ್ಟಿಯ ಮುಮುಕ್ಷ ಮಠದಲ್ಲಿ ಬಸವ ಸಮೀತಿಯಿಂದ ಬಸವ ಜಯಂತಿ ನಿಮಿತ್ತ ಹಮ್ಮಿಕೊಂಡ ವಚನ ದರ್ಶನ ಪ್ರವನ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.

ನಡೆ ಪರುಷ ನುಡಿ ಪರುಷ, ಮಹಾತ್ಮರು ನಡೆ ಲಿಂಗ, ಮಹಾತ್ಮರ ವಾಣಿ ಲಿಂಗ, ಮಹಾತ್ಮರ ಆದರ್ಶ ನಮಗೆ ಆಶೀರ್ವಾದ, ಮಹಾತ್ಮರ ಸಂಘದಲ್ಲಿ ಹಾಗೂ ಸತ್ಸಂಗದಲ್ಲಿ ಎಲ್ಲರೂ ಭಾಗ್ಯವಂತರು ಹೇಳಿದರು,.

ಮಹದೇವಾನಂದ ಮಹಾಸರಸ್ವತಿ ಸ್ವಾಮೀಜಿ ಮಾತನಾಡಿ, ಮಾನವ ಜನ್ಮ ದೊಡ್ಡದು. ಅಧ್ಯಾತ್ಮಿಕದ ವಿಚಾರ, ಗುರು ಧ್ಯಾನ, ಶಿವ ಧ್ಯಾನ, ಶರಣರ ನಡೆ, ಶರಣರ ಮಾರ್ಗದಲ್ಲಿ ಸಾಗಬೇಕು. ಬಸವಣ್ಣವರ ವಚನಗಳು ಆಚರಣೆಯಲ್ಲಿ ಬರಬೇಕು. ದಯೆ ಧರ್ಮದ ಮೂಲವಯ್ಯ, ದಾನ, ಧರ್ಮ ಪರೋಪಕಾರ ಮಾಡಿ ಜನ್ಮ ಪಾವನ ಮಾಡಿಕೊಡಬೇಕೆಂದರು.

ಶರಣರ ಕಾಯಕದ ಕುರಿತು ಹಿರಿಯ ಕಲಾವಿದ ಮಲ್ಲಯ್ಯ ಹಿಡಕಲ್‌ಮಠ ಅನುಭಾವ ನೀಡಿದರು. ಪ್ರೊ.ವೈ.ಬಿ. ಕೊರಡೂರ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಸವ ಸಮೀತಿ ಅಧ್ಯಕ್ಷ ಶಂಕರ ಹೋಳಗಿ, ವೈ.ಬಿ. ಕೊರಡೂರ, ಶಂಕರ ಜಾಲಿಗಿಡದ, ಬಸಪ್ಪ ಕೊಣ್ಣೂರ, ರಾಮದಾಸ ಸಿಂಘನ, ಗುರಬಸಪ್ಪ ಚನಾಳ, ರಾಮಣ್ಣ ಭದ್ರನ್ನವರ, ಕಲ್ಲಪ್ಪ ಪತ್ತಾರ, ಚಿದಾನಂದ ಪತ್ತಾರ, ಶ್ರೀಶೈಲ ಗಣೇಶನವರ, ಈರಣ್ಣ ಶಿರಹಟ್ಟಿ, ಬಸವರಾಜ ಪಾಟೀಲ, ಶಿವಲಿಂಗ ಕರಲಟ್ಟಿ, ಶ್ರೀಶೈಲ ಮಡಿವಾಳ, ಮಹೇಶ ಬಂಡಿಗಣಿ, ಮಲ್ಲಿಕಾರ್ಜುನ ಜಾಲಿಕಟ್ಟಿ, ಮಲ್ಲೇಶಪ್ಪ ಕುಂಚನೂರ, ಪ್ರಕಾಶ ಬುರುಡ, ವಿಜಯ ಜವಳಗಿ ಸೇರಿದಂತೆ ಅನೇಕರು ಇದ್ದರು.