ಜನಸಂಖ್ಯೆಯಂತೆ ಕೃಷಿ ಉತ್ಪಾದನೆ ಹೆಚ್ಚಿಸಿ

| Published : Aug 26 2024, 01:41 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಳಕಲ್ಲ ಇಂದು ಜಗತ್ತಿನಲ್ಲಿಯೇ ಭಾರತದ ಜನಸಂಖ್ಯೆಯು ಹೆಚ್ಚುತ್ತಿದ್ದು, ಜನತೆಗೆ ಬೇಕಾದ ಆಹಾರ ಉತ್ಪಾದನೆ ಹೆಚ್ಚಾಗುತ್ತಿಲ್ಲ. ಇದು ಅತ್ಯಂತ ಕಳವಳಕಾರಿ ವಿಷಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವಿಶ್ರಾಂತ ಜಿಲ್ಲಾಧಿಕಾರಿ ಸಿದ್ದಣ್ಣ ಆಮದಿಹಾಳ ತಿಳಿಸಿದರು.

ಕನ್ನಡಪ್ರಭ ವಾರ್ತೆ ಇಳಕಲ್ಲ:

ಇಂದು ಜಗತ್ತಿನಲ್ಲಿಯೇ ಭಾರತದ ಜನಸಂಖ್ಯೆಯು ಹೆಚ್ಚುತ್ತಿದ್ದು, ಜನತೆಗೆ ಬೇಕಾದ ಆಹಾರ ಉತ್ಪಾದನೆ ಹೆಚ್ಚಾಗುತ್ತಿಲ್ಲ. ಇದು ಅತ್ಯಂತ ಕಳವಳಕಾರಿ ವಿಷಯವಾಗಿದೆ ಎಂದು ಕೊಪ್ಪಳ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ವಿಶ್ರಾಂತ ಜಿಲ್ಲಾಧಿಕಾರಿ ಸಿದ್ದಣ್ಣ ಆಮದಿಹಾಳ ತಿಳಿಸಿದರು.

ಇಳಕಲ್ಲ ನಗರದ ವಿಜಯ ಮಹಾಂತೇಶ್ವರ ಶ್ರೀಮಠದಲ್ಲಿ ಶರಣ ಸಂಸ್ಕೃತಿ ಮಹೋತ್ಸವದಲ್ಲಿ ಶಂಕ್ರಣ್ಣ ನಾಗರಾಳ ಒಣ ಬೇಸಾಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಇಂದು ಭಾರತ ದೇಶದ ಜನಸಂಖ್ಯೆ ಹೆಚ್ಚಳ ಅಪಾಯಕಾರಿಯಾಗಿದ್ದು, ಅದರೊಂದಿಗೆ ಕೃಷಿ ಉದ್ದಿಮೆಯಲ್ಲಿ ರೃತರಿಗೆ ಹಾಗು ಯುವಕರಿಗೆ ಆಸಕ್ತಿ ಕಡಿಮೆಯಾಗಿದೆ. ಮುಂದೆ ಭಾರತ ದೇಶದಲ್ಲಿ ಆಹಾರದ ಕೊರತೆ ಆದರು ಆಗಬಹುದು. ಕಾರಣ, ನಾವುಗಳು ಜನಸಂಖ್ಯೆ ನಿಯಂತ್ರಣ ಮಾಡಬೇಕು ಅಥವಾ ಕೃಷಿ ಉತ್ಪಾದನೆಯನ್ನು ಹೆಚ್ಚಳ ಮಾಡಬೇಕು ಎಂದು ತಿಳಿಸಿದರು.ಇಳಕಲ್ಲ ಶ್ರೀಮಠ ರೃತರ ಕೃಷಿ ಉತ್ಪಾದನೆಯ ಹೆಚ್ಚಳಕ್ಕಾಗಿ ಪ್ರತಿ ವರ್ಷ ಮಲ್ಲಣ್ಣ ನಾಗರಾಳ ಅವರ ಒಣ ಬೇಸಾಯ ಪ್ರಶಸ್ತಿ ಕೊಟ್ಟು ಕೃಷಿ ಉತ್ಪಾದನೆ ಹೆಚ್ಚಳ ಮಾಡಲು ಪ್ರೊತ್ಸಾಹ ಮಾಡುತ್ತಿದೆ. ಯುವ ಜನಾಂಗ ಕೃಷಿಯತ್ತ ಒಲವು ತೋರಬೇಕು ಎಂಬುದಾಗಿದೆ ಎಂದು ತಿಳಿಸಿದರು.

ಗುಳೇದಗುಡ್ಡದ ಗುರುಸಿದ್ದೇಶ್ವರ ಶ್ರೀಮಠದ ಜಗದ್ಗುರು ಬಸವರಾಜ ಪಟ್ಟದಾರ್ಯ ಶ್ರೀಗಳು ಆಗಮಿಸಿ ತಮ್ಮ ಆಶೀರ್ವವಚನ ನೀಡಿದರು.

ವೇದಿಕೆಯಲ್ಲಿ ಮಲ್ಲಣ್ಣ ನಾಗರಾಳರ ಸುಪುತ್ರ ಮುತ್ತಣ್ಣ ನಾಗರಾಳ ಹಾಗು ಇತರರು ಉಪಸ್ಥಿತರಿದ್ದರು. ಮಲ್ಲಣ್ಣ ನಾಗರಾಳ ಒಣ ಬೇಸಾಯ ಪ್ರಶಸ್ತಿಯನ್ನು ಹುನಗುಂದದ ಹೊನ್ನಪ್ಪ ಶಿವಣ್ಣ ರೋಣದ ಅವರಿಗೆ ನೀಡಿ ಗೌರವಿಸಲಾಯಿತು. ಇದೇ ವೇಳೆ ಸಂಗೀತ ಸೇವೆ ಸಲ್ಲಿಸಿದ ಶಿಲ್ಪಾ ರಾಯಕರ ಹಾಗು ವಿಶ್ರಾಂತ ಆಹಾರ ಇಲಾಖೆಯ ಜಿಲ್ಲಾಧಿಕಾರಿ ಸದಾಶಿವ ಮಿರ್ಜಿ ಸಂಗೀತ ಸೇವೆಯನ್ನು ಶ್ರೀಮಠ ಗೌರವಿಸಿ ಸತ್ಕರಿಸಿತು. ಪ್ರವೀಣ ಮುದಗಲ್ಲ ಕಾರ್ಯಕ್ರಮ ನಿರೂಪಿಸಿದರು